Thalaivii: ‘ತಲೈವಿ’ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಂಗನಾ; ಜಯಲಲಿತಾ ಸ್ಮಾರಕಕ್ಕೆ ಭೇಟಿ
Kangana Ranaut: ಸೆಪ್ಟೆಂಬರ್ 10ರಂದು ಬಿಡುಗಡೆ ಆಗಲಿರುವ ‘ತಲೈವಿ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಟಿ ಕಂಗನಾ ರಣಾವತ್ ತೊಡಗಿಸಿಕೊಂಡಿದ್ದಾರೆ. ಇಂದು ಅವರು ಜಯಲಲಿತಾ ಹಾಗೂ ಎಂಜಿಆರ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ನಟಿ ಜಯಲಲಿತಾ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರ ‘ತಲೈವಿ’ ಸೆಪ್ಟೆಂಬರ್ 10ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಜಯಲಲಿತಾ ಪಾತ್ರವನ್ನು ನಿರ್ವಹಿಸಿರುವ ಕಂಗನಾ ರಣಾವತ್ ಪ್ರಚಾರದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಜಯಲಲಿತಾ ಸ್ಮಾರಕಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವ ‘ತಲೈವಿ’ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದ್ದು, ಅಭಿಮಾನಿಗಳು ಕಾತತರದಿಂದ ಕಾಯುತ್ತಿದ್ದಾರೆ. ಕೊರೊನಾ ನಿಯಮಾವಳಿಗಳ ನಡುವೆಯೇ ಚಿತ್ರಮಂದಿರಗಳಲ್ಲಿ 50 ಪ್ರತಿಶತ ಅನುಮತಿ ಇರುವಂತೆಯೇ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಜಯಲಲಿತಾ ಸ್ಮಾರಕಕ್ಕೆ ಕಂಗನಾ ಭೇಟಿಯ ವಿಡಿಯೊ:
Actress #KanganaRanaut pays tributes at former Tamil Nadu Chief Minister J Jayalalithaa’s memorial in the Marina beach. She is in Chennai for #Thalaivii movie promotions. @IndianExpress pic.twitter.com/7Uy3XTSODG
— Janardhan Koushik (@koushiktweets) September 4, 2021
ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಕಂಗನಾ, ಜಯಲಲಿತಾ ಅವರ ಶೈಲಯಲ್ಲಿ ಉಡುಗೆ- ತೊಡುಗೆಗಳನ್ನು ಧರಿಸಿ ತೆಗೆಸಿಕೊಂಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಅಭಿಮಾನಿಗಳಿಗೆ ಪ್ರಿಯವಾಗಿದ್ದು, ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ಸ್ಟಾಗ್ರಾಂನ ತಮ್ಮ ಖಾತೆಯ ಹೆಸರನ್ನೂ ಕೂಡ ಕಂಗನಾ ಬದಲಿಸಿಕೊಂಡಿದ್ದು, ‘ಕಂಗನಾ ತಲೈವಿ’ ಎಂದು ಮಾರ್ಪಾಡು ಮಾಡಿಕೊಂಡಿದ್ದಾರೆ.
ಕಂಗನಾ ಹಂಚಿಕೊಂಡ ಚಿತ್ರಗಳು:
View this post on Instagram
View this post on Instagram
ಭಾರತದ ರಾಜಕಾರಣದಲ್ಲಿ ಜಯಲಲಿತಾ ಹೆಸರು ಬಹುಮುಖ್ಯವಾದದ್ದು. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅವರು ಅಪಾರ ಜನ ಬೆಂಬಲ ಗಳಿಸಿದ್ದರು. ಅದಕ್ಕೂ ಮೊದಲು ಚಿತ್ರರಂಗದಲ್ಲಿ ನಟಿಯಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಹೀಗೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದ ಜಯಲಲಿತಾ, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರು-ಪೇರುಗಳನ್ನು ಅನುಭವಿಸಿದ್ದರು. ಸಿನಿಮಾ ಮತ್ತು ರಾಜಕೀಯದ ಅವರ ಜರ್ನಿಯನ್ನು ‘ತಲೈವಿ’ ಸಿನಿಮಾ ಮೂಲಕ ತೆರೆಮೇಲೆ ತರಲಾಗುತ್ತಿದೆ.
ಎಂ.ಜಿ. ರಾಮಚಂದ್ರನ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ನಟಿಸಿದ್ದಾರೆ. ಎಂ. ಕರುಣಾನಿಧಿಯಾಗಿ ನಾಸಿರ್ ಬಣ್ಣ ಹಚ್ಚಿದ್ದಾರೆ. ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಖ್ಯಾತ ನಿರ್ದೇಶಕ ಎ.ಎಲ್. ವಿಜಯ್ ಅವರು ‘ತಲೈವಿ’ಗೆ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆದಿರುವ ಈ ಚಿತ್ರ ಸೆಪ್ಟೆಂಬರ್ 10ಕ್ಕೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ:
(Kangana visits to Jayalalitha memorial see the pics)
Published On - 1:06 pm, Sat, 4 September 21