AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿಚಂದ್ರನ್​ ಜತೆ ತೆರೆಹಂಚಿಕೊಂಡ ಈ ನಟಿ ಯಾರೆಂದು ಗುರುತಿಸ್ತೀರಾ?

ಮೂಲತಃ ಗುಜರಾತ್​ನವರಾದ ನಮಿತಾ, 2002ರಲ್ಲಿ ತೆಲುಗು ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ತಮಿಳು, ಹಿಂದಿ ಚಿತ್ರರಂಗದಲ್ಲೂ ಕಾಣಿಸಿಕೊಂಡರು.

ರವಿಚಂದ್ರನ್​ ಜತೆ ತೆರೆಹಂಚಿಕೊಂಡ ಈ ನಟಿ ಯಾರೆಂದು ಗುರುತಿಸ್ತೀರಾ?
ರವಿಚಂದ್ರನ್​ ಜತೆ ತೆರೆಹಂಚಿಕೊಂಡ ಈ ನಟಿ ಯಾರೆಂದು ಗುರುತಿಸ್ತೀರಾ?
TV9 Web
| Edited By: |

Updated on:Sep 03, 2021 | 8:30 PM

Share

ನಟ ರವಿಚಂದ್ರನ್​​ ಅವರು ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸಾಕಷ್ಟು ಹಿಟ್​ ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಅವರಿಗಿದೆ. ರವಿಚಂದ್ರನ್​ ಅವರ ಜತೆ ತೆರೆಹಂಚಿಕೊಂಡ ನಂತರದಲ್ಲಿ ಹಲವು ಹೀರೋಯಿನ್​ಗಳ ವೃತ್ತಿ ಜೀವನಕ್ಕೆ ಮೈಲೇಜ್​ ಸಿಕ್ಕಿದೆ. ಈಗ ರವಿಚಂದ್ರನ್​ ಜತೆ ತೆರೆಹಂಚಿಕೊಂಡ ನಟಿಯೊಬ್ಬರು ತಮ್ಮ 17 ವಯಸ್ಸಿನ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ ಎಂಬ ಪ್ರಶ್ನೆಗೆ ಉತ್ತರ ನಮಿತಾ.

ಮೂಲತಃ ಗುಜರಾತ್​ನವರಾದ ನಮಿತಾ, 2002ರಲ್ಲಿ ತೆಲುಗು ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ತಮಿಳು, ಹಿಂದಿ ಚಿತ್ರರಂಗದಲ್ಲೂ ಕಾಣಿಸಿಕೊಂಡರು. 2006ರಲ್ಲಿ ತೆರೆಗೆ ಬಂದ ರವಿಚಂದ್ರನ್​ ನಟನೆಯ ‘ನೀಲಕಂಠ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಅವರು. ರವಿಚಂದ್ರನ್​ ನಿರ್ದೇಶಿಸಿ ನಟಿಸಿದ್ದ ‘ಹೂ’ ಸಿನಿಮಾದಲ್ಲಿ ನಮಿತಾ. ನಟಿಸಿದ್ದರು.  2016ರ ಬಳಿಕ ಅವರು ಅಷ್ಟಾಗಿ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿಲ್ಲ.

ಈಗ ನಮಿತಾ ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ​ ಒಂದನ್ನು ಹಂಚಿಕೊಂಡಿದ್ದಾರೆ. 17ನೇ ವಯಸ್ಸಿನ ಫೋಟೋ ಇದಾಗಿದ್ದು, ಅದಕ್ಕೆ ಅವರು ಕ್ಯಾಪ್ಶನ್​ ಕೂಡ ನೀಡಿದ್ದಾರೆ. ‘ಇದು 17ನೇ ವಯಸ್ಸಿನ ಫೋಟೋ. ಮುಂಬೈ ಎಂಬ ಮಹಾ ನಗರದಲ್ಲಿ ದೊಡ್ಡ ಕನಸು ಹೊತ್ತು ಬಂದಿದ್ದೆ. ಇದು ನನ್ನ ಮೊದಲ ಫೋಟೋಶೂಟ್​. 2000ರಲ್ಲಿ ಬೋಮನ್​ ಇರಾನಿ ಈ ಫೋಟೋಶೂಟ್​ ನಡೆಸಿದ್ದರು. ಈ ವೇಳೆ ನನ್ನ ಪಾಲಕರೂ ಇದ್ದರು. ಸಂಜೆ ಬೋಮನ್​ ಇರಾನಿ ಪಿಜ್ಜಾ ಆರ್ಡರ್​ ಮಾಡಿದ್ದರು’ ಎಂದಿದ್ದಾರೆ ಅವರು.

ಚಿತ್ರರಂಗದಲ್ಲಿ ನಮಿತಾ ಅಷ್ಟಾಗಿ ಆ್ಯಕ್ಟೀವ್​ ಇಲ್ಲ. ಅವರು ಕಿರುತೆರೆಯ ಕೆಲ ಶೋಗಳಿಗೆ ಜಡ್ಜ್​ ಆಗಿದ್ದರು. ತಮಿಳುನಾಡು ರಾಜಕೀಯದಲ್ಲೂ ಅವರು ತೊಡಗಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿಗೆ ನಮಿತಾ 2019ರಲ್ಲಿ ಸೇರ್ಪಡೆ ಆಗಿದ್ದರು. 2017ರಲ್ಲಿ ಅವರ ವಿವಾಹ ಏರ್ಪಟ್ಟಿತ್ತು.

ಇದನ್ನೂ ಓದಿ: ಚಿತ್ರಮಂದಿರ ಸಂಸ್ಕೃತಿಯನ್ನು ನಾವು ನಾಶ ಮಾಡಬಾರದು; ರವಿಚಂದ್ರನ್​

Published On - 8:27 pm, Fri, 3 September 21

ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ