- Kannada News Entertainment Sandalwood ಸಿಂಪಲ್ ಆಗಿ ನೆರವೇರಿತು ಅರ್ಜುನ್ ಸರ್ಜಾ ಕಟ್ಟಿಸಿದ ಆಂಜನೇಯ ಸ್ವಾಮಿ ದೇವಾಲಯದ ಕುಂಭಾಭಿಷೇಕ
ಸಿಂಪಲ್ ಆಗಿ ನೆರವೇರಿತು ಅರ್ಜುನ್ ಸರ್ಜಾ ಕಟ್ಟಿಸಿದ ಆಂಜನೇಯ ಸ್ವಾಮಿ ದೇವಾಲಯದ ಕುಂಭಾಭಿಷೇಕ
ಆಂಜನೇಯನಿಗೆ ಅದ್ಭುತವಾದ ಒಂದು ದೇವಸ್ಥಾನ ನಿರ್ಮಿಸಬೇಕು ಎಂಬುದು ಅರ್ಜುನ್ ಸರ್ಜಾ ಅನೇಕ ವರ್ಷಗಳ ಕನಸು. ಬಹಳ ಹಿಂದೆಯೇ ಆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಅಂತೂ ಈಗ ದೇವಾಲಯದ ಕೆಲಸ ಪೂರ್ಣಗೊಂಡಿದೆ. ಇಂದು ಅದರ ಕಾರ್ಯಕ್ರಮಗಳು ನಡೆದಿವೆ.
Updated on: Jul 01, 2021 | 7:33 PM

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬವೇ ಆಂಜನೇಯ ಸ್ವಾಮಿಯ ಭಕ್ತರು. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದ್ದಾರೆ ಅರ್ಜುನ್ ಸರ್ಜಾ.

ಆಂಜನೇಯನಿಗೆ ಅದ್ಭುತವಾದ ಒಂದು ದೇವಸ್ಥಾನ ನಿರ್ಮಿಸಬೇಕು ಎಂಬುದು ಅವರ ಅನೇಕ ವರ್ಷಗಳ ಕನಸು. ಬಹಳ ಹಿಂದೆಯೇ ಆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಅಂತೂ ಈಗ ದೇವಾಲಯದ ಕೆಲಸ ಪೂರ್ಣಗೊಂಡಿದೆ. ಇಂದು ಅದರ ಕಾರ್ಯಕ್ರಮಗಳು ನಡೆದಿವೆ.

‘ನನ್ನ ಬಹುದಿನಗಳ ಆಸೆಯಂತೆ, ನಮ್ಮ ಕುಟುಂಬದಿಂದ ನಿರ್ಮಾಣ ಆಗುತ್ತಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯ ಈಗ ಸಂಪೂರ್ಣ ಆಗಿದೆ. ಈ ದೇವಸ್ಥಾನದ ಕುಂಭಾಭಿಷೇಕ ಸಮಾರಂಭವನ್ನು ಜು.1 ಮತ್ತು ಜು.2ರಂದು ಚೆನ್ನೈನಲ್ಲಿ ಇಟ್ಟುಕೊಂಡಿದ್ದೇವೆ. ಸ್ನೇಹಿತರು, ಬಂಧುಗಳು ಹಾಗೂ ಭಕ್ತಾಧಿಗಳನ್ನು ಕರೆದು ತುಂಬ ಅದ್ದೂರಿಯಾಗಿ ಈ ಸಮಾರಂಭ ಮಾಡಬೇಕು ಎಂದುಕೊಂಡಿದ್ದೆ. ಆದರೆ, ಈಗಿರುವ ಕೊರೊನಾ ಪರಿಸ್ಥಿತಿಯಲ್ಲಿ, ಜನರ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾರನ್ನೂ ಆಹ್ವಾನಿಸೋಕೆ ಸಾಧ್ಯವಾಗುತ್ತಿಲ್ಲ’ ಎಂದು ಅರ್ಜುನ್ ಸರ್ಜಾ ಹೇಳಿದ್ದರು.

‘ಆದರೂ ಈ ಸಮಾರಂಭ ಜನರಿಗೆ ಮಿಸ್ ಆಗಬಾರದು ಎಂದು ಯೂಟ್ಯೂಬ್ ಮೂಲಕ ಜ.1 ಮತ್ತು 2ರಂದು ಲೈವ್ ಪ್ರಸಾರ ಮಾಡುತ್ತಿದ್ದೇವೆ. ಈ ಕೊರೊನಾ ಸಂಕಷ್ಟ ಮುಗಿದ ನಂತರ ನೀವು ಕುಟುಂಬ ಸಮೇತ ಬಂದು ನೇರವಾಗಿ ದೇವರ ದರ್ಶನ ಪಡೆದು, ಅನುಗ್ರಹಕ್ಕೆ ಪಾತ್ರರಾಗಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದರು,

ಅಂತೆಯೇ ಇಂದು ಸಿಂಪಲ್ ಆಗಿ ದೇವಾಲಯದ ಕಾರ್ಯಗಳು ನಡೆದಿವೆ.

ಮನೆಯರು ಹಾಗೂ ಆಪ್ಯರು ಮಾತ್ರ ಮದುವೆಗೆ ಆಗಮಿಸಿದ್ದರು ಎನ್ನಲಾಗಿದೆ.




