AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunny Leone: ಸಮುದ್ರದಿಂದ ಮೇಲೆದ್ದು ಬಂದ ಸನ್ನಿ; ಪರವಶರಾದ ಅಭಿಮಾನಿಗಳು

ಮಾಲ್ಡೀವ್ಸ್​ನಲ್ಲಿ ಕುಟುಂಬದವರೊಂದಿಗೆ ರಜಾ ದಿನಗಳನ್ನು ಕಳೆಯುತ್ತಿರುವ ಬಾಲಿವುಡ್ ತಾರೆ ಸನ್ನಿ ಲಿಯೋನ್, ಇಂದು ಹಂಚಿಕೊಂಡಿರುವ ವಿಡಿಯೊವೊಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Sunny Leone: ಸಮುದ್ರದಿಂದ ಮೇಲೆದ್ದು ಬಂದ ಸನ್ನಿ; ಪರವಶರಾದ ಅಭಿಮಾನಿಗಳು
ಸಮುದ್ರದ ನಡುವೆ ಕುಳಿತಿರುವ ಬಾಲಿವುಡ್ ತಾರೆ ಸನ್ನಿ ಲಿಯೋನ್
TV9 Web
| Edited By: |

Updated on: Sep 03, 2021 | 6:35 PM

Share

ಚಿತ್ರರಂಗದ ತಾರೆಯರು ಶೂಟಿಂಗ್​ನಿಂದ ಬಿಡುವನ್ನು ಪಡೆದು, ಮಾಲ್ಡೀವ್ಸ್​ಗೆ ತೆರಳಿ ಕುಟುಂಬದವರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ. ಅಂತೆಯೇ ಬಾಲಿವುಡ್ ತಾರೆ ಸನ್ನಿ ಲಿಯೋನ್ ತಮ್ಮ ಕುಟುಂಬದವರೊಂದಿಗೆ ಮಾಲ್ಡೀವ್ಸ್​ಗೆ ತೆರಳಿದ್ದು, ಅಲ್ಲಿ ಕಳೆಯುತ್ತಿರುವ ಸುಂದರ ಸಮಯವನ್ನು ಹಾಗೂ ನಿಸರ್ಗ ಸೌಂದರ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪ್ರಸ್ತುತ ಅವರು ಸಮುದ್ರದ ಒಳಗಿಂದ ಎದ್ದು ಬರುತ್ತಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ನೋಡಿದ ಅಭಿಮಾನಿಗಳು ಪರವಶರಾಗಿದ್ದಾರೆ.

ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ವೆಬರ್ ಹಾಗೂ ಮಕ್ಕಳಾದ ನಿಶಾ, ಆಷರ್ ಹಾಗೂ ನೋಹ್ ಅವರೊಂದಿಗೆ ಮಾಲ್ಡೀವ್ಸ್​ನಲ್ಲಿದ್ದಾರೆ. ಇತ್ತೀಚೆ ಹಂಚಿಕೊಂಡ ವಿಡಿಯೊದಲ್ಲಿ ಸನ್ನಿ ಸಮುದ್ರದ ಒಳಗಿನಿಂದ ಬರುವ ದೃಶ್ಯವಿದೆ. ಯೋ ಯೋ ಹನಿ ಸಿಂಗ್ ಹಾಗೂ ನೇಹಾ ಕಕ್ಕರ್ ಹಾಡಿರುವ ‘ಸನ್ನಿ ಸನ್ನಿ’ ಹಾಡಿನ ತುಣುಕನ್ನು ಅವರು ವಿಡಿಯೊಗೆ ಹಾಕಿದ್ದಾರೆ. ಈ ವಿಡಿಯೊ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸನ್ನಿ ಹಂಚಿಕೊಂಡ ವಿಡಿಯೊ:

View this post on Instagram

A post shared by Sunny Leone (@sunnyleone)

ಮಾಲ್ಡೀವ್ಸ್​ನಲ್ಲಿ ಸುತ್ತಾಡುತ್ತಿರುವ ಚಿತ್ರಗಳನ್ನು, ವಿಡಿಯೊಗಳನ್ನು ಸನ್ನಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ತಾವು ತಂಗಿದ್ದ ರೆಸಾರ್ಟ್​ನ ಅಭೂತಪೂರ್ವ ದೃಶ್ಯಗಳನ್ನು ಅಭಿಮಾನಿಗಳಿಗೆ ವಿಡಿಯೊ ಮುಖಾಂತರ ತೋರಿಸಿದ್ದರು. ಸಮುದ್ರದ ನಡುವೆ ಇರುವ ಆ ರೆಸಾರ್ಟ್​​ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು.

ಬೀಚ್​ನಲ್ಲಿ ಸುತ್ತಾಡುತ್ತಿರುವ ಚಿತ್ರ ಹಂಚಿಕೊಂಡ ಸನ್ನಿ:

View this post on Instagram

A post shared by Sunny Leone (@sunnyleone)

View this post on Instagram

A post shared by Sunny Leone (@sunnyleone)

ಸನ್ನಿ ಲಿಯೋನ್ ಪ್ರಸ್ತುತ ‘ಅನಾಮಿಕ’ ವೆಬ್​ ಸೀರೀಸ್​ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ವಿಕ್ರಮ್ ಭಟ್ ಇದನ್ನು ನಿರ್ದೇಶನ ಮಾಡುತ್ತಿದ್ದು, ಆಕ್ಷನ್ ಮಾದರಿಯ ಸೀರೀಸ್ ಇದಾಗಿರಲಿದೆ. ಇದರ ಹೊರತಾಗಿ ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರಸ್ತುತದ ಸಮಸ್ಯೆಗಳಿಗೆ ಧ್ವನಿ ಎತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಲೆ ಏರಿಕೆಯ ವಿರುದ್ಧ ತಮ್ಮದೇ ಧಾಟಿಯಲ್ಲಿ ಪ್ರತಿಭಟಿಸಿದ್ದರು. ಇವುಗಳೊಂದಿಗೆ ಅವರು ಆಗಾಗ ಪ್ರಾಣಿಗಳ ಕುರಿತ ಜಾಗೃತಿ ಕಾರ್ಯಕ್ರಮದ ವಿಚಾರಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ:

Sunny Leone: ನೆಚ್ಚಿನ ಅಭಿಮಾನಿಗಳಿಗೆ ಕುಳಿತಲ್ಲೇ ಮಾಲ್ಡೀವ್ಸ್ ದರ್ಶನ ಮಾಡಿಸಿದ ಸನ್ನಿ ಲಿಯೋನ್

Samantha: ಶೂಟಿಂಗ್​ನಿಂದ ಬ್ರೇಕ್ ತೆಗೆದುಕೊಂಡ ಸಮಂತಾ ಈಗೇನು ಮಾಡುತ್ತಿದ್ದಾರೆ?; ಉತ್ತರ ನೀಡುತ್ತಿದೆ ಈ ಫೊಟೊ

(Sunny Leone shared a reel of coming from sea and that reel got fans attention)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್