ಶ್ವೇತಾ ಶ್ರೀವಾತ್ಸವ್‌ ಹುಟ್ಟುಹಬ್ಬಕ್ಕೆ ‘ಹೋಪ್’ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ

ಶ್ವೇತಾ ಶ್ರೀವಾತ್ಸವ್ ನಟನೆಯ ‘ಹೋಪ್​’ ಚಿತ್ರಕ್ಕೆ 34 ದಿನಗಳಲ್ಲೇ ಶೂಟಿಂಗ್​ ಪೂರ್ಣಗಳಿಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲೇ ಸಿನಿಮಾದ ಕೆಲಸಗಳು ಮುಕ್ತಾಯಗೊಂಡಿವೆ.

ಶ್ವೇತಾ ಶ್ರೀವಾತ್ಸವ್‌ ಹುಟ್ಟುಹಬ್ಬಕ್ಕೆ ‘ಹೋಪ್' ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ
ಶ್ವೇತಾ ಶ್ರೀವಾತ್ಸವ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 04, 2021 | 3:38 PM

ಖ್ಯಾತ ನಟಿ ಶ್ವೇತಾ ಶ್ರೀವಾತ್ಸವ್​ ಈಗೇನು ಮಾಡುತ್ತಿದ್ದಾರೆ? ಇಷ್ಟು ದಿನಗಳ ಕಾಲ ಕುಟುಂಬದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದ ಅವರು ಈಗ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಮಗಳ ಲಾಲನೆ-ಪಾಲನೆಯ ಜೊತೆಜೊತೆಗೆ ನಟನೆ ಕೂಡ ಮುಂದುವರಿಸಿದ್ದಾರೆ. ಇಂದು (ಸೆ.4) ಅವರ ಜನ್ಮದಿನ. ಸೆಲೆಬ್ರಿಟಿಗಳು, ಅಭಿಮಾನಿಗಳು, ಸ್ನೇಹಿತರಿಂದ ಶ್ವೇತಾಗೆ ಬರ್ತ್​ಡೇ ವಿಶ್​ ಹರಿದುಬರುತ್ತಿದೆ. ‘ಹೋಪ್​’ ಸಿನಿಮಾ ತಂಡದಿಂದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿ ಶ್ವೇತಾಗೆ ಹುಟ್ಟುಹಬ್ಬದ ಶುಭ ಕೋರಲಾಗಿದೆ.

‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, ‘ಕಿರಗೂರಿನ ಗಯ್ಯಾಳಿಗಳು’ ಮುಂತಾದ ಸಿನಿಮಾಗಳಿಂದ ಶ್ವೇತಾ ಶ್ರೀವಾತ್ಸವ್‌ ಖ್ಯಾತಿ ಹೆಚ್ಚಿತ್ತು. ಈಗ ‘ಹೋಪ್​’ ಸಿನಿಮಾದಲ್ಲಿ ಅವರಿಗೆ ಮುಖ್ಯ ಪಾತ್ರವಿದೆ. ಮೋಷನ್‌ ಪೋಸ್ಟರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನ ಮಾಡಿದೆ ಈ ಸಿನಿಮಾ ತಂಡ. ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ನೇರ ಮತ್ತು ದಿಟ್ಟ ನಡುವಳಿಕೆಯ ಕಾರಣದಿಂದಲೇ ಶ್ವೇತಾ ಶ್ರೀವಾತ್ಸವ್ ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು ಎನ್ನುತ್ತಾರೆ ವರ್ಷಾ ಸಂಜೀವ್​. ‘ನಮ್ಮ ಹೋಪ್ ಸಿನಿಮಾದಲ್ಲಿ ಅವರು ಅದೇ ರೀತಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಹಾಗಾಗಿ ಆ ಪಾತ್ರದ ಬಗ್ಗೆ ಕೇಳಿದಾಗಲೇ ನನ್ನ ಮತ್ತು ನಿರ್ದೇಶಕರ ತಲೆಯಲ್ಲಿ ಸುಳಿದಾಡಿದ್ದು ಇವರ ಹೆಸರು ಮಾತ್ರ. ನಮ್ಮ ಸಿನಿಮಾದಲ್ಲಿ ಕೆಎಎಸ್ ಅಧಿಕಾರಿಯ ಪಾತ್ರದಲ್ಲಿ ಶ್ವೇತಾ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರದಲ್ಲಿ ಅವರು ತುಂಬ ಚೆನ್ನಾಗಿ ಅಭಿನಯಿಸಿದ್ದಾರೆ. ಸಿನಿಮಾ‌ ನೋಡಿದ ನಂತರ ಪ್ರೇಕ್ಷಕರಿಗೂ ಆ ಭಾವನೆ ಬರುತ್ತದೆ’ ಎಂಬುದು ವರ್ಷಾ ಮಾತುಗಳು. ‘ಶ್ವೇತಾ ನಟನೆಯ ಈ ಹಿಂದಿನ ಸಿನಿಮಾಗಳನ್ನು ನಾನು ನೋಡಿದ್ದೇನೆ. ಕಿರಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿನ ಅವರ ಪಾತ್ರ ನನಗೆ ತುಂಬ ಇಷ್ಟ ಆಗಿತ್ತು. ಅಲ್ಲಿನ ದಿಟ್ಟತನದ ಮುಖವು ಇಲ್ಲಿ ಅಧಿಕಾರಿಯ ರೂಪದಲ್ಲಿ ಕಾಣಿಸುತ್ತದೆ’ ಎನ್ನುತ್ತಾರೆ ವರ್ಷಾ.

ಈ ಪಾತ್ರದ ಬಗ್ಗೆ ಶ್ವೇತಾ ಶ್ರೀವಾತ್ಸವ್‌ ಭರವಸೆ ಇಟ್ಟುಕೊಂಡಿದ್ದಾರೆ. ‘ಇದೊಂದು ಪವರ್‌ಫುಲ್ ಪಾತ್ರ. ನಿರ್ದೇಶಕ ಅಂಬರೀಷ್ ಅವರು ಉತ್ತಮವಾಗಿ ಸಿನಿಮಾ ಮಾಡಿದ್ದಾರೆ’ ಎಂದು ಶ್ವೇತಾ ಹೇಳಿದ್ದಾರೆ. ಸಂಸದೆ ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಗೋಪಾಲ್ ದೇಶಪಾಂಡೆ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ನಿರ್ಮಾಪಕಿ ವರ್ಷಾ ಸಂಜೀವ್ ಬರೆದ ಕಥೆಗೆ ಅಂಬರೀಷ್‌ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

‘ಹೋಪ್​’ ಚಿತ್ರಕ್ಕೆ 34 ದಿನಗಳಲ್ಲೇ ಶೂಟಿಂಗ್​ ಪೂರ್ಣಗಳಿಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲೇ ಸಿನಿಮಾದ ಕೆಲಸಗಳು ಮುಕ್ತಾಯಗೊಂಡಿವೆ. ಚಿತ್ರದ ಹಾಡುಗಳಿಗೆ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಲೇಶ್ ಛಾಯಾಗ್ರಹಣ ಚಿತ್ರಕ್ಕಿದ್ದು, ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ.

ಇದನ್ನೂ ಓದಿ:

Anant Nag Birthday: ವಿಜಯ ಸಂಕೇಶ್ವರ ಬಯೋಪಿಕ್​ನಲ್ಲಿ ಅನಂತ್​ ನಾಗ್​; ಹುಟ್ಟುಹಬ್ಬಕ್ಕೆ ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ

‘ರಮ್ಯಾ-ರಕ್ಷಿತಾ ನಡುವೆ ಆ ವಿಚಾರಕ್ಕೆ ಕಿರಿಕ್​ ಆಗಿತ್ತು’; ಶೂಟಿಂಗ್​ ಸಮಯದ ವಿವರ ತೆರೆದಿಟ್ಟ ಕವಿತಾ ಲಂಕೇಶ್​

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ