‘ಕರೋಡ್​ಪತಿ’ ಶೋನಲ್ಲಿ ಗಂಗೂಲಿ, ಸೆಹ್ವಾಗ್​; ಅಮಿತಾಭ್​ ಎದುರು ಕ್ರಿಕೆಟ್​ ದಿಗ್ಗಜರ ಸಖತ್ ಮಸ್ತಿ

KBC 13: ಬಹುತೇಕರಿಗೆ ಗೊತ್ತಿಲ್ಲದ ಸಂಗತಿ ಎಂದರೆ ಸೆಹ್ವಾಗ್​ ಅವರು ಕ್ರಿಕೆಟ್​ ಮೈದಾನದಲ್ಲಿ ಬಾಲಿವುಡ್​ ಹಾಡುಗಳನ್ನು ಗುನುಗುತ್ತಿದ್ದರಂತೆ! ಆ ಬಗ್ಗೆ ಅಮಿತಾಭ್​ ವಿಚಾರಿಸಿದಾಗ ಹಲವು ಫನ್ನಿ ಸಂಗತಿಗಳನ್ನು ಸೆಹ್ವಾಗ್​ ವಿವರಿಸಿದ್ದಾರೆ.

‘ಕರೋಡ್​ಪತಿ’ ಶೋನಲ್ಲಿ ಗಂಗೂಲಿ, ಸೆಹ್ವಾಗ್​; ಅಮಿತಾಭ್​ ಎದುರು ಕ್ರಿಕೆಟ್​ ದಿಗ್ಗಜರ ಸಖತ್ ಮಸ್ತಿ
ಗಂಗೂಲಿ, ಸೆಹ್ವಾಗ್​, ಅಮಿತಾಭ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 31, 2021 | 1:20 PM

ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ (Amitabh Bachchan) ನಡೆಸಿಕೊಡುವ ಕೌನ್​ ಬನೇಗಾ ಕರೋಡ್​ಪತಿ (Kaun Banega Crorepati) ಕಾರ್ಯಕ್ರಮದ 13ನೇ ಸೀಸನ್ ಶುರುವಾಗಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಅನೇಕರು ಕೋಟಿ ರೂಪಾಯಿ ಗೆಲ್ಲುವ ಕನಸು ಇಟ್ಟುಕೊಂಡು ಹಾಟ್​ ಸೀಟ್​ನಲ್ಲಿ ಬಂದು ಕೂರುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳನ್ನು ಕೂಡ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲಾಗುತ್ತಿದೆ. ಕ್ರಿಕೆಟ್​ ದಿಗ್ಗಜರಾದ ವೀರೇಂದ್ರ ಸೆಹ್ವಾಗ್​ (Virender Sehwag) ಮತ್ತು ಸೌರವ್​ ಗಂಗೂಲಿ (Sourav Ganguly) ಅವರು ಕೌನ್​ ಬನೇಗಾ ಕರೋಡ್​ಪತಿ ಶೋಗೆ ಬರುತ್ತಾರೆ ಎಂದು ಈ ಮೊದಲೇ ಸುದ್ದಿ ಹಬ್ಬಿತ್ತು. ಅದೀಗ ನಿಜವಾಗಿದೆ. ಅಮಿತಾಭ್​ ಬಚ್ಚನ್​ ಅವರ ಎದುರು ಹಾಟ್​ ಸೀಟ್​ನಲ್ಲಿ ಕುಳಿತಿರುವ ಸೆಹ್ವಾಗ್​ ಮತ್ತು ಗಂಗೂಲಿ ಭರ್ಜರಿ ಮನರಂಜನೆ ನೀಡಿದ್ದಾರೆ.

ಸೌರವ್​ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್​ ಅವರು ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಪ್ರೋಮೋವನ್ನು ಸೋನಿ ವಾಹಿನಿ ತನ್ನ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ಇದರ ಪೂರ್ತಿ ಎಪಿಸೋಡ್​ ಸೆ.3ರಂದು ಪ್ರಸಾರ ಆಗಲಿದೆ. ಈಗಾಗಲೇ ಇದರ ಚಿತ್ರೀಕರಣ ಮುಗಿದಿದ್ದು, ಅಮಿತಾಭ್​ ಬಚ್ಚನ್​ ಜೊತೆ ಗಂಗೂಲಿ ಮತ್ತು ಸೆಹ್ವಾಗ್​ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪ್ರೋಮೋದಲ್ಲಿ​ ಅದರ ಒಂದು ಸಣ್ಣ ಝಲಕ್​ ತೋರಿಸಲಾಗಿದೆ.

ಬಹುತೇಕರಿಗೆ ಗೊತ್ತಿಲ್ಲದ ಸಂಗತಿ ಎಂದರೆ ಸೆಹ್ವಾಗ್​ ಅವರು ಕ್ರಿಕೆಟ್​ ಮೈದಾನದಲ್ಲಿ ಬಾಲಿವುಡ್​ ಹಾಡುಗಳನ್ನು ಗುನುಗುತ್ತಿದ್ದರಂತೆ! ಆ ಬಗ್ಗೆ ಅಮಿತಾಭ್​ ವಿಚಾರಿಸಿದಾಗ ಹಲವು ಫನ್ನಿ ಸಂಗತಿಗಳನ್ನು ಸೆಹ್ವಾಗ್​ ವಿವರಿಸಿದ್ದಾರೆ. ಯಾವ ಯಾವ ಸಂದರ್ಭಕ್ಕೆ ಯಾವ ಯಾವ ಹಾಡು ಮತ್ತು ಡೈಲಾಗ್​ ಸೂಕ್ತ ಆಗುತ್ತದೆ ಎಂದು ಅವರು ಅಣಕ ಮಾಡಿ ತೋರಿಸಿದ್ದಾರೆ. ಸದ್ಯ ಈ ಪ್ರೋಮೋ ನೋಡಿದ ಅಭಿಮಾನಿಗಳು ಪೂರ್ತಿ ಎಪಿಸೋಡ್​ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

ಕಳೆದ ಸೀಸನ್​ನಲ್ಲಿ ‘ಕರಮ್​ ವೀರ್’ ಎಪಿಸೋಡ್​ ಫೇಮಸ್​ ಆಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನರನ್ನು ಈ ಸಂಚಿಕೆಗಳಿಗೆ ಅತಿಥಿಗಳಾಗಿ ಕರೆತರಲಾಗುತ್ತಿತ್ತು. ಅದರ ಬದಲು ಈ ಬಾರಿ ‘ಶಾಂದರ್​ ಶುಕ್ರವಾರ್​’ ಎಪಿಸೋಡ್​ ಪರಿಚಯಿಸಲಾಗುತ್ತಿದೆ. ಅದರ ಅಂಗವಾಗಿ ಭಾರತದ ಕ್ರಿಕೆಟ್​ ದಿಗ್ಗಜರಾದ ಸೌರವ್​ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್​ ಭಾಗವಹಿಸಿದ್ದಾರೆ. ಇಬ್ಬರಲ್ಲಿ ಯಾರು ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ? ಯಾರಿಗೆ ಎಷ್ಟು ಹಣ ಸಿಕ್ಕಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.

ಇದನ್ನೂ ಓದಿ:

KBC 13: ‘ಕರೋಡ್​ಪತಿ’ ಶೋನಲ್ಲಿ 3.4 ಲಕ್ಷ ರೂ. ಗೆದ್ದ ಸ್ಪರ್ಧಿ ವಿರುದ್ಧ ಬಿತ್ತು ಕೇಸ್​; ಮಾಡಿದ ತಪ್ಪೇನು?

KBCಯಲ್ಲಿ ತಮ್ಮ ಸಾಮಾಜಿಕ ಸೇವೆ ಬಗ್ಗೆ ಅಮಿತಾಭ್​​ಗೆ ಸೋನು ಸೂದ್ ಹೇಳಿದ್ದೇನು?

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು