Sarpatta Parambarai: ಸರ್ಪಟ್ಟ ಪರಂಬರೈ ಟ್ರೇಲರ್; ಕಟ್ಟುಮಸ್ತಾದ ಬಾಕ್ಸರ್ ಅವತಾರದಲ್ಲಿ ಮಿಂಚುತ್ತಿರುವ ಆರ್ಯ

Sarpatta Parambarai Trailer: ಸರ್ಪಟ್ಟ ಪರಂಬರೈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚೆನ್ನೈನ ಉತ್ತರ ಭಾಗದಲ್ಲಿನ ಬಾಕ್ಸಿಂಗ್ ಕಲ್ಚರ್ ಕುರಿತು ಕತೆಯನ್ನು ಹೊಂದಿರುವ ಈ ಚಿತ್ರವನ್ನು ಪಾ.ರಂಜಿತ್ ನಿರ್ದೇಶಿಸುತ್ತಿದ್ದಾರೆ. ಜುಲೈ 22ರಂದು ಆಮೆಜಾನ್ ಪ್ರೈಮ್​ನಲ್ಲಿ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

Sarpatta Parambarai: ಸರ್ಪಟ್ಟ ಪರಂಬರೈ ಟ್ರೇಲರ್; ಕಟ್ಟುಮಸ್ತಾದ ಬಾಕ್ಸರ್ ಅವತಾರದಲ್ಲಿ ಮಿಂಚುತ್ತಿರುವ ಆರ್ಯ
‘ಸರ್ಪಟ್ಟ ಪರಂಬರೈ’ ಚಿತ್ರದಲ್ಲಿ ಆರ್ಯ
Follow us
TV9 Web
| Updated By: Digi Tech Desk

Updated on: Jul 13, 2021 | 4:20 PM

ತಮ್ಮ ವಿಭಿನ್ನ ಬಗೆಯ ಪಾತ್ರಪೋಷಣೆ ಹಾಗೂ ಪಾತ್ರ ವೈವಿಧ್ಯದಿಂದ ದೇಶದ ಗಮನ ಸೆಳೆದಿರುವವರು ತಮಿಳು ನಟ ಆರ್ಯ. ಇದೀಗ ಆರ್ಯ ಅವರ ಹೊಸ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಬಾಕ್ಸರ್​ನ ಪಾತ್ರದಲ್ಲಿ ಅವರು ಮಿಂಚುತ್ತಿದ್ದಾರೆ. ಪಾ.ರಂಜಿತ್(Pa.Ranjith) ನಿರ್ದೇಶನದ ಸರ್ಪಟ್ಟ ಪರಂಬರೈ (Sarpatta Parambarai) ಚಿತ್ರವು ಉತ್ತರ ಚೆನ್ನೈನ ಬಾಕ್ಸಿಂಗ್ ಪರಂಪರೆಯನ್ನು ಕಟ್ಟಿಕೊಡುತ್ತದೆ. ಇದೀಗ ಬಿಡುಗಡೆಯಾಗಿರುವ ಟ್ರೇಲರ್​ನಲ್ಲಿ ಮೊದಲಿಗೆ ಉತ್ತರ ಚೆನ್ನೈನ ಜನರು ಬಾಕ್ಸಿಂಗ್ ಬಗ್ಗೆ ಪ್ರೀತಿಯನ್ನು ಹೇಗೆ ಬೆಳೆಸಿಕೊಂಡರು ಎಂಬುದನ್ನು ತಿಳಿಸಲಾಗಿದೆ. ಪಶುಪತಿಯ ಪಾತ್ರವು ಇಲ್ಲಿ ಬಾಕ್ಸಿಂಗ್ ಆರಂಭವಾದ ಬಗ್ಗೆ ತಿಳಿಸುತ್ತಾ, ಬ್ರಿಟೀಷರಿಂದ ಈ ಕ್ರೀಡೆಯನ್ನು ಕಲಿತು ಅವರನ್ನೇ ಮಣಿಸುವ ಮಟ್ಟಕ್ಕೆ ಬೆಳೆದ ನಂತರ ಇಲ್ಲಿನ ಜನರ ನರನಾಡಿಯಲ್ಲಿ ಈ ಕ್ರೀಡೆಯು ರಕ್ತಗತವಾಯಿತು ಎಂದು ತಿಳಿಸುತ್ತದೆ.

ಟ್ರೇಲರ್ ಮುಖಾಂತರ ತಿಳಿಯುವುದೇನೆಂದರೆ, ಬಾಕ್ಸಿಂಗ್ ಎನ್ನುವುದು ಅಲ್ಲಿ ಕೇವಲ ಪರಂಪರೆಯಾಗಿ ಉಳಿದಿಲ್ಲ. ಅದು ಅಲ್ಲಿ ಪ್ರತಿಷ್ಠೆಯಾಗಿ ಬದಲಾಗಿದೆ. ತಮಿಳಿನ ಖ್ಯಾತ ನಟ ಸೂರ್ಯ ಟ್ರೇಲರ್ ಅನ್ನು ಟ್ವಿಟರ್​ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಇಡೀ ಚಿತ್ರತಂಡದ ಶ್ರಮ ಸಿನಿಮಾವನ್ನು ತೆರೆಯ ಮೇಲೆ ನೋಡುವಾಗ ವೇದ್ಯವಾಗುತ್ತದೆ; ಚಿತ್ರ ಗೆಲ್ಲಲಿ ಎಂದು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಚಿತ್ರದ ಟ್ರೇಲರ್ ಇಲ್ಲಿದೆ:

ಚಿತ್ರದಲ್ಲಿ 1970ರ ಕಾಲದ ಚೆನ್ನೈ ಅನ್ನು ಮರು ನಿರ್ಮಾಣ ಮಾಡಲಾಗಿದೆ. ನಿರ್ದೇಶಕ ಪಾ.ರಂಜಿತ್ ಈ ಮೊದಲು 2014ರಲ್ಲಿ ‘ಮದ್ರಾಸ್’ ಚಿತ್ರದ ನಿರ್ದೇಶನದ ಸಂದರ್ಭದಲ್ಲಿ ಚೆನ್ನೈನ ಬಾಕ್ಸಿಂಗ್ ಪರಂಪರೆಯ ಬಗ್ಗೆ ಮೊದಲ ಬಾರಿಗೆ ತಿಳಿದುಕೊಂಡಿದ್ದಾಗಿ ಈ ಹಿಂದೆ ತಿಳಿಸಿದ್ದರು. ಟ್ರೇಲರ್​ನಲ್ಲಿ ಗಮನ ಸೆಳೆಯುವುದು ನೈಜ ಬಾಕ್ಸಿಂಗ್ ದೃಶ್ಯಗಳು. ಈ ಹಿಂದಿನ ಯಾವ ತಮಿಳು ಚಿತ್ರದಲ್ಲೂ ಇಷ್ಟು ನೈಜವಾಗಿ ಕ್ರೀಡೆಯನ್ನು ತೋರಿಸಿರಲಿಲ್ಲ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದು ಚಿತ್ರರಂಗದಲ್ಲಿ ನನ್ನ ಜೀವನವನ್ನು ನಿರ್ಧರಿಸಲಿದೆ ಎಂದು ಚಿತ್ರದ ಟ್ರೇಲರ್ ಬಿಡುಗಡೆಯ ಸಂದರ್ಭದಲ್ಲಿ ಆರ್ಯ ತಿಳಿಸಿದ್ದಾರೆ. ಚಿತ್ರಕ್ಕಾಗಿ ಒಬ್ಬ ಬಾಕ್ಸರ್​ನ ಹಾವ ಭಾವಗಳ ಜೊತೆಗೆ ಅದೇ ರೀತಿಯ ದೇಹ ಚಲನೆಯನ್ನೂ ತಿದ್ದಿಕೊಳ್ಳುವುದು ಸವಾಲಾಗಿತ್ತು. ಬಹಳ ಸಮಯದ ಕಠಿಣ ಶ್ರಮದ ಪರಿಣಾಮ, ನನ್ನ ಜೀವನದಲ್ಲಿಯೇ ವಿಶೇಷವಾದ ಚಿತ್ರ ಇದಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.

ಸರ್ಪಟ್ಟ ಪರಂಬರೈ ಚಿತ್ರವು ಜುಲೈ 22ರಂದು ಆಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾಗಲು ತಯಾರಾಗಿದೆ.

(Sarpatta Parambarai Trailer released on Amazon Prime Youtube Channel Starring Arya)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ