AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mimi Trailer: ‘ಮಿಮಿ’ ಟ್ರೇಲರ್​ ನೋಡಿದರೆ ಸಾಕು, ಕಣ್ಣಿಗೆ ಕಟ್ಟುತ್ತದೆ ಬಾಡಿಗೆ ತಾಯಿಯ ಕಷ್ಟ

Kriti Sanon: ವಿದೇಶಿ ದಂಪತಿಗೆ ಮಗು ಹೆತ್ತು ಕೊಡಲು ಒಪ್ಪಿಕೊಳ್ಳುವ ಬಾಡಿಗೆ ತಾಯಿಯ ಪಾತ್ರದಲ್ಲಿ ಕೃತಿ ಸನೋನ್​ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಅವರು 15 ಕೆಜಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ.

Mimi Trailer: ‘ಮಿಮಿ’ ಟ್ರೇಲರ್​ ನೋಡಿದರೆ ಸಾಕು, ಕಣ್ಣಿಗೆ ಕಟ್ಟುತ್ತದೆ ಬಾಡಿಗೆ ತಾಯಿಯ ಕಷ್ಟ
‘ಮಿಮಿ’ ಟ್ರೇಲರ್​ ನೋಡಿದರೆ ಸಾಕು; ಕಣ್ಣಿಗೆ ಕಟ್ಟುತ್ತದೆ ಬಾಡಿಗೆ ತಾಯಿಯ ಕಷ್ಟ
TV9 Web
| Updated By: Digi Tech Desk|

Updated on:Jul 13, 2021 | 2:31 PM

Share

ಬಾಲಿವುಡ್​ ನಟಿ ಕೃತಿ ಸನೋನ್​ (Kriti Sanon) ಅವರಿಗೆ ಒಂದಕ್ಕಿಂತ ಮತ್ತೊಂದು ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಕೇವಲ ಗ್ಲಾಮರ್​ ಗೊಂಬೆಯಾಗಿ ಉಳಿದುಕೊಳ್ಳದೇ ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾಡುತ್ತ ಅವರು ಮುನ್ನುಗ್ಗುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಆ ಪೈಕಿ ‘ಮಿಮಿ’ ಚಿತ್ರ ಹೆಚ್ಚು ಗಮನ ಸೆಳೆಯುತ್ತಿದೆ. ಈಗ ಆ ಸಿನಿಮಾದ ಟ್ರೇಲರ್​ (Mimi Trailer) ಬಿಡುಗಡೆ ಆಗಿದ್ದು, ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ಕೃತಿ ಸನೋನ್​ ಬಾಡಿಗೆ ತಾಯಿ (Surrogacy Mother) ಪಾತ್ರ ನಿಭಾಯಿಸಿದ್ದಾರೆ.

ವಿದೇಶಿ ದಂಪತಿಗೆ ಮಗು ಹೆತ್ತು ಕೊಡಲು ಒಪ್ಪಿಕೊಳ್ಳುವ ಬಾಡಿಗೆ ತಾಯಿಯ ಪಾತ್ರದಲ್ಲಿ ಕೃತಿ ಸನೋನ್​ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಅವರು 15 ಕೆಜಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಈಗ ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಹಲವು ಅಂಶಗಳು ಬಹಿರಂಗ ಆಗಿವೆ. ಕಾಮಿಡಿ ಮೂಲಕ ಆರಂಭ ಆಗುವ ಈ ಕಥೆ ನಂತರ ಭಾವನಾತ್ಮಕ ತಿರುವು ಪಡೆದುಕೊಳ್ಳಲಿದೆ.

ಬಾಡಿಗೆ ತಾಯಿ ಆಗುವವರು ಏನೆಲ್ಲ ಕಷ್ಟಪಡಬೇಕಾಗುತ್ತದೆ ಎಂಬುದನ್ನು ತುಂಬ ಡಿಫರೆಂಟ್​ ಆಗಿ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಖ್ಯಾತ ನಟ ಪಂಕಜ್​ ತ್ರಿಪಾಠಿ ಅವರು ‘ಮಿಮಿ’ ಚಿತ್ರದಲ್ಲಿ ಬಹುಮುಖ್ಯ ಪಾತ್ರ ಮಾಡಿದ್ದಾರೆ. ಲಕ್ಷ್ಮಣ್​ ಉಟೇಕರ್​ ಅವರು ನಿರ್ದೇಶನ ಮಾಡಿದ್ದಾರೆ. ಎ.ಆರ್​. ರೆಹಮಾನ್​ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಕೊರೊನಾ ವೈರಸ್​ ಎರಡನೇ ಅಲೆ ಕಾರಣದಿಂದ ಬಹುತೇಕ ಕಡೆಗಳಲ್ಲಿ ಬಂದ್​ ಆಗಿದ್ದ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ. ಮುಂದೇನಾಗಲಿದೆಯೋ ಎಂಬ ಆತಂಕ ಕೂಡ ಮನೆ ಮಾಡಿದೆ. ಹಾಗಾಗಿ ನೇರವಾಗಿ ಓಟಿಟಿ ಪ್ಲಾಟ್​ಫಾರ್ಮ್​ಗಳ ಮೂಲಕ ಸಿನಿಮಾ ಬಿಡುಗಡೆ ಮಾಡಲು ಅನೇಕ ನಿರ್ಮಾಪಕರು ಆಸ್ತಕಿ ತೋರಿಸುತ್ತಿದ್ದಾರೆ. ‘ಮಿಮಿ’ ಚಿತ್ರ ಕೂಡ ಅದೇ ಸಾಲಿಗೆ ಸೇರುತ್ತಿದೆ. ಈ ಚಿತ್ರ ನೇರವಾಗಿ ಆನ್​ಲೈನ್​ ಮೂಲಕ ಬಿಡುಗಡೆ ಆಗಲಿದೆ. ಜಿಯೋ ಸಿನಿಮಾಸ್​ ಮತ್ತು ನೆಟ್​ಫ್ಲೆಕ್ಸ್​ನಲ್ಲಿ ಜು.30ರಂದು ವೀಕ್ಷಣೆಗೆ ಲಭ್ಯವಾಗಲಿದೆ.

‘ಮಿಮಿ’ ಚಿತ್ರದ ಬಗ್ಗೆ ಕೃತಿ ಸನೋನ್​ ಕೂಡ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಚಿತ್ರದ ಟ್ರೇಲರ್​ ಹಂಚಿಕೊಂಡಿರುವ ಅವರು ‘ಇದೊಂದು ಅನಿರೀಕ್ಷಿತ ಕಥೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಕಾಟನ್​ಪೇಟೆಯಲ್ಲಿ ಸನ್ನಿ ಲಿಯೋನ್ ಡಾನ್ಸ್​; ಮತ್ತೆ ಕರ್ನಾಟಕಕ್ಕೆ ಬಂದ ಬಾಲಿವುಡ್​ ನಟಿ  

ಬಾಲಿವುಡ್​ನಲ್ಲಿ ಲಿಂಗ ತಾರತಮ್ಯ; ಸ್ಟಾರ್​ ನಟರಿಂದ ವಿದ್ಯಾ ಬಾಲನ್​ಗೆ ಈ ಒಂದು ಕಷ್ಟ ತಪ್ಪಿರಲಿಲ್ಲ

Published On - 2:02 pm, Tue, 13 July 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ