ನಿರ್ಮಾಪಕ ಉಮಾಪತಿಗೆ ಕರೆ ಮಾಡಿ ಕ್ಷಮೆ ಕೇಳಿದ್ದ ಕುಖ್ಯಾತ ಡಾನ್ ಬಾಂಬೆ ರವಿ

ಉಮಾಪತಿಗೆ ಕರೆ ಮಾಡಿ ಡಾನ್​ ರವಿ ಕ್ಷಮೆ ಕೇಳಿದ್ದ. ಡಾನ್ ಬಾಂಬೆ ರವಿ ಮತ್ತು ಉಮಾಪತಿ ನಡುವಿನ ದೂರವಾಣಿ ಸಂಭಾಷಣೆ ಆಡಿಯೋ ಕ್ಲಿಪ್ ಟಿವಿ9ಗೆ ಸಿಕ್ಕಿದೆ.

ನಿರ್ಮಾಪಕ ಉಮಾಪತಿಗೆ ಕರೆ ಮಾಡಿ ಕ್ಷಮೆ ಕೇಳಿದ್ದ ಕುಖ್ಯಾತ ಡಾನ್ ಬಾಂಬೆ ರವಿ
ನಿರ್ಮಾಪಕ ಉಮಾಪತಿ (ಫೈಲ್ ಚಿತ್ರ)

ಸ್ಯಾಂಡಲ್​ವುಡ್​ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ದರ್ಶನ್​ ಪ್ರಕರಣದಲ್ಲಿ ಉಮಾಪತಿ ಹೆಸರು ಮುಂಚೂಣಿಯಲ್ಲಿತ್ತು. ಈಗ ಅವರು ಮತ್ತೆ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ, ಕುಖ್ಯಾತ ಡಾನ್ ಬಾಂಬೆ ರವಿ. ಉಮಾಪತಿಗೆ ಕರೆ ಮಾಡಿ ಕ್ಷಮೆ ಕೇಳಿದ್ದ. ಡಾನ್ ಬಾಂಬೆ ರವಿ ಮತ್ತು ಉಮಾಪತಿ ನಡುವಿನ ದೂರವಾಣಿ ಸಂಭಾಷಣೆ ಆಡಿಯೋ ಕ್ಲಿಪ್ ಟಿವಿ9ಗೆ ಸಿಕ್ಕಿದೆ.

ಏನಿದು ಪ್ರಕರಣ?:

‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ‌ ಗೌಡ ಅವರು ಬಾಂಬೆ ರವಿ ವಿರುದ್ಧ ದೂರು ನೀಡಿದ್ದರು. ಕೊಲೆ ಬೆದರಿಕೆ ಹಾಕಿ‌ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ ಆರೋಪವನ್ನು ಉಮಾಪತಿ ಹೊರಿಸಿದ್ದರು. ದೂರಿನ ಅನ್ವಯ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಇದಾದ ನಂತರದಲ್ಲಿ ಬಾಂಬೆ ರವಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು.

ಆಗಸ್ಟ್​ 5ರಂದು ಬಂದಿತ್ತು ಕರೆ:

ಬಾಂಬೆ ರವಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ ಬಾಂಬೆ ರವಿ ಆಗಸ್ಟ್​ 5ರಂದು ಉಮಾಪತಿಗೆ ಕರೆ ಮಾಡಿದ್ದ. ಅಷ್ಟೇ ಅಲ್ಲ, ಕರೆ ಮಾಡಿ ಕ್ಷಮೆ ಕೇಳಿದ್ದ. ‘ನಾನು ಯಾವುದೇ ಬೆದರಿಕೆ ಹಾಕಿಲ್ಲ, ಯಾವುದೋ ಕಾಣದ ಕೈಗಳು ಈ ಕೆಲಸ ಮಾಡಿವೆ’ ಎಂದಿದ್ದನು ಬಾಂಬೆ ರವಿ.

ಕ್ಷಮೆ ಯಾಚನೆ

‘ಉಮಾಪತಿ ಅನ್ನೋ ವ್ಯಕ್ತಿಯೂ ನನಗೆ ಗೊತ್ತಿಲ್ಲ. ಹಣ ಬೇಕು ಅಂದಿದ್ರೆ ನಾನೇ ಕಾಲ್ ಮಾಡಿ ಹಣ ಕೊಡಿ ಎಂದು ಕೇಳುತ್ತಿದ್ದೆ. ಯಾರೋ ಕಾಲ್ ಮಾಡಿ ನನ್ನ ಹೆಸರು ಬಳಕೆ ಮಾಡಿದ್ದಾರೆ’ ಎಂದಿದ್ದಾನೆ ರವಿ. ಇದರ ಜತೆಗೆ ಉಮಾಪತಿ, ಅವರ ಪತ್ನಿ ಹಾಗೂ ತಾಯಿಗೂ ಕ್ಷಮೆ ಕೇಳಿದ ಬಾಂಬೆ ರವಿ ಕ್ಷಮೆ ಕೇಳಿದ್ದಾನೆ. ಫೋನ್ ಕಾಲ್ ಕುರಿತಾಗಿ ಉಮಾಪತಿಗೌಡರಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಇದನ್ನು ಓದಿ: ನಟ ದರ್ಶನ್ ವಿರುದ್ಧ ಕಾನೂನು ಸಮರಕ್ಕೆ ನಿರ್ಮಾಪಕ ಉಮಾಪತಿ ಸಜ್ಜು

Click on your DTH Provider to Add TV9 Kannada