ಸೋನು ಸೂದ್ ಏರ್ಲಿಫ್ಟ್ ಮಾಡಿದ್ದ ಹಿತೇಶ್ ಶರ್ಮಾ ನಿಧನ; ಭಾವಪೂರ್ಣ ಪೋಸ್ಟ್ ಮೂಲಕ ಮಕ್ಕಳಲ್ಲಿ ಕ್ಷಮೆ ಕೇಳಿದ ಸೋನು
Sonu Sood: ಸೋನು ಸೂದ್ ಏರ್ ಲಿಫ್ಟ್ ಮಾಡಿದ್ದ ಹಿತೇಶ್ ಶರ್ಮಾ ಎಂಬುವವರು ದೀರ್ಘಕಾಲದಿಂದ ಕೊವಿಡ್ ವಿರುದ್ಧ ಹೋರಾಡಿ ನಿಧನರಾಗಿದ್ದಾರೆ. ಈ ಕುರಿತು ಸೋನು ಸೂದ್ ಸಂತಾಪ ಸೂಚಿಸಿದ್ದಾರೆ.
ಭಾರತ ಚಿತ್ರರಂಗದ ಖ್ಯಾತ ನಟ ಸೋನು ಸೂದ್ ಕೊರೊನಾ ಕಷ್ಟಕಾಲದಲ್ಲಿ ಅನೇಕರಿಗೆ ಸಹಾಯ ಮಾಡಿದ್ದಾರೆ. ಅದರಲ್ಲಿ ಹಿತೇಶ್ ಶರ್ಮಾ ಎಂಬುವವರನ್ನು ಜುಲೈನಲ್ಲಿ ಚಿಕಿತ್ಸೆಗಾಗಿ ಹೈದರಾಬಾದ್ನಿಂದ ದೆಹಲಿಗೆ ಏರ್ಲಿಫ್ಟ್ ಮಾಡಲಾಗಿತ್ತು. ಕೊವಿಡ್ ವಿರುದ್ಧ ಹೋರಾಡುತ್ತಿದ್ದ ಅವರು ನಿಧನರಾಗಿದ್ದು, ಸೋನು ಭಾವಪೂರ್ಣ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹಿತೇಶ್ ನಿಧನದ ಸುದ್ದಿಯನ್ನು ತಿಳಿಸಿದ ಸೋನು, ಮತ್ತೊಂದು ಟ್ವೀಟ್ನಲ್ಲಿ ಹಿತೇಶ್ ಅವರ ಮಕ್ಕಳು ಬಿಡಿಸಿದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ‘ನಿಮಗಾಗಿ ನಾನೆಂದಿಗೂ ಇರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
‘ಕೊವಿಡ್ ವಿರುದ್ಧ ಸೈನಿಕನಂತೆ ಹೋರಾಡಿದ ಇನ್ನೊಬ್ಬ ಹೋರಾಟಗಾರನನ್ನು ನಾವು ಕಳೆದುಕೊಂಡಿದ್ದೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರ. ಇವರನ್ನು ಚಿಕಿತ್ಸೆಗಾಗಿ ಹೈದರಾಬಾದ್ನಿಂದ ದೆಹಲಿಗೆ ಏರ್ಲಿಫ್ಟ್ ಮಾಡಿದ್ದೆವು. ನಿಮ್ಮನ್ನು ಬದುಕಿಸಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿತ್ತು. ನೀವು ನಮ್ಮೆಲ್ಲರ ಹೃದಯದಲ್ಲಿರುತ್ತೀರಿ. ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಸೋನು ಬರೆದುಕೊಂಡಿದ್ದಾರೆ.
ಹಿತೇಶ್ ಅವರ ಕುರಿತು ಸೋನು ಮಾಡಿದ ಟ್ವೀಟ್:
We lost another warrior! Rest in Peace my brother #HiteshSharma who fought his battle with Covid like a soldier! I had airlifted him from Delhi to Hyderabad in July for the treatment. I wish I could’ve saved u. You will always live in my heart brother, my prayers with the family!
— sonu sood (@SonuSood) September 3, 2021
ಸೋನು ಸೂದ್ ಹಿತೇಶ್ ಅವರಿಗೆ ಸಹಾಯ ಮಾಡಿದ ಸಂದರ್ಭದಲ್ಲಿ, ಹಿತೇಶ್ ಅವರ ಮಕ್ಕಳು ಚಿತ್ರವೊಂದನ್ನು ಬಿಡಿಸಿ ಹಂಚಿಕೊಂಡಿದ್ದರು. ಅದನ್ನು ಸೋನು ಮತ್ತೆ ಟ್ವೀಟ್ ಮಾಡಿ, ‘ಇದನ್ನು ಹಿತೇಶ್ ಅವರ ಮಕ್ಕಳು ಅವರ ತಂದೆಯನ್ನು ಬದುಕಿಸಬೇಕೆಂಬ ಆಸೆಯಿಂದ ಬರೆದಿದ್ದು. ನನ್ನಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನ ನಡೆಸಿದೆ. ಆದರೆ ಸಾಧ್ಯವಾಗಲಿಲ್ಲ, ದಯವಿಟ್ಟು ಕ್ಷಮಿಸಿ. ನಿಮ್ಮೊಂದಿಗೆ ಸದಾ ನಾನಿರುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹಿತೇಶ್ ಅವರ ಮಕ್ಕಳು ಬರೆದಿದ್ದ ಚಿತ್ರವನ್ನು ಹಂಚಿಕೊಂಡ ಸೋನು ಸೂದ್:
This was the painting made by Hitesh’s kids with a hope to save their father. Wish I could. So sorry little angels, will always be there for you ? pic.twitter.com/uNgHXgiZfP
— sonu sood (@SonuSood) September 3, 2021
ಕೊರೊನಾ ಸಾಂಕ್ರಮಿಕದ ಆಪತ್ಕಾಲದಲ್ಲಿ ಸೋನು ಸೂದ್ ಅನೇಕರಿಗೆ ನೆರವಾಗಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಊರು ಸೇರಲು ಕಷ್ಟಪಡುತ್ತಿದ್ದ ಕಾರ್ಮಿಕರಿಗೆ ಮನೆ ಸೇರಲು ಸಹಾಯ ಮಾಡುವುದು ಸೇರಿದಂತೆ ಚಿಕಿತ್ಸೆ ಪಡೆಯಲು ಪ್ರಯತ್ನಿಸುತ್ತಿದ್ದ ಅನೇಕರಿಗೆ ಸೋನು ಸಹಾಯ ಹಸ್ತ ಚಾಚಿದ್ದಾರೆ. ಈ ಕಾರಣದಿಂದಲೇ ಅವರಿಗೆ, ಚಿತ್ರಗಳಾಚೆಗೆ ಅಪಾರ ಅಭಿಮಾನ ಬಳಗ ಸೃಷ್ಟಿಯಾಗಿದೆ.
ಇದನ್ನೂ ಓದಿ:
‘ಈಗಾಗಲೇ ಸಾಮಾನ್ಯ ಜನರು ಬಡತನ, ನಿರುದ್ಯೋಗದ ಕಾರಣ 3ನೇ ಅಲೆಯನ್ನು ಅನುಭವಿಸುತ್ತಿದ್ದಾರೆ’: ಸೋನು ಸೂದ್
ಸುಶಾಂತ್ ಮತ್ತು ಸಿದ್ದಾರ್ಥ್ ಶುಕ್ಲಾ ಸಾವಿನ ನಡುವೆ ಹಲವು ಹೋಲಿಕೆ; ಧ್ವನಿ ಎತ್ತಿದ ನೆಟ್ಟಿಗರು
(Sonu Sood apologizes for Hitesh Sharma s death whom he airlifted from Hyderabad to Delhi)