ರಿಯಾಲಿಟಿ ಶೋ ವೇದಿಕೆ ಮೇಲೆ ಸಪ್ತಪದಿ ತುಳಿದ ಕಿರುತೆರೆ ‘ಗೊಂಬೆ’ ನೇಹಾ ಗೌಡ

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಬರೋಬ್ಬರಿ 7 ವರ್ಷಗಳ ಕಾಲ ಪ್ರಸಾರವಾಗಿತ್ತು. ಈ ಮೂಲಕ ಸಾವಿರಾರು ಕಂತುಗಳನ್ನು ಈ ಧಾರಾವಾಹಿ ಕಂಡಿದೆ.

ರಿಯಾಲಿಟಿ ಶೋ ವೇದಿಕೆ ಮೇಲೆ ಸಪ್ತಪದಿ ತುಳಿದ ಕಿರುತೆರೆ ‘ಗೊಂಬೆ’ ನೇಹಾ ಗೌಡ
ರಿಯಾಲಿಟಿ ಶೋ ವೇದಿಕೆ ಮೇಲೆ ಸಪ್ತಪದಿ ತುಳಿದ ಕಿರುತೆರೆ ‘ಗೊಂಬೆ’ ನೇಹಾ ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on: Aug 31, 2021 | 7:27 AM

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಗೊಂಬೆ ಎಂದೇ ಜನಪ್ರಿಯರಾದವರು ನೇಹಾ ಗೌಡ. ಅವರು ಚಂದನ್​ ಜತೆ ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ಮಧ್ಯೆ, ಅವರು ಕಲರ್ಸ್​ ಕನ್ನಡದ ‘ರಾಜಾ-ರಾಣಿ’ ವೇದಿಕೆ ಮೇಲೆ ಗಂಡನ ಜತೆ ಮತ್ತೆ ಸಪ್ತಪದಿ ತುಳಿದಿದ್ದಾರೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಅವರು ಸಪ್ತಪದಿ ತುಳಿಯೋಕೆ ಕಾರಣವೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಚಂದನ್​ ಜತೆ ನೇಹಾ ಗೌಡ ‘ರಾಜಾ-ರಾಣಿ’ ವೇದಿಕೆ ಏರಿದ್ದಾರೆ. ಈ ವೇಳೆ ಶೋನ ನಿರೂಪಕಿ ಅನುಪಮಾ ಗೌಡ ಅವರು ನೇಹಾಗೆ ಪ್ರಶ್ನೆ ಒಂದನ್ನು ಕೇಳಿದರು. ‘ಮದುವೆ ಸಮಯದಲ್ಲಿ ಯಾವುದಾದರೂ ಶಾಸ್ತ್ರ ಮಿಸ್​ ಆಗಿತ್ತೇ? ಆ ಬಗ್ಗೆ ನಿಮಗೇನಾದರೂ ಬೇಸರವಿದೆಯೇ?’ ಎಂದು ಕೇಳಿದರು ಅನುಪಮಾ. ಇದಕ್ಕೆ ಉತ್ತರಿಸಿದ ನೇಹಾ ‘ಮದುವೆ ತುಂಬಾ ಚೆನ್ನಾಗಿ ನಡೆದಿತ್ತು. ಆದರೆ, ಸಪ್ತಪದಿ ತುಳಿಸುವುದನ್ನೇ ಮರೆತು ಬಿಟ್ಟಿದ್ದರು. ಏಕೆ ಹಾಗೆ ಎಂದು ನಾನು ಪ್ರಶ್ನೆ ಮಾಡಿದೆ. ನಮ್ಮ ಸಂಪ್ರದಾಯದಲ್ಲಿ ಆ ರೀತಿ ಇಲ್ಲ ಎನ್ನುವ ಉತ್ತರ ಅವರ ಕಡೆಯಿಂದ ಬಂತು. ಆದರೆ, ನಿಜಕ್ಕೂ ಅವರಿಗೆ ಸಪ್ತಪದಿ ತುಳಿಸೋದು ಮರೆತೇ ಹೋಗಿತ್ತು’ ಎಂದಿದ್ದಾರೆ.

‘ಗೊಂಬೆ ಅವರು ಮದುವೆಯಲ್ಲಿ ಮಿಸ್​ ಮಾಡಿಕೊಂಡ ಸಪ್ತಪದಿಯನ್ನು ಈ ವೇದಿಕೆ ಮೇಲೆ ಮಾಡಿಸುತ್ತಿದ್ದೇವೆ’ ಎಂದು ಅನುಪಮಾ ಗೌಡ ಘೋಷಿಸಿದರು. ಅಂತೆಯೇ, ವೇದಿಕೆ ಮೇಲೆ ಪತಿ ಚಂದನ್​ ಜತೆ ನೇಹಾ ಗೌಡ ಸಪ್ತಪದಿ ತುಳಿದರು. ಮದುವೆಯಲ್ಲಿ ಏಳು ಹೆಜ್ಜೆ ನಡೆಯುವ ಸಂಪ್ರದಾಯ ಹಿಂದುಗಳಲ್ಲಿದೆ. ಪ್ರತಿ ಹೆಜ್ಜೆಗೂ ಒಂದೊಂದು ಅರ್ಥವಿದೆ. ಈ ಶಾಸ್ತ್ರ ‘ರಾಜಾ ರಾಣಿ’ ವೇದಿಕೆ ಮೇಲೆ ನೆರವೇರಿದೆ. ಇದನ್ನು ನೋಡಿದ ಜಡ್ಜ್​ಗಳು ಹಾಗೂ ವೀಕ್ಷಕರು ಖುಷಿಪಟ್ಟಿದ್ದಾರೆ. ಸಪ್ತಪದಿ ತುಳಿಯುವಾಗ ಹಿನ್ನೆಲೆಯಲ್ಲಿ ‘ಸಪ್ತಪದಿ..’ ಹಾಡನ್ನು ಪ್ರಸಾರ ಮಾಡಲಾಗಿತ್ತು. ಕಲರ್ಸ್​ ಕನ್ನಡ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಕೆಲವರು ಮದುವೆ ಆಯ್ತು ಊಟ ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಬರೋಬ್ಬರಿ 7 ವರ್ಷಗಳ ಕಾಲ ಪ್ರಸಾರವಾಗಿತ್ತು. ಈ ಮೂಲಕ ಸಾವಿರಾರು ಕಂತುಗಳನ್ನು ಈ ಧಾರಾವಾಹಿ ಕಂಡಿದೆ. ಅಲ್ಲದೆ, ವೀಕ್ಷಕರಿಗೂ ಧಾರಾವಾಹಿ ಇಷ್ಟವಾಗಿತ್ತು.

ಇದನ್ನೂ ಓದಿ: ಕನ್ನಡತಿಯಲ್ಲಿ ಖಡಕ್​ ವಿಲನ್​ ರಮೋಲಾ ನಿಜ ಜೀವನದಲ್ಲಿ ಹೀಗಿದ್ದಾರಾ?; ಸಣ್ಣ ಘಟನೆಯಿಂದ ಎಲ್ಲವೂ ಗೊತ್ತಾಯ್ತು

‘ಕನ್ನಡತಿ’ ರಮೋಲಾ ಕೊಟ್ಟ ಖಡಕ್​ ಕೌಂಟರ್​ಗೆ ಸೈಲೆಂಟ್​ ಆದ ನಿರಂಜನ್​

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ