ಮದುವೆ ತಯಾರಿಯಲ್ಲಿದ್ದ ಸಿದ್ದಾರ್ಥ್​ ಶುಕ್ಲಾ ಮತ್ತು ಶೆಹನಾಜ್​ ಗಿಲ್​​ ; ಮೂರು ತಿಂಗಳಿರುವಾಗಲೇ ನಡೆಯಿತು ದುರಂತ

ಸಿದ್ದಾರ್ಥ್​ ಹಾಗೂ ಶೆಹನಾಜ್​ ನಡುವೆ ಆಪ್ತತೆ ಇತ್ತು. ಇಬ್ಬರೂ ಪ್ರೀತಿಸುತ್ತಿದ್ದ ವಿಚಾರ ಮನೆ ಮಂದಿಗೂ ಗೊತ್ತಿತ್ತು ಎನ್ನಲಾಗಿದೆ. ಮನೆಯವರು ಕೂಡ ಇವರ ಪ್ರೀತಿಗೆ ಸಮ್ಮತಿ ಸೂಚಿಸಿದ್ದರು ಎನ್ನಲಾಗಿದೆ.

ಮದುವೆ ತಯಾರಿಯಲ್ಲಿದ್ದ ಸಿದ್ದಾರ್ಥ್​ ಶುಕ್ಲಾ ಮತ್ತು ಶೆಹನಾಜ್​ ಗಿಲ್​​ ; ಮೂರು ತಿಂಗಳಿರುವಾಗಲೇ ನಡೆಯಿತು ದುರಂತ
ಶೆಹನಾಜ್​ ಗಿಲ್​, ಸಿದ್ಧಾರ್ಥ್​ ಶುಕ್ಲಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 04, 2021 | 3:30 PM

ಸಿದ್ದಾರ್ಥ್​ ಶುಕ್ಲಾ ಮತ್ತು ಶೆಹನಾಜ್​ ಗಿಲ್​ ಬಿಗ್​ ಬಾಸ್​ ಸೀಸನ್​ 13ರಲ್ಲಿ ಪರಸ್ಪರ ಪರಿಚಯವಾದರು. ಇಬ್ಬರ ನಡುವೆ ಬಿಗ್​ ಬಾಸ್​ ಮನೆಯಲ್ಲೇ ಆಪ್ತತೆ ಬೆಳೆಯಿತು. ಇವರ ನಡುವೆ ಪ್ರೀತಿ ಇದೆ ಎಂದು ಹೇಳಲಾಗುತ್ತಿದೆಯಾದರೂ ಇದನ್ನು ಅವರು ಒಪ್ಪಿಕೊಂಡಿಲ್ಲ. ಈಗ ಸಿದ್ದಾರ್ಥ್​ ಮೃತಪಟ್ಟ ನಂತರದಲ್ಲಿ ಸಾಕಷ್ಟು ವಿಚಾರಗಳು ಹೊರ ಬರುತ್ತಿವೆ. ವಿಶೇಷ ಎಂದರೆ, ಸಿದ್ದಾರ್ಥ್​ ಮತ್ತು ಶೆಹನಾಜ್​ ಡಿಸೆಂಬರ್​ನಲ್ಲಿ ಮದುವೆ ಆಗೋಕೆ ಪ್ಲ್ಯಾನ್​ ರೂಪಿಸಿದ್ದರು ಎನ್ನಲಾಗಿದೆ. ಆದರೆ, ಇದಕ್ಕೂ ಕೆಲ ತಿಂಗಳು ಮೊದಲೇ ದುರಂತ ನಡೆದಿದೆ.

ಸಿದ್ದಾರ್ಥ್​ ಹಾಗೂ ಶೆಹನಾಜ್​ ನಡುವೆ ಆಪ್ತತೆ ಇತ್ತು. ಇಬ್ಬರೂ ಪ್ರೀತಿಸುತ್ತಿದ್ದ ವಿಚಾರ ಮನೆ ಮಂದಿಗೂ ಗೊತ್ತಿತ್ತು ಎನ್ನಲಾಗಿದೆ. ಮನೆಯವರು ಕೂಡ ಇವರ ಪ್ರೀತಿಗೆ ಸಮ್ಮತಿ ಸೂಚಿಸಿದ್ದರು ಎನ್ನಲಾಗಿದೆ. ಇನ್ನು ಈ ಜೋಡಿ ನೋಡಿ ಅಭಿಮಾನಿಗಳಿಗೂ ಸಾಕಷ್ಟು ಖುಷಿಯಾಗಿತ್ತು. ಇವರಿಬ್ಬರೂ ಮದುವೆ ಯಾವಾಗ ಆಗುತ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಆದರೆ, ಆ ದಿನ ಬರಲೇ ಇಲ್ಲ. ಮದುವೆಗೂ ಮೊದಲೇ ಸಿದ್ದಾರ್ಥ್​ ಮೃತಪಟ್ಟಿರುವುದು ದುರಂತ.

ಶೀಘ್ರವೇ ಎಂಗೇಜ್​ಮೆಂಟ್ ಮಾಡಿಕೊಂಡು ವರ್ಷಾಂತ್ಯಕ್ಕೆ ಮದುವೆ ಆಗುವ ಆಲೋಚನೆ ಇವರದ್ದಾಗಿತ್ತು. ಕೊವಿಡ್​ ಈಗ ಕಡಿಮೆ ಆಗಿದೆ. ಹೀಗಾಗಿ, ಅದ್ದೂರಿಯಾಗಿ ಮದುವೆ ಆಗಬೇಕು ಎಂಬುದು ಇವರ ಆಲೋಚನೆ ಆಗಿತ್ತು. ಈ ಕಾರಣಕ್ಕೆ ಮುಂಬೈನ ಸ್ಟಾರ್​ ಹೋಟೆಲ್​ ಬುಕ್​ ಮಾಡುವ ಪ್ರಕ್ರಿಯೆಯನ್ನು ಕೂಡ ಕುಟುಂಬದವರು ಆರಂಭಿಸಿದ್ದರು. ಈ ವಿಚಾರ ಕುಟುಂಬದ ಕೆಲ ಸದಸ್ಯರಿಗೆ ಮಾತ್ರ ಗೊತ್ತಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ವರ್ಷಾಂತ್ಯಕ್ಕೆ ಇವರ ಮದುವೆ ನೆರವೇರುತ್ತಿತ್ತು. ಆದರೆ, ಸಿದ್ದಾರ್ಥ್​ ವಿಧಿಯ ಕೈವಾಡಕ್ಕೆ ಸಿಲುಕಿದರು.

ಶೆಹನಾಜ್​ ಹಾಗೂ ಸಿದ್ದಾರ್ಥ್​ ಪರಸ್ಪರ ಪ್ರೀತಿಸುತ್ತಿದ್ದರು. ಸಿದ್ದಾರ್ಥ್​ ಅವರನ್ನು ಕಳೆದುಕೊಂಡಿದ್ದು ಶೆಹನಾಜ್​ಗೆ ಸಾಕಷ್ಟು ಆಘಾತ ನೀಡಿದೆ. ಈ ಶಾಕ್​ನಿಂದ ಹೊರ ಬರೋಕೆ ಅವರಿಗೆ ಅನೇಕ ತಿಂಗಳುಗಳೇ ಬೇಕಾಗಬಹುದು. ಇನ್ನು, ಶುಕ್ರವಾರ (ಸೆಪ್ಟೆಂಬರ್​ 4) ಸಿದ್ದಾರ್ಥ್​ ಅಂತ್ಯ ಸಂಸ್ಕಾರ ನಡೆದ ಜಾಗದಲ್ಲಿ ಶೆಹನಾಜ್​ ಕಾಣಿಸಿಕೊಂಡಿದ್ದರು. ತುಂಬಾನೇ ಅತ್ತಿದ್ದರಿಂದ ಅವರ ಕಣ್ಣುಗಳು ಊದಿಕೊಂಡಿದ್ದವು.

ಇದನ್ನೂ ಓದಿ: ‘ಆ ಸಿದ್ದಾರ್ಥ್​ ಬದಲು ಈ ಸಿದ್ದಾರ್ಥ್​ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?

ಸಿದ್ದಾರ್ಥ್​ ಶುಕ್ಲಾ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ WWE ಸೂಪರ್​ ಸ್ಟಾರ್​​ ಜಾನ್​ ಸೀನಾ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ