AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣ-ಅಮಿತಾಭ್​ ಬಚ್ಚನ್​ ಫೋಟೋ ಲೀಕ್​; ‘ಗುಡ್​ಬೈ’ ತಂಡದಲ್ಲಿ ಏನಾಗ್ತಿದೆ?

Rashmika Mandanna: ‘ಗುಡ್​ಬೈ’ ಚಿತ್ರಕ್ಕೆ ನಿರ್ದೇಶಕ ವಿಕಾಸ್​ ಬಹ್ಲ್​ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಹಿರಿಯ ನಟಿ ನೀನಾ ಗುಪ್ತಾ, ಥಪ್ಪಡ್​ ಖ್ಯಾತಿಯ ಬಾಲಿವುಡ್​ ನಟ ಪವೈಲ್​ ಗುಲಾಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ-ಅಮಿತಾಭ್​ ಬಚ್ಚನ್​ ಫೋಟೋ ಲೀಕ್​; ‘ಗುಡ್​ಬೈ’ ತಂಡದಲ್ಲಿ ಏನಾಗ್ತಿದೆ?
ರಶ್ಮಿಕಾ ಮಂದಣ್ಣ-ಅಮಿತಾಭ್​ ಬಚ್ಚನ್​ ಫೋಟೋ ಲೀಕ್​
TV9 Web
| Updated By: ಮದನ್​ ಕುಮಾರ್​|

Updated on: Jul 13, 2021 | 3:44 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರ ಗಮನವೆಲ್ಲ ಈಗ ಹಿಂದಿ ಚಿತ್ರರಂಗದ ಮೇಲಿದೆ. ಅಲ್ಲಿನ ದೊಡ್ಡ ದೊಡ್ಡ ಸ್ಟಾರ್​ ಕಲಾವಿದರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಸಿಗುತ್ತಿದೆ. ಈ ನಡುವೆ ಕೊಡಗಿನ ಕುವರಿಗೆ ಬೇಸರ ಆಗುವಂತಹ ಘಟನೆ ನಡೆದಿದೆ. ಅಮಿತಾಭ್​ ಬಚ್ಚನ್ (Amitabh Bachchan) ಜೊತೆ ಅವರು ನಟಿಸುತ್ತಿರುವ ‘ಗುಡ್​ಬೈ’ (Goodbye) ಸಿನಿಮಾದ ಶೂಟಿಂಗ್​ ಸೆಟ್​ನಿಂದ ಕೆಲವು ಫೋಟೋಗಳು ಸೋರಿಕೆ ಆಗಿವೆ.

ರಶ್ಮಿಕಾ ಈಗ ತಾನೇ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ‘ಗುಡ್​ಬೈ’ ಚಿತ್ರದ ಶೂಟಿಂಗ್​ನಲ್ಲಿ ಅವರು ಭಾಗಿ ಆಗಿದ್ದಾರೆ. ಆ ಸಿನಿಮಾದಲ್ಲಿನ ಪಾತ್ರಧಾರಿಗಳ ಫಸ್ಟ್​ಲುಕ್​ಗಳನ್ನು ವಿಶೇಷವಾಗಿ ಬಹಿರಂಗಪಡಿಸಬೇಕು ಎಂದು ತಂಡ ಪ್ಲ್ಯಾನ್​ ಮಾಡಿಕೊಂಡಿರುತ್ತದೆ. ಆದರೆ ಶೂಟಿಂಗ್​ ಹಂತದಲ್ಲಿ ಇರುವಾಗಲೇ ಅಮಿತಾಭ್​ ಬಚ್ಚನ್​ ಅವರ ಲುಕ್​ ಬಹಿರಂಗ ಆಗಿದೆ. ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಬಿಗ್​ ಬಿ ಮತ್ತು ರಶ್ಮಿಕಾ ಅವರ ಫೋಟೋಗಳು ಫ್ಯಾನ್ಸ್​ ಪೇಜ್​ಗಳಲ್ಲಿ ಹರಿದಾಡುತ್ತಿವೆ.

ಗುಲಾಬಿ ಬಣ್ಣದ ಅಂಗಿ ಮತ್ತು ಅದರ ಮೇಲೆ ಹಾಫ್​ ಜಾಕೆಟ್​ ಧರಿಸಿರುವ ಅಮಿತಾಭ್​ ಬಚ್ಚನ್​ ಅವರು ಸಾಲ್ಟ್​ ಆ್ಯಂಡ್​ ಪೆಪ್ಪರ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ರಶ್ಮಿಕಾ ಮಂದಣ್ಣ ಅವರು ಬಹಳ ಕುತೂಹಲದಿಂದ ಏನನ್ನೋ ವೀಕ್ಷಿಸುತ್ತಿರುವಂತಹ ದೃಶ್ಯ ಈ ಫೋಟೋದಲ್ಲಿದೆ. ಸದ್ಯ ಮುಂಬೈನಲ್ಲಿ ಈ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ.

‘ಗುಡ್​ಬೈ’ ಚಿತ್ರಕ್ಕೆ ನಿರ್ದೇಶಕ ವಿಕಾಸ್​ ಬಹ್ಲ್​ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಹಿರಿಯ ನಟಿ ನೀನಾ ಗುಪ್ತಾ, ಥಪ್ಪಡ್​ ಖ್ಯಾತಿಯ ಬಾಲಿವುಡ್​ ನಟ ಪವೈಲ್​ ಗುಲಾಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಗುಡ್​ಬೈ’ ಮಾತ್ರವಲ್ಲದೇ ಇನ್ನೂ ಅನೇಕ ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ. ಬಾಲಿವುಡ್​ನಲ್ಲಿ ಅವರು ಸಿದ್ಧಾರ್ಥ್​ ಮಲ್ಹೋತ್ರಾಗೆ ಜೋಡಿಯಾಗಿ ‘ಮಿಷನ್​ ಮಜ್ನು’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ನಟಿಸಿರುವ ‘ಪುಷ್ಪ’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಆ ಚಿತ್ರದಿಂದ ರಶ್ಮಿಕಾ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲು ಸಿಗುವ ನಿರೀಕ್ಷೆ ಇದೆ. ಕೆಜಿಎಫ್​, ಬಾಹುಬಲಿ ರೀತಿಯೇ ‘ಪುಷ್ಪ’ ಕೂಡ ಎರಡು ಪಾರ್ಟ್​​ನಲ್ಲಿ ಮೂಡಿಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:

‘ಆತ ಯಾರು ದಯವಿಟ್ಟು ಹೇಳಿ’; ಹುಡುಗನ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ದುಂಬಾಲು ಬಿದ್ದ ಅಭಿಮಾನಿಗಳು

‘ಸರಿಯಾಗಿ ಪ್ರಪೋಸ್​ ಆದ್ರೂ ಮಾಡು’​; ನನ್ನ ಮದುವೆ ಆಗಿ ಎಂದು ನೇರವಾಗಿ ಕೇಳಿದವನಿಗೆ ರಶ್ಮಿಕಾ ಖಡಕ್​ ಉತ್ತರ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ