‘ಹಾಗಲ್ಲ ಸರ್​..’ ಎಂದು ಅಮಿತಾಭ್​ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್​; ವಿಡಿಯೋ ವೈರಲ್​

‘ಹಾಗಲ್ಲ ಸರ್​..’ ಎಂದು ಅಮಿತಾಭ್​ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್​; ವಿಡಿಯೋ ವೈರಲ್​
ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್

‘ಓಂ ಶಾಂತಿ ಓಂ’ ಸಿನಿಮಾದಲ್ಲಿನ ಒಂದು ದೃಶ್ಯವನ್ನು ದೀಪಿಕಾ ಪಡುಕೋಣೆ ಅಭಿನಯಿಸಿ ತೋರಿಸಿದರು. ಅದನ್ನು ಅಮಿತಾಭ್​ ಅನುಕರಿಸಬೇಕಿತ್ತು. ಅದಕ್ಕಾಗಿ ಅವರು ತುಂಬ ಕಷ್ಟಪಟ್ಟರು.

TV9kannada Web Team

| Edited By: Madan Kumar

Sep 05, 2021 | 4:24 PM

ಭಾರತೀಯ ಚಿತ್ರರಂಗದಲ್ಲಿ ನಟ ಅಮಿತಾಭ್​ ಬಚ್ಚನ್​ಗೆ ಸಾಟಿ ಆಗಬಲ್ಲ ಇನ್ನೋರ್ವ ನಟನಿಲ್ಲ. ಅಭಿನಯದಲ್ಲಿ ಹಲವು ದಶಕಗಳ ಅನುಭವ ಹೊಂದಿರುವ ಅವರ ಜೊತೆ ಒಮ್ಮೆಯಾದರೂ ತೆರೆಹಂಚಿಕೊಳ್ಳಬೇಕು ಎಂದು ಬಯಸುತ್ತಾರೆ ಎಲ್ಲ ಕಲಾವಿದರು. ಅಂಥ ದಿಗ್ಗಜ ನಟನಿಗೆ ನಿನ್ನೆ ಮೊನ್ನೆ ಬಂದ ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕಿ ಫರ್ಹಾ ಖಾನ್​ ನಟನೆ ಹೇಳಿಕೊಡುವುದು ಎಂದರೆ ಏನರ್ಥ? ಅಚ್ಚರಿ ಎನಿಸಿದರೂ ಇಂಥ ಒಂದು ಘಟನೆ ನಡೆದಿದೆ. ಅದಕ್ಕೆ ವೇದಿಕೆ ಆಗಿದ್ದು ‘ಕೌನ್​ ಬನೇಗಾ ಕರೋಡ್​ಪತಿ’ ರಿಯಾಲಿಟಿ ಶೋ.

ಕಿರುತೆರೆಯ ಫೇಮಸ್​ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಕೌನ್​ ಬನೇಗಾ ಕರೋಡ್​ಪತಿ ಶೋ ಈಗ 13ನೇ ಸೀಸನ್​ ಆರಂಭಿಸಿದೆ. ಇದರಲ್ಲಿ ಶಾಂದಾರ್​ ಶುಕ್ರವಾರ್​ ಎಂಬ ಎಪಿಸೋಡ್​ ಪರಿಚಯಿಸಲಾಗಿದೆ. ಪ್ರತಿ ಶುಕ್ರವಾರ ಪ್ರಸಾರ ಆಗುವ ಈ ವಿಶೇಷ ಸಂಚಿಕೆಯಲ್ಲಿ ಹೆಸರಾಂತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ದೀಪಿಕಾ ಪಡುಕೋಣೆ ಮತ್ತು ಫರ್ಹಾ ಖಾನ್​ ಅವರಿಗೂ ಅಂಥ ಅವಕಾಶ ಸಿಕ್ಕಿದೆ. ಈ ವೇಳೆ ಇವರಿಬ್ಬರೂ ಸೇರಿಕೊಂಡು ಅಮಿತಾಭ್​ಗೆ ನಟನೆ ಹೇಳಿಕೊಟ್ಟಿದ್ದಾರೆ!

‘ನಿಮ್ಮ ಸಿನಿಮಾಗಳಲ್ಲಿ ನನ್ನನ್ನು ಆಯ್ಕೆ ಮಾಡಿಕೊಳ್ಳಬೇಕು ಅಂತ ನಿಮಗೆ ಒಮ್ಮೆಯೂ ಅನಿಸಲಿಲ್ಲವೇ’ ಎಂದು ಫರ್ಹಾ ಖಾನ್​ಗೆ ಅಮಿತಾಭ್​ ತಮಾಷೆ ಮಾಡಿದರು. ‘ಅದು ಎಲ್ಲರ ಕನಸಾಗಿರುತ್ತದೆ ಸರ್​’ ಎಂದು ಫರ್ಹಾ ಖಾನ್​ ಉತ್ತರಿಸಿದರು. ‘ನಿಜ ಹೇಳಿ’ ಎಂದು ಬಿಗ್​ ಬಿ ಒತ್ತಾಯಿಸಿದರು. ‘ಹಾಗಾದರೆ ಈಗಲೇ ಒಂದು ದೃಶ್ಯಕ್ಕೆ ಆಡಿಷನ್​ ಮಾಡೋಣ’ ಎಂದು ಫರ್ಹಾ ಖಾನ್​ ಸಜ್ಜಾದರು.

‘ಓಂ ಶಾಂತಿ ಓಂ’ ಸಿನಿಮಾದಲ್ಲಿನ ಒಂದು ದೃಶ್ಯವನ್ನು ದೀಪಿಕಾ ಅಭಿನಯಿಸಿ ತೋರಿಸಿದರು. ಅದನ್ನು ಅಮಿತಾಭ್​ ಅನುಕರಿಸಬೇಕಿತ್ತು. ಅದಕ್ಕಾಗಿ ಅವರು ತುಂಬ ಕಷ್ಟಪಟ್ಟರು. ‘ಹಾಗಲ್ಲ ಸರ್​.. ಹೀಗೆ ಮಾಡಬೇಕು’ ಎಂದು ಅಮಿತಾಭ್​ಗೆ ದೀಪಿಕಾ ಮತ್ತು ಫರ್ಹಾ ನಟನೆ ಹೇಳಿಕೊಟ್ಟರು. ಸದ್ಯ ಈ ಪ್ರೋಮೋವನ್ನು ಸೋನಿ ವಾಹಿನಿ ಹಂಚಿಕೊಂಡಿದೆ. ಸೆ.10ರಂದು ರಾತ್ರಿ 9 ಗಂಟೆಗೆ ಈ ಸಂಚಿಕೆ ಪ್ರಸಾರ ಆಗಲಿದೆ.

2007ರಲ್ಲಿ ತೆರೆಕಂಡ ‘ಓಂ ಶಾಂತಿ ಓಂ’ ಚಿತ್ರಕ್ಕೆ ಫರ್ಹಾ ಖಾನ್​ ನಿರ್ದೇಶನ ಮಾಡಿದ್ದರು. ಅದು ಬಾಲಿವುಡ್​ನಲ್ಲಿ ದೀಪಿಕಾ ನಟಿಸಿದ ಮೊದಲ ಸಿನಿಮಾ. ಆ ಚಿತ್ರದಲ್ಲಿ ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ದೀಪಿಕಾಗೆ ಸಿಕ್ಕಿತ್ತು.

ಇದನ್ನೂ ಓದಿ:

‘ಕರೋಡ್​ಪತಿ’ ಶೋನಲ್ಲಿ ಗಂಗೂಲಿ, ಸೆಹ್ವಾಗ್​; ಅಮಿತಾಭ್​ ಎದುರು ಕ್ರಿಕೆಟ್​ ದಿಗ್ಗಜರ ಸಖತ್ ಮಸ್ತಿ

ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ಅಮಿತಾಭ್​ ಬಚ್ಚನ್

Follow us on

Related Stories

Most Read Stories

Click on your DTH Provider to Add TV9 Kannada