AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್​​​ಗೆ ಪತಿ ಜೊತೆ ತೆರಳಿ ಎಂಜಾಯ್ ಮಾಡಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜಪಾನ್ ಪ್ರವಾಸದ ರೋಮ್ಯಾಂಟಿಕ್ ಫೋಟೋಗಳು ವೈರಲ್ ಆಗಿವೆ. ಅನಿಮೆ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ರಶ್ಮಿಕಾ, ಪತಿ ವಿಜಯ್ ಜೊತೆ ಸಾಂಪ್ರದಾಯಿಕ ಯುಕಾಟಾ ಧರಿಸಿ ಜಪಾನ್ ಸೌಂದರ್ಯ ಸವಿದರು. ಮೌಂಟ್ ಫ್ಯೂಜಿ ಹಿನ್ನೆಲೆಯಲ್ಲಿ ತಬ್ಬಿಕೊಂಡ ರೋಮ್ಯಾಂಟಿಕ್ ಚಿತ್ರಗಳು ಅಭಿಮಾನಿಗಳಿಗೆ ಖುಷಿ ನೀಡಿವೆ. ಇತ್ತೀಚೆಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ಈ ಜೋಡಿ, ತಮ್ಮ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದು ಮೆಚ್ಚುಗೆ ಗಳಿಸಿದೆ.

ಜಪಾನ್​​​ಗೆ ಪತಿ ಜೊತೆ ತೆರಳಿ ಎಂಜಾಯ್ ಮಾಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ-ವಿಜಯ್
ರಾಜೇಶ್ ದುಗ್ಗುಮನೆ
|

Updated on: Jun 02, 2026 | 9:36 AM

Share

ಟಾಲಿವುಡ್‌ನ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಅವರ ಪತಿ ವಿಜಯ್ ದೇವರಕೊಂಡ ಇತ್ತೀಚೆಗೆ ಜಪಾನ್​ಗೆ ತೆರಳಿದ್ದರು. ಅನಿಮೆ ಕಾರ್ಯಕ್ರಮಕ್ಕೆ ರಶ್ಮಿಕಾ ಹೋಸ್ಟ್ ಆಗಿದ್ದರಿಂದ ಅವರಿಗೆ ಜಪಾನ್​​ಗೆ ಬರುವಂತೆ ಆಮಂತ್ರಣ ಬಂದಿತ್ತು. ಈ ವೇಳೆ ವಿಜಯ್ ಕೂಡ ಭಾಗಿ ಆಗಿದ್ದರು. ಅಲ್ಲಿನ ಸುಂದರ ಕ್ಷಣಗಳ ಫೋಟೋಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

ಈ ಮೊದಲು ರಶ್ಮಿಕಾ ಹಾಗೂ ವಿಜಯ್ ಸುತ್ತಾಡಲು ತೆರಳಿದ್ದರೂ ವಿಷಯ ಗುಟ್ಟಾಗಿ ಇಟ್ಟಿದ್ದರಿಂದ ಫೋಟೋ ಹಂಚಿಕೊಳ್ಳುತ್ತಾ ಇರಲಿಲ್ಲ. ಈ ಬಾರಿ ರಶ್ಮಿಕಾ ಮಂದಣ್ಣ ಅವರು ತಮ್ಮ ಪತಿ ವಿಜಯ್ ಜೊತೆಗಿನ ಫೋಟೋಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಜಪಾನ್‌ನ ಸಾಂಪ್ರದಾಯಿಕ ಉಡುಗೆಯಾದ ಯುಕಾಟಾ ಧರಿಸಿ ಗ್ಲಾಮರಸ್ ಆಗಿ ಪೋಸ್ ನೀಡಿದ್ದ ರಶ್ಮಿಕಾ, ‘ಈ ವರ್ಷ ಜಪಾನ್ ಪ್ರವಾಸ ಇನ್ನು ಹೆಚ್ಚಿನ ಮಜಾ ನೀಡಿತು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಜಪಾನ್‌ನ ಸ್ಥಳೀಯ ಆಹಾರ ಸವಿಯುತ್ತಿರುವ, ಅಲ್ಲಿನ ಸುಂದರ ಕಲೆ ಮತ್ತು ಸಂಸ್ಕೃತಿಯನ್ನು ಆಸ್ವಾದಿಸುತ್ತಿರುವ ಹಾಗೂ ಹಿನ್ನೆಲೆಯಲ್ಲಿ ಮೌಂಟ್ ಫ್ಯೂಜಿ ಜ್ವಾಲಾಮುಖಿ ಕಾಣುವಂತೆ ವಿಜಯ್ ಅವರನ್ನು ತಬ್ಬಿಕೊಂಡಿರುವ ಬ್ಲರ್ ಆಗಿರುವ ರೋಮ್ಯಾಂಟಿಕ್ ಫೋಟೋಗಳು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿವೆ.

ರಶ್ಮಿಕಾ ಅವರ ಈ ಫೋಟೋಗಳಿಗೆ ಅಭಿಮಾನಿಗಳು ಹಾರ್ಟ್ ಎಮೋಜಿಗಳ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ‘ಫೋಟೋಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಮಿಸಸ್ ದೇವರಕೊಂಡ’ ಎಂದು ಬರೆದರೆ, ಮತ್ತೊಬ್ಬರು ‘ನಿಮ್ಮ ಪ್ರೀತಿಯ ಪತಿಯೊಂದಿಗೆ ನೀವು ಜೀವನವನ್ನು ಎಂಜಾಯ್ ಮಾಡುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ’ ಎಂದಿದ್ದಾರೆ. ಇನ್ನು ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕಿ ಫರಾ ಖಾನ್ ಕುಂದರ್ ಕೂಡ ಕಾಮೆಂಟ್ ಮಾಡಿದ್ದು,‘ನಾನು ನಾಳೆಯೇ ಜಪಾನ್‌ಗೆ ಹೋಗುತ್ತಿದ್ದೇನೆ, ಅಲ್ಲಿ ಭೇಟಿ ನೀಡಬೇಕಾದ ಜಾಗಗಳ ಬಗ್ಗೆ ಮಾಹಿತಿ ತಿಳಿಯಲು ನಿಮಗೆ ಕರೆ ಮಾಡುತ್ತೇನೆ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸಿನಿಮಾ ಜರ್ನಿಯಲ್ಲೇ ಅತ್ಯಂತ ಗರಿಷ್ಠ ಸಂಭಾವನೆ ಪಡೆದ ರಶ್ಮಿಕಾ ಮಂದಣ್ಣ

ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಇದೇ ವರ್ಷ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಕೊಡವ ಹಾಗೂ ತೆಲುಗು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ