‘ಸಲ್ಮಾನ್ ಖಾನ್, ವಿಜಯ್​ ಚಿತ್ರಗಳಿಗೆ ಅನ್ವಯವಾಗದ ನಿಯಮಗಳು ನಮಗೇಕೆ?’; ಐನಾಕ್ಸ್, ಪಿವಿಆರ್ ವಿರುದ್ಧ ಕಂಗನಾ ಕಿಡಿ

Thalaivii: ಐನಾಕ್ಸ್ ಹಾಗೂ ಪಿವಿಆರ್ ಸಿನಿಮಾಸ್ ಮಲ್ಟಿಫ್ಲೆಕ್ಸ್​ಗಳ ವಿರುದ್ಧ ಕಂಗನಾ ಕಿಡಿಕಾರಿದ್ದಾರೆ. ಸಲ್ಮಾನ್ ಖಾನ್, ವಿಜಯ್ ಮೊದಲಾದ ಸ್ಟಾರ್ ನಟರಿಗೆ ಅನ್ವಯವಾಗದ ನಮಗೇಕೆ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

‘ಸಲ್ಮಾನ್ ಖಾನ್, ವಿಜಯ್​ ಚಿತ್ರಗಳಿಗೆ ಅನ್ವಯವಾಗದ ನಿಯಮಗಳು ನಮಗೇಕೆ?’; ಐನಾಕ್ಸ್, ಪಿವಿಆರ್ ವಿರುದ್ಧ ಕಂಗನಾ ಕಿಡಿ
ಕಂಗನಾ ರಣಾವತ್​
Follow us
| Updated By: shivaprasad.hs

Updated on: Sep 04, 2021 | 3:00 PM

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ನಟಿ ಜಯಲಲಿತಾ ಅವರ ಜೀವನವನ್ನು ಆಧರಿಸಿದ ‘ತಲೈವಿ’ ಚಿತ್ರಕ್ಕೆ ಬಿಡುಗಡೆಯ ಮೊದಲೇ ವಿಘ್ನ ಎದುರಾಗಿದೆ. ಈ ಕುರಿತು ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಕಂಗನಾ ರಣಾವತ್ ಮಲ್ಟಿಪ್ಲೆಕ್ಸ್​ಗಳ ಬೇಕಾಬಿಟ್ಟಿ ನಿಲುವುಗಳ ವಿರುದ್ಧ ಕಿಡಿಕಾರಿದ್ದಾರೆ. ಇನ್ಸ್ಟಾಗ್ರಾಂ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿರುವ ಕಂಗನಾ, ಅಲ್ಲಿ ಸ್ಟೋರಿ ಹಾಗೂ ವಿಡಿಯೊ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಬಾಲಿವುಡ್​ನ ಖ್ಯಾತ ಹೀರೋಗಳ ವಿಷಯಕ್ಕೆ ಬಂದರೆ ಅನ್ವಯವಾಗದ ಮಲ್ಟಿಪ್ಲೆಕ್ಸ್ ನಿಯಮಗಳು, ನಮ್ಮ ಚಿತ್ರಕ್ಕೆ ಮಾತ್ರ ಏಕೆ?’ ಎಂದು ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣವೇನು? ಕಂಗನಾ ನಟಿಸಿರುವ ‘ತಲೈವಿ’ ಚಿತ್ರ ಸೆಪ್ಟೆಂಬರ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಐನಾಕ್ಸ್ ಮೂವೀಸ್, ಪಿವಿಆರ್ ಸಿನಿಮಾಸ್ ಸೇರಿದಂತೆ ಕೆಲವು ಮಲ್ಟಿಫ್ಲೆಕ್ಸ್​​ಗಳು ತಲೈವಿಯನ್ನು ಪ್ರದರ್ಶಿಸುವುದಿಲ್ಲ ಎಂಬ ನಿರ್ಧಾರವನ್ನು ಪ್ರಕಟಿಸಿವೆ. ಕಾರಣ, ವರದಿಗಳ ಪ್ರಕಾರ ತಲೈವಿ ಚಿತ್ರದ ಹಿಂದಿ ಅವತರಣಿಕೆಯು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲು ಬಹಳ ಕಡಿಮೆ ಸಮಯವಿರುವುದರಿಂದ(2 ವಾರ) ಮಲ್ಟಿಫ್ಲೆಕ್ಸ್​ಗಳು ಪ್ರದರ್ಶನದಿಂದ ಹಿಂದೆ ಸರಿದಿವೆ. ತಲೈವಿಯ ತಮಿಳು ಅವತರಣಿಕೆಯು 4 ವಾರಗಳ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಕಂಗನಾ ಆಕ್ರೋಶಕ್ಕೆ ಕಾರಣವೇನು? ಇನ್ಸ್ಟಾಗ್ರಾಂ ಸ್ಟೋರಿಗಳು ಮುಖಾಂತರ ಹಾಗೂ ವಿಡಿಯೊದ ಮುಖಾಂತರ ಕಂಗನಾ ನೇರವಾಗಿ ಮಲ್ಟಿಫ್ಲೆಕ್ಸ್​ಗಳ ದ್ವಂದ್ವ ನಿಯಮಗಳನ್ನು ಪ್ರಶ್ನಿಸಿದ್ದಾರೆ. ‘‘ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರ ಏಕಕಾಲದಲ್ಲಿ ಒಟಿಟಿಯಲ್ಲಿ ಹಾಗೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ವಿಜಯ್ ಅಭಿನಯದ ‘ಮಾಸ್ಟರ್’  ಚಿತ್ರ ಬಿಡುಗಡೆಯಾದ ಕೇವಲ ಎರಡು ವಾರಗಳಲ್ಲೇ ಒಟಿಟಿಯಲ್ಲಿ ಪ್ರದರ್ಶನವಾಗಿತ್ತು. ಹಾಲಿವುಡ್ ಚಿತ್ರಗಳು ಒಟಿಟಿಯಲ್ಲಿ ಹಾಗೂ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವಾಗ ‘ತಲೈವಿ’ ಚಿತ್ರಕ್ಕೆ ನಾಲ್ಕು ವಾರಗಳ ಅಂತರವನ್ನು ನೀಡಿದ್ದರೂ ಕೂಡ ನೀವೇಕೆ ಬಿಡುಗಡೆ ಮಾಡುತ್ತಿಲ್ಲ?’’ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಇದಕ್ಕೆ ಲಿಂಗಾಧಾರಿತ ಅಸಮಾನತೆ ಮುಖ್ಯ ಕಾರಣ ಎಂದು ಪ್ರತಿಪಾದಿಸಿರುವ ಕಂಗನಾ, ‘‘ಈ ಮಲ್ಟಿಫ್ಲೆಕ್ಸ್​ಗಳು ಯಾವುದೇ ಮಹಿಳೆಯರ ಏಳಿಗೆಗೆ ಸಹಕಾರ ನೀಡುವುದಿಲ್ಲ. ನಂತರ ಪುರುಷರಂತೆ ಮಹಿಳೆಯರಿಗೆ ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ಸಾಮರ್ಥ್ಯವಿಲ್ಲ ಎನ್ನುತ್ತಾರೆ. ಈಗಾಗಲೇ ಪಿವಿಆರ್ ಹಾಗೂ ಐನಾಕ್ಸ್ ವೆಂಟಿಲೇಟರ್​ನಲ್ಲಿವೆ. ಆದರೂ ಬೆದರಿಸುವುದು, ಕಿರುಕುಳ ನೀಡುವುದು ಅವರ ಮೊದಲ ಆದ್ಯತೆಯಾಗಿದೆ’’ ಎಂದು ಕಂಗನಾ ಕಿಡಿಕಾರಿದ್ದಾರೆ.

‘‘ಕೊರೊನಾ ಕಷ್ಟದ ಸಂದರ್ಭದಲ್ಲಿ ಬಹಳ ಕಡಿಮೆ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆಗೊಳಿಸುವ ಆಯ್ಕೆಯನ್ನು ಮಾಡಿವೆ. ಅದರಲ್ಲೂ ತಲೈವಿ ಚಿತ್ರದ ನಿರ್ಮಾಪಕರು ಬಹುದೊಡ್ಡ ಮೊತ್ತದ ಆಫರ್​ಗಳನ್ನು ಬಿಟ್ಟು, ಕೇವಲ ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಸ್ಪರ ಸಹಕಾರವಿರಬೇಕು. ಅದರ ಬದಲಾಗಿ ಜಗಳವಾಡುವುದು ತಪ್ಪು. ನಮ್ಮ ಚಿತ್ರದ ಹಿಂದಿ ಅವತರಣಿಕೆಯ ಒಟಿಟಿ ಬಿಡುಗಡೆಗೆ ಎರಡು ವಾರಗಳ ಅಂತರವಿದೆ. ಆದರೆ ತಮಿಳಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಾಲ್ಕು ವಾರಗಳ ನಂತರ ಒಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ತೀರ್ಮಾನಿಸಿದ್ದೇವೆ. ಮಲ್ಟಿಫ್ಲೆಕ್ಸ್​ಗಳು ದಕ್ಷಿಣದ ಭಾಗದಲ್ಲಾದರೂ ತಲೈವಿಯನ್ನು ಪ್ರದರ್ಶಿಸಬೇಕು. ಇಂತಹ ದುರಿತ ಕಾಲದಲ್ಲಿ ಪರಸ್ಪರ ಸಹಕಾರದ ಮೂಲಕ ಚಿತ್ರರಂಗದ ಏಳಿಗೆಗೆ ಸಹಾಯ ಮಾಡಬೇಕು’’ ಎಂದು ಕಂಗನಾ ಹೇಳಿದ್ದಾರೆ.

ಕಂಗನಾ ಮನವಿ ಮಾಡಿರುವ ವಿಡಿಯೊ:

ತಲೈವಿಯು ಬೆಲ್​ಬಾಟಂ, ಚೆಹ್ರೆ ನಂತರ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಬಾಲಿವುಡ್ ಚಿತ್ರವಾಗಿದೆ. ಚಿತ್ರದಲ್ಲಿ ಕಂಗನಾ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎಂ.ಜಿ. ರಾಮಚಂದ್ರನ್​ ಪಾತ್ರದಲ್ಲಿ ಅರವಿಂದ್​ ಸ್ವಾಮಿ ನಟಿಸಿದ್ದಾರೆ. ಎಂ. ಕರುಣಾನಿಧಿಯಾಗಿ ನಾಸಿರ್​ ಬಣ್ಣ ಹಚ್ಚಿದ್ದಾರೆ. ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಖ್ಯಾತ ನಿರ್ದೇಶಕ ಎ.ಎಲ್​. ವಿಜಯ್​ ಅವರು ‘ತಲೈವಿ’ಗೆ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ.

ಇದನ್ನೂ ಓದಿ:

Thalaivii: ‘ತಲೈವಿ’ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಂಗನಾ; ಜಯಲಲಿತಾ ಸ್ಮಾರಕಕ್ಕೆ ಭೇಟಿ

‘ಆ ಸಿದ್ದಾರ್ಥ್​ ಬದಲು ಈ ಸಿದ್ದಾರ್ಥ್​ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?

(Kangana Ranaut slams multiplex chains for refusing to screen her new movie Thalaivii here is the reason)

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ