Rajinikanth: ‘ಕಷ್ಟದಲ್ಲಿದ್ದೇವೆ, ರಜನಿಕಾಂತ್ ಒಬ್ಬರೇ ದಿಕ್ಕು’; ರಜನಿ ಸಂಬಂಧಿಯೆಂದು ಹೇಳಿಕೊಂಡಿರುವ ಚೇತನ್ ಅಳಲು

ಭಾರತದ ಖ್ಯಾತ ನಟ ರಜನಿಕಾಂತ್ ಅವರ ಸೋದರಳಿಯ ಎಂದು ಹೇಳಿಕೊಂಡಿರುವ ಚೇತನ್, ರಜನಿಯವರು ತಮಗೆ ಸಹಾಯ ಮಾಡಬೇಕು ಎಂದು ಕೋರಿಕೊಂಡಿದ್ದಾರೆ. ಈ ಕುರಿತ ಟಿವಿ9 ವಿಶೇಷ ವರದಿ ಇಲ್ಲಿದೆ.

Rajinikanth: ‘ಕಷ್ಟದಲ್ಲಿದ್ದೇವೆ, ರಜನಿಕಾಂತ್ ಒಬ್ಬರೇ ದಿಕ್ಕು’; ರಜನಿ ಸಂಬಂಧಿಯೆಂದು ಹೇಳಿಕೊಂಡಿರುವ ಚೇತನ್ ಅಳಲು
ರಜನಿಕಾಂತ್ ಮತ್ತು ಚೇತನ್
Follow us
TV9 Web
| Updated By: shivaprasad.hs

Updated on: Sep 04, 2021 | 4:15 PM

ಕೊರೊನಾ‌ ಲಾಕ್ ಡೌನ್ ಎಫೆಕ್ಟ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ರಜನಿಕಾಂತ್ ಸಂಬಂಧಿಯೊಬ್ಬರು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಸಂಬಂಧದಲ್ಲಿ ಅಳಿಯ ಅಂತ ಹೇಳಿರುವ ಚೇತನ್, ತಾವು ಕಷ್ಟದಲ್ಲಿದ್ದು, ರಜನಿಯವರನ್ನು ಭೇಟಿಯಾಗಬೇಕು. ಆದರೆ ಸಾಧ್ಯವಾಗುತ್ತಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ. ‘‘ಕಳೆದ ಕೆಲವು ಸಮಯಗಳಿಂದ ರಜನಿಕಾಂತ್ ಭೇಟಿ ಮಾಡಲು ಚೆನ್ನೈಗೆ ಹೋಗಿ ಬಂದಿದ್ದೇನೆ ಹಾಗೂ ಹಲವು ಬೇರೆ ಮೂಲದಿಂದಲೂ ಪ್ರಯತ್ನಪಟ್ಟಿದ್ದೇನೆ. ಚೆನ್ನೈ ಪೋಲೀಸರ ಮೂಲಕವೂ ಅಪ್ರೋಚ್ ಮಾಡುವ ಪ್ರಯತ್ನ ಮಾಡಿದ್ದೇನೆ. ಮನೆಯ ಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಕೂಡ ಆಯ್ತು. ಆದರೆ ರಜನಿ ಭೇಟಿ ಸಾಧ್ಯವಾಗಿಲ್ಲ’’ ಎಂದು ಚೇತನ್ ಹೇಳಿದ್ದಾರೆ.

‘‘ರಜನಿಕಾಂತ್ ಅವರಿಗೆ ಕಂಡಕ್ಟರ್ ಕೆಲಸ ಕೊಡಿಸಿದ್ದು ನಮ್ಮ ತಾತ. ಈಗ ಅನಿವಾರ್ಯ ಕಾರಣದಿಂದಾಗಿ ತಾತನ ಹೆಸರು ಹೇಳಿಕೊಂಡು ಸಹಾಯ ಕೇಳುತ್ತಿದ್ದೇನೆ. ಅವರು ಈಗ ಸಹಾಯ ಮಾಡಿದರೆ, 6 ತಿಂಗಳಿನ ಒಳಗೆ ಅದನ್ನು ಮರಳಿಸುತ್ತೇನೆ. ಸದ್ಯ ಸಾಲಗಾರರ ಕಾಟಕ್ಕೆ ಕಳ್ಳನ ರೀತಿ ತಪ್ಪಿಸಿಕೊಂಡು ಓಡಾಡುತ್ತಿದ್ದೇನೆ. ಅಮ್ಮನಿಗೆ ಕ್ಯಾನ್ಸರ್ ಆಗಿದೆ ಮನೆಯಲ್ಲಿ ಇರಲು ಆಗುತ್ತಿಲ್ಲ’’ ಎಂದು ಚೇತನ್ ಹೇಳಿದ್ದಾರೆ.

‘‘ರಜನಿಕಾಂತ್ ದೇವರಿದ್ದಂತೆ. ಆದರೆ ಅವರ ದರ್ಶನಕ್ಕೆ ಸಮೀಪ ಇರುವವರೇ ಬಿಡುತ್ತಿಲ್ಲ. ನಮ್ಮ ಕುಟುಂಬದಲ್ಲಿ ತುಂಬಾ ಚೆನ್ನಾಗಿ ಇರೋರು ಅವರೊಬ್ಬರೇ. ಹಾಗಾಗಿ ಈಗ ಸಹಾಯ ಕೇಳ್ತಿದ್ದೀನಿ. ಎಷ್ಟೋ ಜನಕ್ಕೆ ಅವರು ಸಹಾಯ ಮಾಡಿದ್ದಾರೆ. ನಾವ್ಯಾರು ಅಂತ ಹೇಳಿಕೊಳ್ಳೋಕೆ ಒಂದೇ ಒಂದು ಅವಕಾಶ ಬೇಕಿದೆ. ಆದ್ದರಿಂದ ಈ ಮೂಲಕ ಮನವಿ ಮಾಡುತ್ತಿದ್ದೇನೆ’’ ಎಂದು ಟಿವಿನೈನ್‌ ಮುಂದೆ ಚೇತನ್ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:

ಮದುವೆ ತಯಾರಿಯಲ್ಲಿದ್ದ ಸಿದ್ದಾರ್ಥ್​ ಶುಕ್ಲಾ ಮತ್ತು ಶೆಹನಾಜ್​ ಗಿಲ್​​ ; ಮೂರು ತಿಂಗಳಿರುವಾಗಲೇ ನಡೆಯಿತು ದುರಂತ

ಶ್ವೇತಾ ಶ್ರೀವಾತ್ಸವ್‌ ಹುಟ್ಟುಹಬ್ಬಕ್ಕೆ ‘ಹೋಪ್’ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ

(Chethan who says he is relative of Super star Rajinikanth asks for help)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್