AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರುಣಾ ಕುಮಾರಿ ಜೊತೆ ನಾನೂ ಒಮ್ಮೆ ಮಾತನಾಡಿದ್ದೇನೆ: ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ಹೇಳಿದ್ದೇನು?

ಅರುಣಾ ಕುಮಾರಿ ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆ ಇದೆ. ವಂಚನೆಗೊಳಗಾದವರು ಒಬ್ಬೊಬ್ಬರೇ ಹೊರಬರಬಹುದು ಟಿವಿ9ಗೆ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ಅರುಣಾ ಕುಮಾರಿ ಜೊತೆ ನಾನೂ ಒಮ್ಮೆ ಮಾತನಾಡಿದ್ದೇನೆ: ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ಹೇಳಿದ್ದೇನು?
ನಾಗೇಂದ್ರ ಪ್ರಸಾದ್
Follow us
TV9 Web
| Updated By: Digi Tech Desk

Updated on:Jul 13, 2021 | 5:43 PM

ಬೆಂಗಳೂರು: ನನ್ನ ಸ್ನೇಹಿತರಿಗೆ ಕೂಡ ಅರುಣಾ ಕುಮಾರಿಯಿಂದ ವಂಚನೆ ಆಗಿದೆ. ನನ್ನ ಆತ್ಮೀಯರೊಬ್ಬರು ಈ ವಿಚಾರ ಹೇಳಿಕೊಂಡಿದ್ದಾರೆ ಎಂದು ಟಿವಿ9ಗೆ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಅವರು ಆಕೆಯ ಬಗ್ಗೆ ಇರುವಂಥಾ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ದರ್ಶನ್​, ಉಮಾಪತಿ ಮನೆಗೆ ಭೇಟಿ ನೀಡಿ ಹೇಳಿದ್ದೇನೆ ಎಂದು ನಾಗೇಂದ್ರ ಪ್ರಸಾದ್ ಟಿವಿ9 ವಾಹಿನಿಗೆ ತಿಳಿಸಿದ್ದಾರೆ.

ಅರುಣಾ ಕುಮಾರಿ ಜೊತೆ ನಾನೂ ಒಮ್ಮೆ ಮಾತನಾಡಿದ್ದೇನೆ. ನನ್ನ ಸ್ನೇಹಿತರಿಗೆ ಕೂಡ ಆಕೆಯಿಂದ ವಂಚನೆ ಆಗಿದೆ. ಆದರೆ, ಈ ಬಗ್ಗೆ ದೂರು ಕೊಟ್ಟಿರಲಿಲ್ಲ. ನನಗೆ ಗೊತ್ತಿರುವ ವಿಚಾರವನ್ನು ನಟ ದರ್ಶನ್​ಗೆ ಹೇಳಿದ್ದೇನೆ. ಹಣದ ವಿಚಾರದಲ್ಲಿ ಮೋಸವಾಗಿದೆ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

ನನ್ನ ಸ್ನೇಹಿತ ಚಿತ್ರರಂಗಕ್ಕೆ ಸಂಬಂಧಿಸಿದವರಲ್ಲ, ಅವರು ಉದ್ಯಮಿ. ಆದರೆ, ಅವರಿಗೂ ಸಹ ಅರುಣಾ ಕುಮಾರಿ ವಂಚಿಸಿದ್ದಾರೆ. ಅರುಣಾ ಕುಮಾರಿ ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆ ಇದೆ. ವಂಚನೆಗೊಳಗಾದವರು ಒಬ್ಬೊಬ್ಬರೇ ಹೊರಬರಬಹುದು ಟಿವಿ9ಗೆ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ದರ್ಶನ್‌ ಕೇಸ್ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಯಲಿದೆ. ಈ ವೇಳೆ, ಸ್ಪೋಟಕ ಸುದ್ದಿ ಹೊರ ಬೀಳತ್ತೆ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ಈ ಬಗ್ಗೆ ಅವರು ಆಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ನಾನು ಹಾಗೂ ದರ್ಶನ್​ ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ನಡೆಸುತ್ತಿಲ್ಲ ಎಂದು ಸ್ಯಾಂಡಲ್​ವುಡ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಟಿವಿ9 ವಾಹಿನಿಗೆ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ಎಂಡ್‌ ಮಾಡೋಣ ಎಂದು ದರ್ಶನ್​ ಹೇಳಿದ್ದಾರೆ. ಹೀಗಾಗಿ, ನಾವು ಇಬ್ಬರೂ ಸೇರಿ ಒಂದು ನಿರ್ಣಯಕ್ಕೆ ಬಂದಿದ್ದೇವೆ. ಇನ್ನು ಮುಂದೆ ಈ ವಿಚಾರವಾಗಿ ನಾವು ಮಾತನಾಡಲ್ಲ ಎಂದು ಉಮಾಪತಿ ಗೌಡ ತಿಳಿಸಿದ್ದಾರೆ.

ಅದರಂತೆ, ನಟ ದರ್ಶನ್ ಹಾಗೂ ಉಮಾಪತಿ ಗೌಡ ನಡುವಿನ ಸಂಧಾನ ಸಕ್ಸಸ್ ಆದಂತಾಗಿದೆ. ದರ್ಶನ್ ಮತ್ತು ಉಮಾಪತಿ ಮಾತುಕತೆ ವಿಚಾರ ಹೀಗೆ ಸುಖಾಂತ್ಯ ಕಂಡಿದೆ. ಇಬ್ಬರೂ ಸೇರಿ ಒಂದು ನಿರ್ಣಯಕ್ಕೆ ಬಂದಿದ್ದೇವೆ. ಇನ್ನು ಮುಂದೆ ಈ ವಿಚಾರದಲ್ಲಿ ನಾವು ಭಾಗಿಯಾಗಲ್ಲ. 5 ಗಂಟೆಗೆ ಯಾವುದೇ ಪ್ರೆಸ್‌ ಮೀಟ್ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ; ಆರೋಪಿ ಅರುಣಾ ಕುಮಾರಿ ನಾಪತ್ತೆ

ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್​ಗೌಡ ಪ್ರಕರಣ ಸುಖಾಂತ್ಯದತ್ತ?

Published On - 4:50 pm, Tue, 13 July 21