Raayan Raj Sarja: ಚಿರು- ಮೇಘನಾ ಪುತ್ರನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ನಾಮಕರಣ

Royan Raj Sarja: ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪುತ್ರನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಮಾರಂಭ ನಡೆದಿದೆ.

Raayan Raj Sarja: ಚಿರು- ಮೇಘನಾ ಪುತ್ರನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ನಾಮಕರಣ
ಚಿರಂಜೀವಿ ಸರ್ಜಾ - ಮೇಘನಾ ರಾಜ್​ - ರಾಯನ್ ರಾಜ್ ಸರ್ಜಾ

ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಸರ್ಜಾ ಅವರ ಪುತ್ರನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ನಾಮಕರಣ ಸಮಾರಂಭ ನಡೆದಿದ್ದು, ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬ ಹಾಗೂ ಆಪ್ತರು ಭಾಗಿಯಾಗಿದ್ದರು. 10 ತಿಂಗಳ ಚಿರು- ಮೇಘನಾ ಪುತ್ರನನ್ನು ಇದುವರೆಗೆ ಜೂನಿಯರ್ ಚಿರು ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು. ನಾಮಕರಣದ ಕುರಿತು ಮೇಘನಾ ಇತ್ತೀಚೆಗಷ್ಟೇ ಘೋಷಿಸಿದ್ದರು.

‘ರಾಯನ್ ರಾಜ್ ಸರ್ಜಾ’ ಹೆಸರನ್ನು ವಿಡಿಯೊ ಮುಖಾಂತರ ಘೋಷಿಸಿದ ಮೇಘನಾ ರಾಜ್:

 

View this post on Instagram

 

A post shared by Meghana Raj Sarja (@megsraj)

ಇಷ್ಟು ದಿನ ಜ್ಯೂ. ಚಿರುಗೆ ಹಲವು ಹೆಸರುಗಳಿಂದ ಕರೆಯಲಾಗುತ್ತಿತ್ತು. ಮೇಘನಾ ತಂದೆ ಸುಂದರ್​ ರಾಜ್​ ಅವರು ಚಿಂಟು ಎಂದು ಕರೆಯುತ್ತಿದ್ದರು. ಅಷ್ಟೇ ಅಲ್ಲದೇ ಚಿರು ಬಚ್ಚ, ಚಿರು ಬೇಬಿ, ಶಿಷ್ಯ, ಮಿನಿಮಮ್​, ಬರ್ಫಿ, ಕುಟ್ಟಿ ಪಾಪ, ಮಂಚೆ, ಮರಿ ಸಿಂಗ, ಲಿಟ್ಲ್​ ಚಿರು, ಸಿಂಬಾ, ದಿಷ್ಟೋ ಎಂಬಿತ್ಯಾದಿ ಹೆಸರುಗಳ ಮೂಲಕ ಆಪ್ತರು ಈ ಮಗುವನ್ನು ಮುದ್ದಾಗಿ ಕರೆಯುತ್ತಿದ್ದರು. ಈಗ ಚಿರು-ಮೇಘನಾ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಮೇಘನಾ ಹಂಚಿಕೊಂಡಿದ್ದ ಚಿತ್ರ:

 

View this post on Instagram

 

A post shared by Meghana Raj Sarja (@megsraj)

ಕಳೆದ ವರ್ಷ ಜೂನ್​ 7ರಂದು ಚಿರು ನಿಧನರಾದ ಬಳಿಕ ದುಃಖದಲ್ಲಿದ್ದ ಮೇಘನಾ ರಾಜ್​ ಮತ್ತು ಸರ್ಜಾ ಕುಟುಂಬದಲ್ಲಿ ಜ್ಯೂ. ಚಿರು ಆಗಮನದಿಂದ ಮತ್ತೆ ನಗು ಅರಳಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಮಗನ ಫೋಟೋ ಮತ್ತು ವಿಡಿಯೋಗಳನ್ನು ಮೇಘನಾ ರಾಜ್ ಆಗಾಗ ಹಂಚಿಕೊಳ್ಳುತ್ತ ಇರುತ್ತಾರೆ.

ಇದನ್ನೂ ಓದಿ:

ಮೇಘನಾ ರಾಜ್​-ಚಿರಂಜೀವಿ ಸರ್ಜಾ ಪುತ್ರನ ನಾಮಕರಣ; ಹೆಸರೇನು ಎಂದು ಕೇಳಿದವರಿಗೆ ಇಲ್ಲಿದೆ ಅಪ್​ಡೇಟ್​

ಕೆಬಿಸಿಯಲ್ಲಿ ಗೆದ್ದು ಲಕ್ಷಾಧಿಪತಿಯಾದ ರಾಜಸ್ಥಾನದ ಸರ್ಕಾರಿ ಶಾಲಾ ಶಿಕ್ಷಕಿ ಆಯೆಷಾ; ಪ್ರಶಸ್ತಿಯ ಮೊತ್ತವನ್ನು ಏನು ಮಾಡುತ್ತಾರಂತೆ?

(Late actor Chiranjeevi Sarja and actress Meghana Raj son named as Raayan Raj Sarja)

Click on your DTH Provider to Add TV9 Kannada