AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಟನ್​ಪೇಟೆಯಲ್ಲಿ ಸನ್ನಿ ಲಿಯೋನ್ ಡಾನ್ಸ್​; ಮತ್ತೆ ಕರ್ನಾಟಕಕ್ಕೆ ಬಂದ ಬಾಲಿವುಡ್​ ನಟಿ  

ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಅವರು ಬಂಡವಾಳ ಹೂಡಿರುವ, ವೈ.ರಾಜ್​ಕುಮಾರ್​ನಿರ್ದೇಶನದ ಹೊಸ ಚಿತ್ರದಲ್ಲಿ ಸನ್ನಿ ಅವರ ಸ್ಪೆಷಲ್‌ ಸಾಂಗ್‌ ಇರಲಿದೆ.

ಕಾಟನ್​ಪೇಟೆಯಲ್ಲಿ ಸನ್ನಿ ಲಿಯೋನ್ ಡಾನ್ಸ್​; ಮತ್ತೆ ಕರ್ನಾಟಕಕ್ಕೆ ಬಂದ ಬಾಲಿವುಡ್​ ನಟಿ  
ಸನ್ನಿ ಲಿಯೋನ್​
TV9 Web
| Edited By: |

Updated on: Jul 12, 2021 | 6:50 PM

Share

ನಟಿ ಸನ್ನಿ ಲಿಯೋನ್​ ಬಾಲಿವುಡ್​ ಮಾತ್ರವಲ್ಲದೆ ದಕ್ಷಿಣ ಭಾರತಕ್ಕೂ ಚಿರಪರಿಚಿತರು. ಕನ್ನಡದಲ್ಲಿ ಅವರು ವಿಶೇಷ ಸಾಂಗ್​ಗೆ ಹೆಜ್ಜೆ ಕೂಡ ಹಾಕಿದ್ದಾರೆ. ಈಗ ಅವರು ಮತ್ತೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅರ್ಥಾತ್​, ಕನ್ನಡದ ಸಿನಿಮಾವೊಂದರಲ್ಲಿ ಹೆಜ್ಜೆ ಹಾಕೋಕೆ ರೆಡಿ ಆಗಿದ್ದಾರೆ.

ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಅವರು ಬಂಡವಾಳ ಹೂಡಿರುವ, ವೈ.ರಾಜ್​ಕುಮಾರ್​ನಿರ್ದೇಶನದ ಹೊಸ ಚಿತ್ರದಲ್ಲಿ ಸನ್ನಿ ಅವರ ಸ್ಪೆಷಲ್‌ ಸಾಂಗ್‌ ಇರಲಿದೆ. ಇದು ಬಹುಭಾಷೆಯಲ್ಲಿ ತೆರೆ ಕಾಣಲಿದೆ. ಕನ್ನಡದಲ್ಲಿ ಈ ಚಿತ್ರಕ್ಕೆ ‘ಕಾಟನ್‌ ಪೇಟೆ ಗೇಟ್‌’ ಎಂದು ಟೈಟಲ್​ ಇಡಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಸಿನಿಮಾದ ಶೂಟಿಂಗ್ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊವಿಡ್​ ಕಾರಣದಿಂದ ಶೂಟಿಂಗ್ ವಿಳಂಬವಾಗಿದೆ. ಈಗ ಜುಲೈ 27ರಿಂದ ಹಾಡಿನ ಶೂಟಿಂಗ್​ ಹೈದರಾಬಾದ್​ನಲ್ಲಿ ನಡೆಯಲಿದೆ. ನಟಿ ಸನ್ನಿ ಲಿಯೋನ್​ ಶೂಟಿಂಗ್​ನಲ್ಲಿ ಪಾಲ್ಗೊಳ್ಳೋಕೆ ಕೆಲವರು ಕಂಡೀಷನ್​ ಹಾಕಿದ್ದಾರಂತೆ. ಈ ಕಂಡಿಷನ್​ಗೆ ಒಪ್ಪಿಗೆ ಸೂಚಿಸಲಾಗಿದೆ.

ಇನ್ನು, ಈ ಹಾಡಿಗಾಗಿ ಸನ್ನಿ ದೊಡ್ಡ ಮೊತ್ತದ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಈ ಹಾಡಿಗಾಗಿ ಸನ್ನಿ 50 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ. ಈ ಮೊದಲು ಸನ್ನಿ ಕನ್ನಡದ ಡಿಕೆ ಹಾಗೂ ಲವ್​ ಯು ಆಲಿಯಾ ಸಿನಿಮಾಗೆ ಹೆಜ್ಜೆ ಹಾಕಿದ್ದರು. ಕೋಟಿಗೊಬ್ಬ 3 ಸಿನಿಮಾದಲ್ಲೂ ಸನ್ನಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ತೆಲುಗಿನಲ್ಲಿ ‘ಸೀತಣ್ಣಪೇಟ ಗೇಟ್‌’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದೆ. ಸನ್ನಿ ಲಿಯೋನ್‌ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಕ್ರೈಂ ಥ್ರಿಲ್ಲರ್‌ ಸಿನಿಮಾ ಇದಾಗಿದೆ. ಅದಿತಿ ಪ್ರಭುದೇವ ಮತ್ತು ಬೆಳಗಾವಿ ಮೂಲದ ಹೊಸ ನಟ ಸಚಿನ್‌ ಧನ್‌ಪಾಲ್‌ ಎಂಬುವವರು ನಟಿಸುತ್ತಿರುವ ‘ಚಾಂಪಿಯನ್‌’ ಎಂಬ ಚಿತ್ರದ ವಿಶೇಷ ಹಾಡಿಗೆ ಸನ್ನಿ  ನೃತ್ಯ ಮಾಡಿದ್ದಾರೆ.

ಇದನ್ನೂ ಓದಿ: ಮಾದಕತೆಯಲ್ಲಿ ಸನ್ನಿ ಲಿಯೋನ್​ಗೆ ಪೈಪೋಟಿ ನೀಡಲು ಬಂದ ಸುಂದರಿ; ನೆಟ್ಟಿಗರು ಮಾಡಿದ ಕಮೆಂಟ್​ ಏನು?

Sunny leone: ಪೆಟ್ರೋಲ್ ಬೆಲೆಯಿಂದ ತತ್ತರಿಸಿರುವ ಜನರಿಗೆ ಆರೋಗ್ಯದ ಪಾಠ ಹೇಳಿದ ಸನ್ನಿ ಲಿಯೋನ್