ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿ ಅರುಣಾ ಕುಮಾರಿ ಪುರಾಣ ಬಿಚ್ಚಿಟ್ಟ ನಾಗವರ್ಧನ್, ನಾಗೇಂದ್ರ ಪ್ರಸಾದ್
ಫೇಸ್ಬುಕ್ ಮೂಲಕ ಪರಿಚಯವಾಗಿ ಸಿನಿಮಾಗೆ ಆಫರ್ ಕೊಟ್ಟಿದ್ದರು. ಅರುಣಾ ಕುಮಾರಿ ಸಿನಿಮಾಗೆ ಆಫರ್ ನೀಡಿದ್ದಳು ಎಂದು ಉದ್ಯಮಿ ನಾಗವರ್ಧನ್, ನಾಗೇಂದ್ರ ಪ್ರಸಾದ್ ಜೊತೆಗಿನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ತೆರೆದಿಟ್ಟಿದ್ದಾರೆ.
ಬೆಂಗಳೂರು: ಅರುಣಾ ಕುಮಾರಿಯಿಂದ ಉದ್ಯಮಿ ನಾಗವರ್ಧನ್ಗೆ ಮೋಸ ಆಗಿದೆ. ನಾಗವರ್ಧನ್ಗೆ 5 ವರ್ಷಗಳ ಹಿಂದೆ ಸಮಸ್ಯೆ ಆಗಿತ್ತು. ನಾಗವರ್ಧನ್ ಸಮಸ್ಯೆಗೆ ಅರುಣಾ ಕುಮಾರಿ ಕಾರಣ. 2015ರಲ್ಲಿ ಅರುಣಾ ಕುಮಾರಿ ಜತೆ ನಾನೂ ಮಾತನಾಡಿದ್ದೆ ಎಂದು ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಇಂದು (ಜುಲೈ 13) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನಾಗವರ್ಧನ್ ನನಗೆ ವಿಚಾರ ತಿಳಿಸಿದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ. ಈ ಬಗ್ಗೆ ಇಂದು ಬೆಳಗ್ಗೆ ನನಗೆ ನಾಗವರ್ಧನ್ ತಿಳಿಸಿದ್ದಾರೆ. ಉಮಾಪತಿ ಗೌಡ ಹಾಗೂ ದರ್ಶನ್ಗೆ ಕೂಡ ಮಾಹಿತಿ ಕೊಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.
ಅರುಣಾ ಕುಮಾರಿ ತುಂಬಾ ಫ್ರಾಡ್ ಮಾಡಿದ್ದಾಳೆ. ನನಗೆ 2015ರ ಸೆಪ್ಟೆಂಬರ್ ಕೊನೆಯಲ್ಲಿ ವಂಚನೆ ಮಾಡಿದ್ದಾರೆ. ಫೇಸ್ಬುಕ್ ಮೂಲಕ ಪರಿಚಯವಾಗಿ ಸಿನಿಮಾಗೆ ಆಫರ್ ಕೊಟ್ಟಿದ್ದರು. ಅರುಣಾ ಕುಮಾರಿ ಸಿನಿಮಾಗೆ ಆಫರ್ ನೀಡಿದ್ದಳು ಎಂದು ಉದ್ಯಮಿ ನಾಗವರ್ಧನ್, ನಾಗೇಂದ್ರ ಪ್ರಸಾದ್ ಜೊತೆಗಿನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ತೆರೆದಿಟ್ಟಿದ್ದಾರೆ.
ನಮ್ಮ ತಂದೆ ನಂದಿನಿ ಡೇರಿಯಲ್ಲಿ ಮ್ಯಾನೇಜರ್ ಎಂದಳು. ತುಂಬಾ ಜನ ಪರಿಚಯ, ಸಿನಿಮಾ ಮಾಡೋಣ ಎಂದಳು. ತೆಲುಗು ದೊಡ್ಡ ಸ್ಟಾರ್ ಸಿನಿಮಾ ಕನ್ನಡಕ್ಕೆ ರಿಮೇಕ್ ಎಂದಿದ್ದಳು. ಬಳಿಕ ಕನಕಪುರ ರಸ್ತೆಯಲ್ಲಿ ಆಸ್ತಿ ಬಗ್ಗೆ ಮಾತಾಡಿದ್ದಳು. 10-12 ಕೋಟಿ ರೂಪಾಯಿ ಮೊತ್ತದ ನಿರ್ಮಾಣ ಪ್ರಾಜೆಕ್ಟ್ ಎಂದು ಹೇಳಿದ್ದಳು. ಸಿನಿಮಾ ಮಾಡುವ ಬಗ್ಗೆ ಕೇಳಿದಾಗ ಬೇರೆ ವಿಚಾರ ಬಂತು. ನನಗೆ ಬೆದರಿಕೆ ಇದೆ ಎಂದು ಅರುಣಾ ಕುಮಾರಿ ಹೇಳಿದ್ದಳು ಎಂದು ನಾಗವರ್ಧನ್ ಕೆಲವು ವರ್ಷಗಳ ಹಿಂದಿನ ಘಟನಾವಳಿಗಳನ್ನು ಹೇಳಿದ್ದಾರೆ.
ಅರುಣಾ ಕುಮಾರಿ ನನ್ನ ಲೈಫ್ನಲ್ಲೂ ವಂಚನೆ ಮಾಡಿದ್ದಾಳೆ. ಬೇರೆ ಯಾರಿಗೂ ಹೀಗೆ ಆಗಬಾರದೆಂದು ಹೇಳುತ್ತಿರುವೆ. ಅವಳ ಪರಿಚಯ ಆದ ಮೇಲೆ ಸ್ನೇಹಿತರ ನಡುವೆ ಗೊಂದಲ ಸೃಷ್ಟಿಯಾಗುತ್ತಿತ್ತು. ಬಳಿಕ, ಒಬ್ಬೊಬ್ಬರನ್ನೇ ದೂರ ಮಾಡುತ್ತಿದ್ದಳು. ಈಗ ದರ್ಶನ್, ಉಮಾಪತಿ ನಡುವೆ ಇದೇ ಆಗಿದೆ. ನಾನು, ನಾಗೇಂದ್ರ ಪ್ರಸಾದ್ ದೂರವಾಗಲೂ ಇವಳೇ ಕಾರಣ ಎಂದು ನಾಗವರ್ಧನ್ ಮಾಹಿತಿ ನೀಡಿದ್ದಾರೆ.
ನನಗೆ ಅರುಣಾ ಕುಮಾರಿ ಅವರಿಂದ ಸುಮಾರು 15 ಲಕ್ಷ ರೂಪಾಯಿ ವಂಚನೆ ಆಗಿದೆ. ನನ್ನ ಬಳಿ ಚಿನ್ನಾಭರಣ, 6 ಲಕ್ಷವರೆಗೆ ಹಣ ಪಡೆದಿದ್ದಾಳೆ. ನಾನೊಬ್ಬನೇ ಅಲ್ಲ ನನ್ನ ಸ್ನೇಹಿತರಿಗೂ ವಂಚಿಸಿದ್ದಾಳೆ. 2016ರ ಫೆಬ್ರವರಿಯಲ್ಲಿ ಅವಳನ್ನು ಕೊನೆ ಬಾರಿ ಭೇಟಿಯಾಗಿದ್ದೆ. ನನ್ನ ಪತ್ನಿ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ಕೊಟ್ಟಿದ್ರು. ನಾನು ಅರುಣಾ ಕುಮಾರಿಗೆ ರಕ್ಷಣೆ ಕೊಡಲು ಹೋಗಿದ್ದೆ. ಮೂರು ತಿಂಗಳ ಕಾಲ ಮನೆಗೆ ಬರದ ಹಿನ್ನೆಲೆ ದೂರು ನೀಡಿದ್ದರು. ನಮ್ಮ ಚಾಲಕನಿಗೆ ಅರುಣಾ ಕುಮಾರಿ ಹೆದರಿಸುತ್ತಿದ್ದಳಂತೆ. ಇವಳಿಂದ ನನಗೆ ಬ್ಯುಸಿನೆಸ್ನಲ್ಲಿ 35 ಲಕ್ಷದವರೆಗೂ ನಷ್ಟ ಉಂಟಾಗಿದೆ ಎಂದು ನಾಗವರ್ಧನ್ ಹೇಳಿದ್ದಾರೆ.
ಯಾರು ಈ ನಾಗವರ್ಧನ್? ನಟ ವಿಷ್ಣುವರ್ಧನ್ ಅಭಿಮಾನಿ ಸಂಘದಲ್ಲಿ ಸಕ್ರಿಯನಾಗಿದ್ದ. ಕೋಟೆ ಹೈದ ಸಿನಿಮಾದ ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಕೆಲ ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿ ನಾಗವರ್ಧನ್ ಗೌಡ ಇದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಿನಿಮಾಗೂ ನಾಗವರ್ಧನ್ ಗೂ ಸಂಬಂಧ ಇಲ್ಲ ಅನ್ನೋದು ಸುಳ್ಳು. ಆತ ಸಿನಿಮಾರಂಗಲ್ಲೇ ಇದ್ದವರು. ಫೇಸ್ ಬುಕ್ ಪ್ರೊಫೈಲ್ ನಲ್ಲಿ ಆಕ್ಟರ್ ಅಂತ ಬರೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನಾನು ಹಾಗೂ ನಟ ದರ್ಶನ್ ಸುದ್ದಿಗೋಷ್ಠಿ ನಡೆಸಲ್ಲ: ಸ್ಯಾಂಡಲ್ವುಡ್ ನಿರ್ಮಾಪಕ ಉಮಾಪತಿ ಗೌಡ ಸ್ಪಷ್ಟನೆ
ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಅರುಣಾ ಕುಮಾರಿ ಫೇಕ್ ಐಡಿ ಬಗ್ಗೆ ಕೆನರಾ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ