ಹೊಸ ಬಿಗ್​ ಬಾಸ್​​ ಆರಂಭಕ್ಕೂ ಮುನ್ನವೇ ಲೀಕ್​ ಆಯ್ತು 15 ಸ್ಪರ್ಧಿಗಳ ಹೆಸರು; ಈ ಬಾರಿ ಯಾರಿಗೆಲ್ಲ ಚಾನ್ಸ್​?

ಸಿನಿಮಾ, ಕಿರುತೆರೆ ಸೆಲೆಬ್ರಿಟಿಗಳ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರುವ ವ್ಯಕ್ತಿಗಳಿಗೂ ಈ ಬಾರಿ ತೆಲುಗು ಬಿಗ್​ ಬಾಸ್​ನಲ್ಲಿ ಚಾನ್ಸ್​ ಸಿಕ್ಕಿದೆ. ಈ ಸೀಸನ್​ನಲ್ಲಿ ಹೆಚ್ಚು ಮನರಂಜನೆ ನಿರೀಕ್ಷಿಸಲಾಗುತ್ತಿದೆ.

ಹೊಸ ಬಿಗ್​ ಬಾಸ್​​ ಆರಂಭಕ್ಕೂ ಮುನ್ನವೇ ಲೀಕ್​ ಆಯ್ತು 15 ಸ್ಪರ್ಧಿಗಳ ಹೆಸರು; ಈ ಬಾರಿ ಯಾರಿಗೆಲ್ಲ ಚಾನ್ಸ್​?
ಬಿಗ್​ ಬಾಸ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 05, 2021 | 1:55 PM

ರಿಯಾಲಿಟಿ ಶೋಗಳ ಪೈಕಿ ಅತಿ ಹೆಚ್ಚು ಕ್ರೇಜ್​ ಹುಟ್ಟುಹಾಕಿರುವ ಶೋ ಎಂದರೆ ಅದು ಬಿಗ್​ ಬಾಸ್​. ಮೊದಲು ಹಿಂದಿಯಲ್ಲಿ ಮಾತ್ರ ಪ್ರಸಾರ ಆಗುತ್ತಿದ್ದ ಈ ಕಾರ್ಯಕ್ರಮ ನಂತರದ ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಆರಂಭ ಆಯಿತು. ಕನ್ನಡ ಬಿಗ್​ ಬಾಸ್​ ಯಶಸ್ವಿಯಾಗಿ 8 ಸೀಸನ್​ಗಳನ್ನು ಮುಗಿಸಿದೆ. ತೆಲುಗು ಬಿಗ್​ ಬಾಸ್​ 4 ಸೀಸನ್​ ಪೂರೈಸಿದ್ದು, ಈಗ 5ನೇ ಸೀಸನ್​ ಆರಂಭಕ್ಕೆ ಕ್ಷಣಗಣನೆ ಶುರು ಆಗಿದೆ. ಇಂದು (ಸೆ.5) ಸಂಜೆ 6 ಗಂಟೆಗೆ ಶೋ ಆರಂಭ ಆಗಲಿದೆ. ನಿರೂಪಕ ಅಕ್ಕಿನೇನಿ ನಾಗಾರ್ಜುನ ಅವರು ಎಂದಿನ ಜೋಶ್​ನಲ್ಲಿ ಶೋ ಶುರುಮಾಡಲಿದ್ದಾರೆ. ಅದಕ್ಕೂ ಮುನ್ನವೇ 15 ಸ್ಪರ್ಧಿಗಳ ಹೆಸರು ಲೀಕ್​ ಆಗಿದೆ.

ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರುವ ವ್ಯಕ್ತಿಗಳಿಗೂ ಈ ಬಾರಿ ತೆಲುಗು ಬಿಗ್​ ಬಾಸ್​ ಚಾನ್ಸ್​ ನೀಡಿದೆ. ಹಾಗಾಗಿ ಈ ಹೊಸ ಸೀಸನ್​ನಲ್ಲಿ ಹೆಚ್ಚು ಡ್ರಾಮಾ ಮತ್ತು ಮನರಂಜನೆಯನ್ನು ನಿರೀಕ್ಷಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಶೋನ ಚಾರ್ಮ್​ ಹೆಚ್ಚುತ್ತಿದೆ. ಈ ಬಾರಿ ತುಂಬ ಬೋಲ್ಡ್​ ಆದಂತಹ ಟಾಸ್ಕ್​ಗಳನ್ನು ನೀಡಲಾಗುತ್ತದೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಆ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಬಿಗ್​ ಬಾಸ್​ ಸೀಸನ್​ 5ರಲ್ಲಿ ಹಣಾಹಣಿ ನಡೆಸಲಿರುವ ಸೆಲೆಬ್ರಿಟಿಗಳು ಯಾರು? ಕಿರುತೆರೆ ಆ್ಯಂಕರ್​ ರವಿ, ನಟ ಕಮ್ ವಿಜೆ ಸನ್ನಿ, ನಟ ಮಾನಸ್​ ನಾಗುಲಪಲ್ಲಿ, ಕಿರುತೆರೆ ನಟಿ ಉಮಾ ದೇವಿ, ಸುಮಧುರ ಧ್ವನಿಯಿಂದ ಫೇಮಸ್​ ಆಗಿರುವ ಆರ್​ಜೆ ಕಾಜಲ್​, ಬಹುಭಾಷಾ ನಟಿ ಶೈಲಜಾ ಪ್ರಿಯಾ, ಸೋಶಿಯಲ್​ ಮೀಡಿಯದಲ್ಲಿ ಫೇಮಸ್​ ಆಗಿರುವ ಷಣ್ಮುಖ್​, ಕೊರಿಯೋಗ್ರಾಫರ್​ ಅನೀ ಮಾಸ್ಟರ್, ಗಾಯಕ ಕಮ್​ ನಟ ಶ್ರೀರಾಮ್​ ಚಂದ್ರ, ಕಿರುತೆರೆ ನಟ ವಿಶ್ವ, ನಟಿ ಸಿರಿ ಹನುಮಂತ್​, ಟಾಲಿವುಡ್​ ನಟಿ ಲಹರಿ ಶಾರಿ, ಮಾಡೆಲ್​ ಜಸ್ವಂತ್​ ಹೆಸರುಗಳು ಕೇಳಿಬಂದಿದೆ.

ಅಂತಿಮವಾಗಿ ಯಾರೆಲ್ಲ ಬಿಗ್​ ಬಾಸ್​ ಮನೆ ಪ್ರವೇಶಿಸುತ್ತಾರೆ ಎಂಬುದು ಇಂದು ಸಂಜೆ 6 ಗಂಟೆಗೆ ಜಗಜ್ಜಾಹೀರಾಗಲಿದೆ. ಸ್ಟಾರ್​ ಮಾ ವಾಹಿನಿಯಲ್ಲಿ ಬಿಗ್​ ಬಾಸ್​ ಪ್ರಸಾರ ಆಗಲಿದೆ.

ಇದನ್ನೂ ಓದಿ:

ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​

ಬಿಗ್​ ಬಾಸ್​ ನಿರೂಪಕನನ್ನೇ ಎದುರು ಹಾಕಿಕೊಂಡ ಸ್ಪರ್ಧಿ; ನನ್ನನ್ನು ಮನೆಯಿಂದ ಹೊರಹಾಕಿದರೂ ಬೇಸರವಿಲ್ಲ ಎಂದ ನಟಿ

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ