ಚರ್ಚ್ನಲ್ಲಿ ಚಿರು-ಮೇಘನಾ ರಾಜ್ ಪುತ್ರನ ನಾಮಕರಣ; ಕ್ರೈಸ್ತ ಸಂಪ್ರದಾಯದ ವಿಡಿಯೋ ಇಲ್ಲಿದೆ
ಮೇಘನಾ ರಾಜ್-ಚಿರಂಜೀವಿ ಸರ್ಜಾ ಮಗನಿಗೆ ಬೆಂಗಳೂರಿನ ಚರ್ಚ್ನಲ್ಲಿ ನಾಮಕರಣ ಮಾಡಿದ ವಿಡಿಯೋ ಗಮನ ಸೆಳೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕುಟುಂಬದವರು ಮತ್ತು ಆಪ್ತರು ಆಗಮಿಸಿದ್ದರು.
ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದ ಪ್ರಕಾರ ಹೆಸರಿಡುವ ಸಮಾರಂಭ ಜರುಗಿದೆ. ಬೆಂಗಳೂರಿನ ಚರ್ಚ್ನಲ್ಲಿ ನಾಮಕರಣ ಮಾಡಿದ ವಿಡಿಯೋ ಗಮನ ಸೆಳೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕುಟುಂಬದವರು ಮತ್ತು ಆಪ್ತರು ಆಗಮನಿಸಿದ್ದರು. ಧ್ರುವ ಸರ್ಜಾ, ಅವರ ಪತ್ನಿ ಪ್ರೇರಣಾ, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಪ್ರಜ್ವಲ್ ದೇವರಾಜ್ ಮತ್ತು ಅವರ ಪತ್ನಿ ರಾಗಿಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
‘ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ’ ಎಂಬ ಅರ್ಥ ಈ ಹೆಸರಿಗೆ ಇದೆ. ಅದನ್ನು ಮೇಘನಾ ರಾಜ್ ವಿವರಿಸಿದ್ದಾರೆ. ‘ನಾಮಕರಣ ಯಾವಾಗ ಎಂಬ ಪ್ರಶ್ನೆ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಅದಕ್ಕೆ ಉತ್ತರ ನನಗೂ ಗೊತ್ತಿರಲಿಲ್ಲ. 11 ತಿಂಗಳ ಬಳಿಕ ಹೆಸರು ನಿರ್ಧರಿಸಿದ್ವಿ. ರಾಯನ್ ಎಂಬ ಹೆಸರು ನನ್ನ ಮನಸಿನಲ್ಲಿ ಮೊದಲಿನಿಂದಲೂ ಇತ್ತು. ಚಿರು ನಮ್ಮ ಪಾಲಿಗೆ ರಾಜ. ಅವರಿಗೆ ಹುಟ್ಟಿದ ಈ ಮಗು ಯುವರಾಜ. ನಮ್ಮ ಎಲ್ಲರ ಜೀವನದಲ್ಲಿ ಕತ್ತಲೆ ತುಂಬಿತ್ತು. ಆದರೆ ನಮಗೆ ಬೆಳಕು ತಂದವನೇ ನನ್ನ ಮಗ’ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಇದನ್ನೂ ಓದಿ:
‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್ ನೇರ ಮಾತು
ಮೇಘನಾ ರಾಜ್ ಸುದ್ದಿಗೋಷ್ಠಿ: ರಾಯನ್ ರಾಜ್ ಸರ್ಜಾ ಹೆಸರಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಕುಟುಂಬ