ಚಿರು ಫೋಟೋ ನೋಡಿದರೆ ಅಳು ನಿಲ್ಲಿಸ್ತಾನೆ ಮೇಘನಾ​ ಪುತ್ರ ರಾಯನ್​ ರಾಜ್​ ಸರ್ಜಾ

ಚಿರು ಫೋಟೋ ನೋಡಿದರೆ ಅಳು ನಿಲ್ಲಿಸ್ತಾನೆ ಮೇಘನಾ​ ಪುತ್ರ ರಾಯನ್​ ರಾಜ್​ ಸರ್ಜಾ

TV9 Web
| Updated By: ಮದನ್​ ಕುಮಾರ್​

Updated on: Sep 04, 2021 | 9:58 AM

ನಾಮಕರಣ ಸಮಾರಂಭದ ವೇಳೆ ಚಿರಂಜೀವಿ ಸರ್ಜಾ-ಮೇಘನಾ ರಾಜ್​ ಪುತ್ರ ರಾಯನ್​ ರಾಜ್​ ಸರ್ಜಾ ನಿರಂತರವಾಗಿ ಅಳುತ್ತಿದ್ದ. ಯಾರ ಬಳಿ ಹೋದರೂ ಆತನಿಗೆ ಸಮಾಧಾನ ಆಗುತ್ತಿರಲಿಲ್ಲ.

ಚಿರಂಜೀವಿ ಸರ್ಜಾ-ಮೇಘನಾ ರಾಜ್​ ಪುತ್ರನಿಗೆ ರಾಯನ್​ ರಾಜ್​ ಸರ್ಜಾ ಎಂದು ಹೆಸರು ಇಡಲಾಗಿದೆ. ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯಗಳ ಪ್ರಕಾರ ಶುಕ್ರವಾರ (ಸೆ.3) ನಾಮಕರಣ ಮಾಡಲಾಯಿತು. ಧ್ರುವ ಸರ್ಜಾ, ಪ್ರಮೀಳಾ ಜೋಷಾಯ್​, ಸುಂದರ್​ ರಾಜ್​, ಧ್ರುವ ಪತ್ನಿ ಪ್ರೇರಣಾ, ಪ್ರಜ್ವಲ್​ ದೇವರಾಜ್​, ಅವರ ಪತ್ನಿ ರಾಗಿಣಿ ಚಂದ್ರನ್​ ಸೇರಿದಂತೆ ಅನೇಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ವೇಳೆ ರಾಯನ್​ ನಿರಂತರವಾಗಿ ಅಳುತ್ತಿದ್ದ. ಯಾರ ಬಳಿ ಹೋದರೂ ಆತನಿಗೆ ಸಮಾಧಾನ ಆಗುತ್ತಿರಲಿಲ್ಲ. ಕೊನೆಗೂ ತಾತ ಸುಂದರ್​ ರಾಜ್​ ಅವರು ಚಿರಂಜೀವಿ ಸರ್ಜಾ ಫೋಟೋ ತೋರಿಸುತ್ತಿದ್ದಂತೆಯೇ ರಾಯನ್​ ಅಳು ನಿಲ್ಲಿಸಿದ.

ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ಪುತ್ರನಿಗೆ ರಾಯನ್​ ರಾಜ್​ ಸರ್ಜಾ ಎಂದು ಹೆಸರು ಇಡಲಾಗಿದೆ. ‘ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ’ ಎಂಬ ಅರ್ಥ ಈ ಹೆಸರಿಗೆ ಇದೆ. ಅದನ್ನು ಮೇಘನಾ ರಾಜ್​ ವಿವರಿಸಿದ್ದಾರೆ. ‘ರಾಯನ್​ ಎಂಬ ಹೆಸರು ನನ್ನ ಮನಸಿನಲ್ಲಿ ಮೊದಲಿನಿಂದಲೂ ಇತ್ತು. ಚಿರು ನಮ್ಮ ಪಾಲಿಗೆ ರಾಜ. ಅವರಿಗೆ ಹುಟ್ಟಿದ ಈ ಮಗು ಯುವರಾಜ. ನಮ್ಮ ಎಲ್ಲರ ಜೀವನದಲ್ಲಿ ಕತ್ತಲೆ ತುಂಬಿತ್ತು. ಆದರೆ ನಮಗೆ ಬೆಳಕು ತಂದವನೇ ನನ್ನ ಮಗ’ ಎಂದು ಮೇಘನಾ ರಾಜ್​ ಹೇಳಿದರು.

ಇದನ್ನೂ ಓದಿ:

‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್​ ನೇರ​ ಮಾತು

ಚರ್ಚ್​ನಲ್ಲಿ ಚಿರು-ಮೇಘನಾ ರಾಜ್​ ಪುತ್ರನ ನಾಮಕರಣ; ಕ್ರೈಸ್ತ ಸಂಪ್ರದಾಯದ ವಿಡಿಯೋ ಇಲ್ಲಿದೆ