- Kannada News Photo gallery Happy Birthday Kichcha Sudeep: Daughter Saanvi Sudeep wishes him by highlighting 10 qualities
Sudeep Birthday: ಕಿಚ್ಚ ಸುದೀಪ್ಗೆ ಮುದ್ದು ಮಗಳ ವಿಶ್; ಅಪ್ಪನ 10 ಗುಣಗಳನ್ನು ಕೊಂಡಾಡಿದ ಸಾನ್ವಿ
Kichcha Sudeep | Saanvi Sudeep: ಅಭಿಮಾನಿಗಳ ಪಾಲಿನ ಪ್ರೀತಿಯ ‘ಕರುನಾಡ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ಇಂದು (ಸೆ.2) 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಎಲ್ಲರಿಂದಲೂ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಅವರ ಪುತ್ರಿ ಸಾನ್ವಿ ಸುದೀಪ್ ವಿಶೇಷವಾಗಿ ಅಪ್ಪನಿಗೆ ವಿಶ್ ಮಾಡಿದ್ದಾರೆ. ತಂದೆಯ 10 ವಿಶೇಷ ಗುಣಗಳನ್ನು ಅವರು ಪಟ್ಟಿಮಾಡಿದ್ದಾರೆ.
Updated on: Sep 02, 2021 | 9:58 AM

Happy Birthday Kichcha Sudeep: Daughter Saanvi Sudeep wishes him by highlighting 10 qualities

Happy Birthday Kichcha Sudeep: Daughter Saanvi Sudeep wishes him by highlighting 10 qualities

ತೆರೆಮೇಲೆ ಖಡಕ್ ಆಗಿ ಕಾಣಿಸಿಕೊಂಡರೂ ಸುದೀಪ್ ಅವರಲ್ಲಿ ಒಂದು ಮುಗ್ಧತೆ ಇದೆ. ಹಳೇ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಸಾನ್ವಿ ಅವರು ಅಪ್ಪನ ಮುಗ್ಧತೆಯನ್ನು ಕೊಂಡಾಡಿದ್ದಾರೆ.

ತಮ್ಮ ನಂಬಿಕೆ ಮತ್ತು ನಿಲುವುಗಳಿಗೆ ಸಮರ್ಥವಾಗಿ ನಡೆದುಕೊಳ್ಳುವಂತಹ ವ್ಯಕ್ತಿತ್ವ ಸುದೀಪ್ ಅವರದ್ದು. ಅಪ್ಪನ ಈ ಗುಣ ಕೂಡ ಸಾನ್ವಿಗೆ ಮೆಚ್ಚುಗೆ ಆಗಿದೆ.

ಎಲ್ಲರ ಮೇಲೂ ಸಹಾನುಭೂತಿ ತೋರಿಸುವಂತಹ ಗುಣ ಸುದೀಪ್ ಅವರಿಗೆ ಇದೆ. ಆ ಕಾರಣದಿಂದಲೇ ಅವರು ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಅಪ್ಪನ ಈ ಗುಣದ ಬಗ್ಗೆ ಕೂಡ ಸಾನ್ವಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸುದೀಪ್ ಎಂದರೆ ಅಗಾಧವಾದ ಶಕ್ತಿ. ಇಂದು ಚಿತ್ರರಂಗದಲ್ಲಿ ಅವರು ಆ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅನೇಕ ಯುವ ಪ್ರತಿಭೆಗಳಿಗೆ ಕಿಚ್ಚನೇ ಮಾದರಿ. ಕಿಚ್ಚನ ಬೆಂಬಲದಿಂದ ಯಶಸ್ಸು ಕಂಡವರೂ ಹಲವರಿದ್ದಾರೆ.

ಕಿಚ್ಚನ ಈ ಸಾಧನೆಗೆ ಅಪಾರವಾದ ಶ್ರದ್ಧೆ ಕೂಡ ಕಾರಣ. ಚಿತ್ರರಂಗದ ಹಾದಿಯಲ್ಲಿ ಸೋಲು-ಗೆಲುವು ಏನೇ ಇದ್ದರೂ ಕೂಡ ಅವರು ಆ ಶ್ರದ್ಧೆಯನ್ನು ಕಳೆದುಕೊಂಡಿಲ್ಲ. ಮೊದಲ ಚಿತ್ರಕ್ಕೆ ತೋರಿದ ಶ್ರದ್ಧೆಯನ್ನೇ ಅವರು ಎಲ್ಲ ಚಿತ್ರದಲ್ಲೂ ತೋರುತ್ತಾರೆ.

ಸುದೀಪ್ ಅವರೊಳಗೊಂದು ಭಾವುಕ ವ್ಯಕ್ತಿತ್ವ ಕೂಡ ಇದೆ. ಅವರ ಮಾತುಗಳ ಮೂಲಕ ಆಗಾಗ ಅದು ವ್ಯಕ್ತವಾಗುತ್ತದೆ. ಇದನ್ನು ಕೂಡ ಪುತ್ರಿ ಸಾನ್ವಿ ಗುರುತಿಸಿದ್ದಾರೆ.

ತಮ್ಮನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ಸುದೀಪ್ ಕಡೆಯಿಂದಲೂ ತೀವ್ರವಾದ ಪ್ರೀತಿ ಸಿಗುತ್ತದೆ. ಕಿಚ್ಚನ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರಿಗೆ ಈ ಗುಣ ಚೆನ್ನಾಗಿ ಅನುಭವಕ್ಕೆ ಬಂದಿರುತ್ತದೆ. ಅನೇಕರು ಇದನ್ನು ಬಾಯ್ತುಂಬ ಹೊಗಳಿದ್ದುಂಟು.

ಅವಿರತ ಪ್ರಯತ್ನ- ಇದು ಕಿಚ್ಚನ ಯಶಸ್ಸಿನ ಗುಟ್ಟು. ಅವರ ಈ ಗುಣವನ್ನು ಕೂಡ ಸಾನ್ವಿ ಗುರುತಿಸಿದ್ದಾರೆ. ನಿರಂತರ ಪ್ರಯತ್ನ ಮಾಡಿದ್ದರಿಂದಲೇ ಸುದೀಪ್ ಅವರು ದಿನದಿಂದ ದಿನಕ್ಕೆ ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಾಧ್ಯವಾಗಿರುವುದು.




