ಮೇಘನಾ ರಾಜ್-ಚಿರಂಜೀವಿ ಸರ್ಜಾ ಪುತ್ರನ ನಾಮಕರಣ; ಹೆಸರೇನು ಎಂದು ಕೇಳಿದವರಿಗೆ ಇಲ್ಲಿದೆ ಅಪ್ಡೇಟ್
ಇಷ್ಟು ದಿನ ಜ್ಯೂ. ಚಿರುಗೆ ಹಲವು ಹೆಸರುಗಳಿಂದ ಕರೆಯಲಾಗುತ್ತಿತ್ತು. ಮೇಘನಾ ತಂದೆ ಸುಂದರ್ ರಾಜ್ ಅವರು ಚಿಂಟು ಎಂದು ಕರೆಯುತ್ತಿದ್ದರು. ಆದರೆ ಈಗ ನಿಜವಾದ ಹೆಸರೇನು ಎಂಬುದನ್ನು ತಿಳಿದುಕೊಳ್ಳುವ ಸಮಯ ಬಂದಿದೆ.
ನಟಿ ಮೇಘನಾ ರಾಜ್ ಮತ್ತು ಜಿರಂಜೀವಿ ಸರ್ಜಾ ಪುತ್ರನಿಗೆ ನಾಮಕರಣ ಮಾಡಲಾಗಿದೆ. ಇಷ್ಟು ದಿನ ಈ ಮುದ್ದು ಮಗುವನ್ನು ಜ್ಯೂನಿಯರ್ ಚಿರು ಎಂದೇ ಮೇಘನಾ ಕರೆಯುತ್ತಿದ್ದರು. ಪ್ರತಿ ಬಾರಿ ಮಾತನಾಡುವಾಗಲೂ ಅವರು ಜ್ಯೂ. ಚಿರು ಎಂದಷ್ಟೇ ಹೇಳುತ್ತಿದ್ದರು. ಮಗುವಿನ ನಿಜವಾದ ಹೆಸರು ಏನು ಎಂಬುದು ಬಹಿರಂಗ ಆಗಿರಲಿಲ್ಲ. ಈಗ ಮಗನ ಹೆಸರನ್ನು ತಿಳಿಸುವ ಸಮಯ ಬಂದಿದೆ. ಆ ಬಗ್ಗೆ ಮೇಘನಾ ರಾಜ್ ಮತ್ತು ಅವರ ಕುಟುಂಬದವರು ಅಪ್ಡೇಟ್ ನೀಡಿದ್ದಾರೆ. ಹೆಸರು ತಿಳಿದುಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆಲ್ಲ ಸಿಹಿ ಸುದ್ದಿ ಸಿಕ್ಕಿದೆ. ಶುಕ್ರವಾರ (ಸೆ.3) ಮಗನ ಹೆಸರು ಬಹಿರಂಗಪಡಿಸುವುದಾಗಿ ಮೇಘನಾ ತಿಳಿಸಿದ್ದಾರೆ.
‘ನಮ್ಮ ರಾಜಕುಮಾರನಿಗೆ ಈಗ ಹೆಸರು ಇಡಲಾಗಿದೆ. ಅವನ ಕುರಿತು ಎಲ್ಲರಿಂದ ನನಗೆ ಎದುರಾಗುತ್ತಿದ್ದ ಮೊದಲ ಪ್ರಶ್ನೆಯೇ; ಜ್ಯೂ. ಚಿರು ಹೆಸರು ಏನು? ಈಗ ರಾಜ ತನ್ನ ಮಗನಿಗೆ ಒಂದು ಹೆಸರು ಆಯ್ಕೆ ಮಾಡಿದ್ದಾನೆ. ಅದೇನು ಎಂಬುದನ್ನು ಸೆ.3ರಂದು ತಿಳಿಸುತ್ತೇನೆ’ ಎಂದು ಮೇಘನಾ ಪೋಸ್ಟ್ ಮಾಡಿದ್ದಾರೆ. ಇದರ ಜೊತೆ ಅವರು ಒಂದು ವಿಡಿಯೋ ಹಂಚಿಕೊಂಡಿದ್ದು, ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಮದುವೆ ಸುಂದರ ಕ್ಷಣಗಳನ್ನು ಕಂಡು ಅಭಿಮಾನಿಗಳು ಖುಷಿಪಡುತ್ತಿದ್ದಾರೆ.
ಇಷ್ಟು ದಿನ ಜ್ಯೂ. ಚಿರುಗೆ ಹಲವು ಹೆಸರುಗಳಿಂದ ಕರೆಯಲಾಗುತ್ತಿತ್ತು. ಮೇಘನಾ ತಂದೆ ಸುಂದರ್ ರಾಜ್ ಅವರು ಚಿಂಟು ಎಂದು ಕರೆಯುತ್ತಿದ್ದರು. ಅಷ್ಟೇ ಅಲ್ಲದೇ ಚಿರು ಬಚ್ಚ, ಚಿರು ಬೇಬಿ, ಶಿಷ್ಯ, ಮಿನಿಮಮ್, ಬರ್ಫಿ, ಕುಟ್ಟಿ ಪಾಪ, ಮಂಚೆ, ಮರಿ ಸಿಂಗ, ಲಿಟ್ಲ್ ಚಿರು, ಸಿಂಬಾ, ದಿಷ್ಟೋ ಎಂಬಿತ್ಯಾದಿ ಹೆಸರುಗಳ ಮೂಲಕ ಆಪ್ತರು ಈ ಮಗುವನ್ನು ಮುದ್ದಾಗಿ ಕರೆಯುತ್ತಿದ್ದರು. ಈಗ ಚಿರು-ಮೇಘನಾ ಮಗನ ನಿಜವಾದ ಹೆಸರು ಏನು ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.
View this post on Instagram
ಕಳೆದ ವರ್ಷ ಜೂನ್ 7ರಂದು ಹೃದಯಾಘಾತದಿಂದ ಚಿರು ನಿಧನರಾದ ಬಳಿಕ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದಲ್ಲಿ ಕತ್ತಲು ಆವರಿಸಿತ್ತು. ಆದರೆ ಜ್ಯೂ. ಚಿರು ಆಗಮನದಿಂದ ಅವರ ಮೊಗದಲ್ಲಿ ಮತ್ತೆ ನಗು ಅರಳಿತು. ಸೋಶಿಯಲ್ ಮೀಡಿಯಾದಲ್ಲಿ ಮಗನ ಫೋಟೋ ಮತ್ತು ವಿಡಿಯೋಗಳನ್ನು ಮೇಘನಾ ಆಗಾಗ ಹಂಚಿಕೊಳ್ಳುತ್ತ ಇರುತ್ತಾರೆ.
ಇದನ್ನೂ ಓದಿ:
ಮೇಘನಾ ರಾಜ್ ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರು ಜೊತೆ ಅರ್ಜುನ್ ಸರ್ಜಾ ಫೋಟೋ ವೈರಲ್
Meghana Raj: ಮೇಘನಾ ರಾಜ್ ಬದುಕಲ್ಲಿ ಹೊಸ ಬೆಳಕು; ಜ್ಯೂ. ಚಿರು ಜನಿಸಿ 9 ತಿಂಗಳಾದ ಬಳಿಕ ಗುಡ್ ನ್ಯೂಸ್