AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿ ಆಕ್ಸ್​ಫರ್ಡ್ ಬೀದಿಯಲ್ಲಿ ಅಂಗಿಯಿಲ್ಲದೇ ನಡೆಯಬಲ್ಲರು, ಅವರಿಗೆ ಚಾಲೆಂಜ್ ಮಾಡಬೇಡಿ; ದಾದಾ ಅಚ್ಚರಿಯ ಹೇಳಿಕೆ

Virat Kohli: ಕೆಬಿಸಿ 13ರಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ಸೌರವ್ ಗಂಗೂಲಿ ಭಾಗವಹಿಸಿದ್ದ ಶೋ ಹಲವು ಅಚ್ಚರಿಯ ವಿಚಾರಗಳನ್ನು ತೆರೆದಿಟ್ಟಿದೆ. ಇದೇ ಸಂದರ್ಭದಲ್ಲಿ ಭಾರತ ತಂಡದ ಈಗಿನ ಕಪ್ತಾನನ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಕೊಹ್ಲಿ ಆಕ್ಸ್​ಫರ್ಡ್ ಬೀದಿಯಲ್ಲಿ ಅಂಗಿಯಿಲ್ಲದೇ ನಡೆಯಬಲ್ಲರು, ಅವರಿಗೆ ಚಾಲೆಂಜ್ ಮಾಡಬೇಡಿ; ದಾದಾ ಅಚ್ಚರಿಯ ಹೇಳಿಕೆ
ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ(ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Sep 04, 2021 | 5:24 PM

Share

KBC 13: ಕೌನ್​ ಬನೇಗಾ ಕರೋಡ್​ಪತಿಯ 13ನೇ ಸೀಸನ್ ಅನೇಕ ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಸೆಲೆಬ್ರಿಟಿ ಶೋನಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ಸೌರವ್ ಗಂಗೂಲಿ ಭಾಗವಹಿಸಿ ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆ ನೀಡಿದ್ದಾರೆ. ಇದೇ ವೇಳೆ ಸೌರವ್ ಅನೇಕ ಕುತೂಹಲಕರ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿದ್ದಾಗ, ಸೌರವ್ ಗಂಗೂಲಿಗೆ ಇಂಗ್ಲೆಂಡ್ ವಿರುದ್ಧ ನಾಟ್​ವೆಸ್ಟ್ ಸರಣಿ ಫೈನಲ್‌ನಲ್ಲಿ ಅತ್ಯಂತ ಸ್ಮರಣೀಯ ಗೆಲುವೊಂದು ಒಲಿದು ಬಂದಿತು. ಭಾರತವು ಗೆಲುವಿನ ರನ್ ಗಳಿಸುತ್ತಿದ್ದಂತೆ, ಸೌರವ್ ಗಂಗೂಲಿ ಲಾರ್ಡ್ಸ್ ಬಾಲ್ಕನಿಯಲ್ಲಿ ತಮ್ಮ ಅಂಗಿಯನ್ನು ತೆಗೆದು ಸಂಭ್ರಮಿಸಿದ್ದರು. ಈ ಚಿತ್ರವು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ಅಚ್ಚುಮೆಚ್ಚಿನ ನೆನಪುಗಳಲ್ಲಿ ಒಂದಾಗಿದ್ದು, ಈಗಲೂ ಮೆಲುಕು ಹಾಕಿಕೊಳ್ಳಲಾಗುತ್ತದೆ. ಈ ಕುರಿತು ಸೌರವ್ ಮಾತನಾಡಿದ್ದಾರೆ.

ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೆಬಿಸಿಯಲ್ಲಿ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಈ ಘಟನೆಯನ್ನು ನೆನಪಿಸಿಕೊಂಡ ಗಂಗೂಲಿ, “ನನ್ನ ಮಗಳು ಒಮ್ಮೆ ಇದನ್ನು ನೋಡಿದ್ದಳು. ನಾನೇಕೆ ಹೀಗೆ ಮಾಡಿದ್ದೆ ಎಂದು ಅವಳೊಮ್ಮೆ ಪ್ರಶ್ನಿಸಿದ್ದಳು. ನಾನು ಬ್ಯಾಟಿಂಗ್​ನಲ್ಲಿ 20 ಸಾವಿರ ರನ್ ಗಳಿಸಿದ್ದೇನೆ ಮತ್ತು ಹಲವು ಕವರ್ ಡ್ರೈವ್‌ಗಳನ್ನು ಮಾಡಿದ್ದೇನೆ. ಆದರೆ ಪ್ರತಿಯೊಬ್ಬರೂ ನನ್ನ ಬಾಲ್ಕನಿ ಸಂಭ್ರಮಾಚರಣೆಯ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ.” ಎಂದಿದ್ದಾರೆ ಸೌರವ್ ಗಂಗೂಲಿ.

ಆಗ ಮಧ್ಯಪ್ರವೇಶಿಸಿದ ಅಮಿತಾಭ್ ಬಚ್ಚನ್, ಗಂಗೂಲಿ ಸಂಭ್ರಮಾಚರಣೆಯನ್ನು ಶ್ಲಾಘಿಸಿದರು. ಮತ್ತು ಎಲ್ಲರೂ ಅದರ ಬಗ್ಗೆ ಹೆಮ್ಮೆಪಡುತ್ತಾರೆ. ನಿಮ್ಮಂತಹ ಆಕ್ರಮಣಕಾರಿ ವ್ಯಕ್ತಿತ್ವ ಹೊಂದಿರುವ ನಾಯಕ ಮಾತ್ರ ಅಂತಹ ಸಂಭ್ರಮಾಚರಣೆ ಮಾಡಬಹುದು’’ ಎಂದು ಗಂಗೂಲಿ ಬೆಂಬಲಕ್ಕೆ ಬಿಗ್​ಬಿ ನಿಂತಿದ್ದಾರೆ. ಆಗ ಪ್ರತಿಕ್ರಿಯಿಸಿದ ಗಂಗೂಲಿ, “ನೀವು ವಿರಾಟ್ ಕೊಹ್ಲಿಗೆ ಸವಾಲು ಹಾಕಬೇಡಿ. ಅವರು ಶರ್ಟ್ ಇಲ್ಲದೆ ಆಕ್ಸ್‌ಫರ್ಡ್ ಸ್ಟ್ರೀಟ್‌ಗೆ ಬೇಕಾದರೂ ಹೋಗುತ್ತಾರೆ” ಎಂದು ತಮಾಷೆ ಮಾಡಿದ್ದಾರೆ ಗಂಗೂಲಿ. ಸಂಪೂರ್ಣ ಹಾಸ್ಯದ ವಾತಾವರಣದಲ್ಲಿ ವಿರಾಟ್ ಕೊಹ್ಲಿಯವರ ಆಕ್ರಮಣಕಾರಿ ವ್ಯಕ್ತಿತ್ವವನ್ನು ಮತ್ತು ಎಂತಹ ಚಾಲೆಂಜ್ ಬೇಕಾದರೂ ಸ್ವೀಕರಿಸುವ ಮನಸ್ಥಿತಿಯನ್ನು ತಿಳಿಸುತ್ತಾ ಗಂಗೂಲಿ ಈ ಮಾತು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಹಲವು ಅವಿಸ್ಮರಣೀಯ ನೆನಪುಗಳನ್ನು ಕ್ರಿಕೆಟ್ ದಿಗ್ಗಜರು ಹಂಚಿಕೊಂಡಿದ್ದಾರೆ. ಆಟವನ್ನೂ ಭರ್ಜರಿಯಾಗೇ ಆಡಿದ ಅವರು, ₹ 25 ಲಕ್ಷವನ್ನು ತಮ್ಮದಾಗಿಸಿಕೊಂಡಿದ್ದು, ಹಣವನ್ನು ತಮಗೆ ಸಂಬಂಧಪಟ್ಟ ಚಾರಿಟಿ ಸಂಸ್ಥೆಗೆ ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:

Rajinikanth: ‘ಕಷ್ಟದಲ್ಲಿದ್ದೇವೆ, ರಜನಿಕಾಂತ್ ಒಬ್ಬರೇ ದಿಕ್ಕು’; ರಜನಿ ಸಂಬಂಧಿಯೆಂದು ಹೇಳಿಕೊಂಡಿರುವ ಚೇತನ್ ಅಳಲು

ಮದುವೆ ತಯಾರಿಯಲ್ಲಿದ್ದ ಸಿದ್ದಾರ್ಥ್​ ಶುಕ್ಲಾ ಮತ್ತು ಶೆಹನಾಜ್​ ಗಿಲ್​​ ; ಮೂರು ತಿಂಗಳಿರುವಾಗಲೇ ನಡೆಯಿತು ದುರಂತ

(Virat Kohli can go to Oxford Street shirtless and dont challenge him says Ganguly here is the reason)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್