ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಅರುಣಾ ಕುಮಾರಿ ಫೇಕ್ ಐಡಿ ಬಗ್ಗೆ ಕೆನರಾ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ

ಗೂಗಲ್‌ನಲ್ಲಿ ಬರುವ ಐಡಿ ಕಾರ್ಡ್ ರೀತಿಯಲ್ಲಿ ಈ ಐಡಿ ಕಾರ್ಡ್ ಸೃಷ್ಟಿ ಮಾಡಲಾಗಿದೆ. ಗೂಗಲ್‌ನಲ್ಲಿ ಸಿಗುವ ಕಾರ್ಡ್‌ ನಂಬರ್ ಬಳಸಿ ಹೀಗೆ ಕ್ರಿಯೇಟ್ ಮಾಡಲಾಗಿದೆ.

ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಅರುಣಾ ಕುಮಾರಿ ಫೇಕ್ ಐಡಿ ಬಗ್ಗೆ ಕೆನರಾ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ
ಅರುಣಾ ಕುಮಾರಿ
Follow us
TV9 Web
| Updated By: ganapathi bhat

Updated on:Jul 13, 2021 | 4:07 PM

ಬೆಂಗಳೂರು: ನಟ​ ದರ್ಶನ್​ ಹೆಸರಿನಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣ ನಿರ್ಮಾಪಕ ಉಮಾಪತಿ ಗೌಡ, ವಂಚಕಿ ಅರುಣಾ ಕುಮಾರಿ ಸುತ್ತಲೂ ಒಂದೊಂದು ಹೇಳಿಕೆ, ತಿರುವು ಹಾಗೂ ಸ್ಪಷ್ಟನೆ ಪಡೆಯುತ್ತಾ ಬೆಳೆಯುತ್ತಿದೆ. ಇದೀಗ ಈ ಪ್ರಕರಣದ ಬಗ್ಗೆ, ಟಿವಿ9ಗೆ ಕೆನರಾ ಬ್ಯಾಂಕ್‌ನ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಆರೋಪಿ ಅರುಣಾಕುಮಾರಿ ಐಡಿ ಕಾರ್ಡ್ ಫೇಕ್. ಇಲ್ಲಿ ಏರಿಯಾ ಬ್ರಾಂಚ್ ಮ್ಯಾನೇಜರ್ ಅನ್ನೋ ಹುದ್ದೆಯೇ ಇಲ್ಲ ಎಂದು ತಿಳಿಸಿದ್ದಾರೆ.

ಅರುಣಾ ಕುಮಾರಿ ಐಡಿ ಕಾರ್ಡ್ ಬಗ್ಗೆ ಕೆನರಾ ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ನ ಐಡಿ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕ ಇರಲ್ಲ. ಐಡಿ ಕಾರ್ಡ್‌ನಲ್ಲಿ ಸಿಬ್ಬಂದಿಯ ಮೊಬೈಲ್ ಸಂಖ್ಯೆ ಹಾಕಲ್ಲ. ಬ್ಯಾಂಕ್‌ನ ಐಡಿ ಕಾರ್ಡ್‌ನಲ್ಲಿ ಎಂಪ್ಲಾಯ್ ಐಡಿ ಹಾಕಲ್ಲ. ಇದು ನಕಲಿ ಐಡಿ. ಆರೋಪಿ ಅರುಣಾ ಕುಮಾರಿ ಸ್ವತಃ‌ ನಕಲಿ ಐಡಿ ಸೃಷ್ಟಿಸಿದ್ದಾಳೆ ಎಂದು ತಿಳಿಸಿದ್ದಾರೆ.

ಗೂಗಲ್‌ನಲ್ಲಿ ಬರುವ ಐಡಿ ಕಾರ್ಡ್ ರೀತಿಯಲ್ಲಿ ಈ ಐಡಿ ಕಾರ್ಡ್ ಸೃಷ್ಟಿ ಮಾಡಲಾಗಿದೆ. ಗೂಗಲ್‌ನಲ್ಲಿ ಸಿಗುವ ಕಾರ್ಡ್‌ ನಂಬರ್ ಬಳಸಿ ಹೀಗೆ ಕ್ರಿಯೇಟ್ ಮಾಡಲಾಗಿದೆ. ಗೂಗಲ್‌ನಲ್ಲಿ ಕೆ. ಶಿವಪ್ರಸಾದ್‌ ಅನ್ನೋರ ಐಡಿ ಬರುತ್ತೆ. ಇದರ ಐಡಿ ಕಾರ್ಡ್‌ ನಂಬರ್ ಸಹ 41786 ಇದೆ. ಇದೇ ಸಂಖ್ಯೆಯನ್ನು ಬಳಸಿ ನಕಲಿ ಐಡಿ ಕಾರ್ಡ್‌ ಸೃಷ್ಟಿ ಮಾಡಲಾಗಿದೆ. ಹೀಗಾಗಿ ವಂಚಕಿ ಅರುಣಾಕುಮಾರಿ ಐಡಿ ಕಾರ್ಡ್ ಫೇಕ್ ಎಂದು ಟಿವಿ9ಗೆ ಕೆನರಾ ಬ್ಯಾಂಕ್‌ನ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

ಆರೋಪಿ ಅರುಣಾ ಕುಮಾರಿ ನಾಪತ್ತೆ ಮತ್ತೊಂದೆಡೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಅರುಣಾ ಕುಮಾರಿ ನಾಪತ್ತೆಯಾಗಿದ್ದಾರೆ. ಮನೆಗೆ ಬೀಗ ಹಾಕಿ ಆರೋಪಿ ಅರುಣಾ ಕುಮಾರಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಜಂಬೂಸವಾರಿ ದಿಣ್ಣೆಯ ಬಾಡಿಗೆ ಮನೆಯಿಂದ ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ನನ್ನ ಲೈಫ್ ಹಾಳಾದರೆ ಯಾರೂ ಕೂಡ ಬರುವುದಿಲ್ಲ. ನಿರ್ಮಾಪಕ ಉಮಾಪತಿ ಮಾಡಿರುವುದು ತಪ್ಪು. ಅವರ ಸಮಸ್ಯೆಗಳನ್ನು ಅವರು ಬಗೆಹರಿಸಿಕೊಳ್ಳಬೇಕಿತ್ತು. ಈ ಪ್ರಕರಣದಲ್ಲಿ ನನ್ನನ್ನು ಬಳಸಿಕೊಂಡಿದ್ದು ತಪ್ಪು. ದಯವಿಟ್ಟು ನಮ್ಮನ್ನು ಬದುಕಲು ಬಿಟ್ಟುಬಿಡಿ. ನನ್ನ ಜತೆ ಉಮಾಪತಿಯನ್ನು ವಿಚಾರಣೆಗೆ ಕರೆದಿದ್ದರು. ವಿಚಾರಣೆಗೂ ಮುನ್ನವೇ ತಪ್ಪಿತಸ್ಥೆ ಎನ್ನುವುದು ಯಾಕೆ? ಎಂದು ಅರುಣಾ ಕುಮಾರಿ ಬಿಡುಗಡೆಯಾದ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

ಮನೆಯಲ್ಲಿ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ತೇವೆ ಅಂತಿದ್ದಾರೆ. ಉಮಾಪತಿ ಫೋನ್ ಮಾಡಿದ್ದು, ಕರೆದಿದ್ದು ಎಲ್ಲವೂ ಸತ್ಯ. ಮಾರ್ಚ್‌ ತಿಂಗಳಿಂದ ಉಮಾಪತಿ ನನಗೆ ಪರಿಚಯವಿದೆ. ಇದರಿಂದ ಉಮಾಪತಿಗೆ ಲಾಭವೋ, ನಷ್ಟವೋ ಗೊತ್ತಿಲ್ಲ. ನಿರ್ಮಾಪಕ ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ತಪ್ಪು. ಇದರಿಂದ ನನಗೆ ಒಂದು ರೂಪಾಯಿಯೂ ಸಿಕ್ಕಿಲ್ಲ. ನಮಗೆ ಸಿಗುತ್ತಿರುವುದು ಅವಮಾನ ಅಷ್ಟೆ ಎಂದು ಅರುಣಾ ಕುಮಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ಅಮಾಯಕಿ, ದಯವಿಟ್ಟು ನನ್ನನ್ನು ಬದುಕಲು ಬಿಡಿ: ಅರುಣಾ ಕುಮಾರಿ

ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್​ಗೌಡ ಪ್ರಕರಣ ಸುಖಾಂತ್ಯದತ್ತ?

Published On - 4:03 pm, Tue, 13 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ