ಈ ಪ್ರಕರಣದಲ್ಲಿ ಯಾರೋ ನನ್ನನ್ನು ಸಿಲುಕಿಸೋಕೆ ಪ್ರಯತ್ನ ಮಾಡುತ್ತಿದ್ದಾರೆ: ಉಮಾಪತಿ ಶ್ರೀನಿವಾಸ್​ ಗೌಡ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 12, 2021 | 5:11 PM

ಸ್ಪಷ್ಟನೆ ನೀಡೋಕೆ ದರ್ಶನ್ ನನಗೆ ಯಾವುದೇ ಗಡುವು ನೀಡಿಲ್ಲ. ನನ್ನ ವಿರುದ್ಧ ಜನರು ಸಾವಿರ ಹೇಳಬಹುದು. ಪೊಲೀಸರ ತನಿಖೆ ಬಳಿಕ ಅಂತಿಮ ಸತ್ಯಾಸತ್ಯತೆ ಗೊತ್ತಾಗುತ್ತೆ ಎಂದಿದ್ದಾರೆ ಉಮಾಪತಿ.

ನಟ ದರ್ಶನ್​ ಹೆಸರಲ್ಲಿ ವಂಚನೆ ಪ್ರಯತ್ನ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ನಿಮ್ಮ ಗೆಳೆಯರು ದೊಡ್ಡ ಮೊತ್ತ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಶ್ಯೂರಿಟಿಯಲ್ಲಿ ನಿಮ್ಮ ಹೆಸರಿದೆ ಎಂದು ನಕಲಿ ಬ್ಯಾಂಕ್​ ಸಿಬ್ಬಂದಿ ದರ್ಶನ್​ ಬಳಿ ತೆರಳಿದ್ದರು. ಈಗ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣ ನಿತ್ಯ ತಿರುವು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಇಂದು (ಜು.12) ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದಾರೆ.

‘ಸ್ಪಷ್ಟನೆ ನೀಡೋಕೆ ದರ್ಶನ್ ನನಗೆ ಯಾವುದೇ ಗಡುವು ನೀಡಿಲ್ಲ. ನನ್ನ ವಿರುದ್ಧ ಜನರು ಸಾವಿರ ಹೇಳಬಹುದು. ಪೊಲೀಸರ ತನಿಖೆ ಬಳಿಕ ಅಂತಿಮ ಸತ್ಯಾಸತ್ಯತೆ ಗೊತ್ತಾಗುತ್ತೆ. ನಟ ದರ್ಶನ್​ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಪ್ರಕರಣದಲ್ಲಿ ಯಾರೋ ನನ್ನನ್ನು ಸಿಕ್ಕಿಸೋಕೆ ಪ್ರಯತ್ನ ಮಾಡುತ್ತಿದ್ದಾರೆ. ಚರ್ಚೆ ಮೂಲಕ ಇದನ್ನು ಬಗೆಹರಿಸಿಕೊಳ್ಳಲ್ಲ. ಕಾನೂನು ಮೂಲಕವೇ ಇದನ್ನು ಬಗೆಹರಿಸಿಕೊಳ್ಳುತ್ತೇವೆ. ಇದನ್ನು ದರ್ಶನ್ ಎದುರೇ ಪೊಲೀಸರ ಬಳಿ ಹೇಳಿದ್ದೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ದರ್ಶನ್​​ಗೆ​ ವಂಚನೆ ಪ್ರಯತ್ನ; ನಾನು ಈ ಪ್ರಕರಣದಲ್ಲಿ ಮಾತಾಡಿ ಬಾಯಿ ಗಲೀಜು ಮಾಡಿಕೊಳ್ಳಲ್ಲ: ಉಮಾಪತಿ ಗೌಡ