AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್​ ನೇರ​ ಮಾತು

ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ಕುಟುಂಬದ ನಡುವೆ ಬಿರುಕು ಮೂಡಿದೆ ಎಂಬ ರೀತಿಯಲ್ಲಿ ಕೆಲವು ಸುದ್ದಿಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿರುವುದು ಎರಡೂ ಕುಟುಂಬಕ್ಕೆ ಬೇಸರ ತರಿಸಿದೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಲಾಯಿತು.

‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್​ ನೇರ​ ಮಾತು
ಪ್ರಮೀಳಾ ಜೋಷಾಯ್​, ಧ್ರುವ ಸರ್ಜಾ, ಮೇಘನಾ ರಾಜ್​, ಸುಂದರ್​ ರಾಜ್​
TV9 Web
| Edited By: |

Updated on: Sep 03, 2021 | 1:36 PM

Share

ಚಿರಂಜೀವಿ ಸರ್ಜಾ-ಮೇಘನಾ ರಾಜ್​ ಪುತ್ರನಿಗೆ ರಾಯನ್​ ರಾಜ್​ ಸರ್ಜಾ ಎಂದು ಹೆಸರು ಇಡಲಾಗಿದೆ. ನಾಮಕರಣದ ಬಳಿಕ ಮೊದಲ ಬಾರಿಗೆ ಕುಟುಂಬದವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮೇಘನಾ ರಾಜ್​ ತಾಯಿ ಪ್ರಮೀಳಾ ಜೋಷಾಯ್​ ಅವರು ಕೆಲವು ವಿಚಾರಗಳ ಬಗ್ಗೆ ಅಸಮಾಧಾನ ತೋಡಿಕೊಂಡರು. ‘ನನ್ನ ಮಗಳು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ನಾವೇ ಅವಳನ್ನು ನೋಡಿಕೊಂಡಿರೋದು. ಬೇರೆ ಯಾರೋ ನೋಡಿಕೊಳ್ಳುವುದು ಬೇಕಾಗಿಯೂ ಇಲ್ಲ. ಇರುವ ವಿಷಯವನ್ನು ನಾನು ಹೇಳುತ್ತಿದ್ದೇನೆ’ ಎಂದು ಅವರು ನೇರವಾಗಿ ಮಾತು ಆರಂಭಿಸಿದರು.

‘ಮೇಘನಾಳ ಎಲ್ಲ ಬೇಕು-ಬೇಡಗಳ ಬಗ್ಗೆ ನಮಗೆ ಗೊತ್ತಿದೆ. ಅವರು ಕೊಟ್ರು, ಇವರು ಕೊಟ್ರು, ಅವರು ನೋಡಿಕೊಳ್ತಾರೆ, ಇವರು ನೋಡಿಕೊಳ್ತಾ ಇದಾರೆ ಅಂತ ಸುಮ್ಮನೆ ಏನೇನೋ ಪ್ರಚಾರ ಆಗುತ್ತಿದೆ. ಅದು ನನ್ನ ಮನಸ್ಸಿಗೆ ತುಂಬ ನೋವಾಯಿತು. ನಮಗೆ ಪ್ರಚಾರ ಬೇಕಿಲ್ಲ. ನಮಗೆ ಯಾರೂ ಏನೂ ಕೊಟ್ಟಿಲ್ಲ. ನಮ್ಮದನ್ನು ನಾವು ನೋಡಿಕೊಂಡು ಹೋಗುತ್ತಿದ್ದೇವೆ’ ಎಂದು ಪ್ರಮೀಳಾ ಜೋಷಾಯ್​ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಸುಂದರ್​ ರಾಜ್​ ವಿವರಣೆ ನೀಡಿದರು. ‘ಇದೆಲ್ಲ ಯೂಟ್ಯೂಬ್​ನ ಅವಾಂತರಗಳು. ಅದು ಇತ್ತೀಚೆಗೆ ಜಾಸ್ತಿ ಆಗಿದೆ. ಯೂಟ್ಯೂಬ್​ನಲ್ಲಿ ಬರುವುದನ್ನು ಜನರು ನಂಬುತ್ತಾರೆ. ಕೆಲವರು ನಂಬುವುದಿಲ್ಲ’ ಎಂದು ಅವರು ಹೇಳಿದರು. ಇದನ್ನೆಲ್ಲ ಹೇಳಿಕೊಳ್ಳಲು ಇದು ಸಮಯವಲ್ಲ ಎಂದು ಮೇಘನಾ ಸುಮ್ಮನಾದರು. ಬಳಿಕ ಮಾತನಾಡಿದ ಧ್ರುವ ಸರ್ಜಾ ಅವರು ಕೆಲವು ಸ್ಪಷ್ಟನೆ ನೀಡಿದರು.

‘ಅಣ್ಣನ ಮಗನಿಗೆ ರಾಯನ್​ ರಾಜ್​ ಸರ್ಜಾ ಎಂದು ಹೆಸರು ಇಟ್ಟಿದ್ದೇವೆ.  ರಾಜ್​ ಮತ್ತು ಸರ್ಜಾ ಎಂಬ ಈ ಹೆಸರಿನಲ್ಲಿಯೇ ಗೊತ್ತಾಗುತ್ತದೆ. ರಾಜ್​-ಸರ್ಜಾ ಫ್ಯಾಮಿಲಿ ಜೊತೆಯಾಗಿಯೇ ಇದೆ. ಯೂಟ್ಯೂಬ್​ ಚಾನೆಲ್​ಗಳ ಮೂಲಕ ತಪ್ಪು ಮಾಹಿತಿ ಹರಡಬೇಡಿ. ಅದರ ಪ್ರಭಾವಕ್ಕೆ ನಾವು ಒಳಗಾಗುವುದಿಲ್ಲ. ಸುಂದರ್​ ರಾಜ್​ ಅಂಕಲ್​, ಪ್ರಮೀಳಾ ಜೋಷಾಯ್​ ಆಂಟಿ ಮತ್ತು ಮೇಘನಾ ಅತ್ತಿಗೆ ಸೇರಿದಂತೆ ಎಲ್ಲರೂ ನಮ್ಮೊಂದಿಗೆ ಸಹಕಾರದಿಂದ ಇದ್ದಾರೆ. ನಾವು ಖುಷಿಯಾಗಿದ್ದೇವೆ.

‘ಈ ಸಂದರ್ಭದಲ್ಲಿ ನಾನು ಅಣ್ಣನನ್ನು ನೆನಪಿಸಿಕೊಳ್ಳುತ್ತೇನೆ. ರಾಯನ್​ ಎಂಬ ಹೆಸರಿಗೆ ಸಂಸ್ಕೃತದಲ್ಲಿ ಯುವರಾಜ ಎಂಬ ಅರ್ಥ ಇದೆ. ಅವನು ಯುವರಾಜನ ರೀತಿಯೇ ಇರುತ್ತಾನೆ’ ಎಂದು ಧ್ರುವ ಸರ್ಜಾ ಹೇಳಿದರು. ‘ಮೇಘನಾಳನ್ನು ನೋಡಿದರೆ ಖುಷಿ ಆಗುತ್ತದೆ. ಎಲ್ಲವನ್ನೂ ಅವಳು ಸಮರ್ಥವಾಗಿ ನಿಭಾಯಿಸುತ್ತಾಳೆ. ಅಪ್ಪನ ಫೋಟೋ ನೋಡಿದರೆ ರಾಯನ್​ ಚೆನ್ನಾಗಿ ಪ್ರತಿಕ್ರಿಯಿಸುತ್ತಾನೆ. ಅವನ ನಗುವಲ್ಲಿ ನಾವು ಸಂತೋಷವಾಗಿದ್ದೇವೆ’ ಎಂದು ಧ್ರುವ ಪತ್ನಿ ಪ್ರೇರಣ ಹೇಳಿದರು.

ಇದನ್ನೂ ಓದಿ:

ಮೇಘನಾ ರಾಜ್​ ಸುದ್ದಿಗೋಷ್ಠಿ: ರಾಯನ್​ ರಾಜ್​ ಸರ್ಜಾ ಹೆಸರಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಕುಟುಂಬ

Meghana Raj: ಮೇಘನಾ ರಾಜ್​ ಬದುಕಲ್ಲಿ ಹೊಸ ಬೆಳಕು; ಜ್ಯೂ. ಚಿರು ಜನಿಸಿ 9 ತಿಂಗಳಾದ ಬಳಿಕ ಗುಡ್​ ನ್ಯೂಸ್​

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?