ಬಿಗ್​ ಬಾಸ್​ ಮಿನಿ ಸೀಸನ್​ ಫಿನಾಲೆಗೆ ಸಿಂಹಾಸನವೇರಿ ಬಂದ ಕಿಚ್ಚ; ಇಲ್ಲಿದೆ ಅದ್ದೂರಿ ವೇದಿಕೆಯ ಝಲಕ್​

ಬಿಗ್​ ಬಾಸ್​ ಮಿನಿ ಸೀಸನ್​ ಫಿನಾಲೆ ವೇದಿಕೆಗೆ ಕಿಚ್ಚ ಸುದೀಪ್​ ನೀಡಿದ ಎಂಟ್ರಿ ಸೂಪರ್​ ಆಗಿದೆ. ಸಿಂಹಾಸನದ ಮೇಲೆ ಕುಳಿತು ಅವರು ಆಗಮಿಸಿದ್ದಾರೆ. ಬಿಗ್​ ಬಾಸ್​ ಮಾಜಿ ಸ್ಪರ್ಧಿಗಳು ಮಸ್ತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ.

ಬಿಗ್​ ಬಾಸ್​ ಮಿನಿ ಸೀಸನ್​ ಫಿನಾಲೆಗೆ ಸಿಂಹಾಸನವೇರಿ ಬಂದ ಕಿಚ್ಚ; ಇಲ್ಲಿದೆ ಅದ್ದೂರಿ ವೇದಿಕೆಯ ಝಲಕ್​
ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 30, 2021 | 10:09 AM

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಮುಗಿದ ಬೆನ್ನಲ್ಲೇ ಶುರುವಾಗಿದ್ದ ‘ಬಿಗ್​ ಬಾಸ್​ ಮಿನಿ ಸೀಸನ್​’ ಕೂಡ ಈಗ ಮುಕ್ತಾಯದ ಹಂತದಲ್ಲಿದೆ. 15 ಸೆಲೆಬ್ರಿಟಿಗಳು ಇಷ್ಟು ದಿನ ಹಲವು ಟಾಸ್ಕ್​ಗಳನ್ನು ನಿಭಾಯಿಸುವ ಮೂಲಕ ಹಣಾಹಣಿ ನಡೆಸಿದ್ದಾರೆ. ಈಗ ಫಿನಾಲೆ ಸಮಯ ಬಂದಿದ್ದು, ಕಿಚ್ಚ ಸುದೀಪ್​ ಅವರು ಆ ವಿಶೇಷ ಎಪಿಸೋಡ್​ ನಡೆಸಿಕೊಟ್ಟಿದ್ದಾರೆ. ಕಳೆದ 8 ಸೀಸನ್​ಗಳಲ್ಲೂ ಕನ್ನಡ ಬಿಗ್​ ಬಾಸ್​ನ ನಿರೂಪಣೆಯನ್ನು ಸುದೀಪ್​ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈಗ ಮಿನಿ ಸೀಸನ್​ ಫಿನಾಲೆ ಕೂಡ ಅವರ ನಿರೂಪಣೆಯಲ್ಲೇ ನಡೆದಿದೆ.

ಶನಿವಾರ (ಸೆ.4) ಮತ್ತು ಭಾನುವಾರ (ಸೆ.5) ಮಧ್ಯಾಹ್ನ ಮೂರು ಗಂಟೆಗೆ ಫಿನಾಲೆ ಪ್ರಸಾರ ಆಗಲಿದೆ. ಈಗಾಗಲೇ ಅದರ ಚಿತ್ರೀಕರಣ ಮುಗಿದಿದೆ. ಅದರ ಒಂದು ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ಆ ಮೂಲಕ ಫಿನಾಲೆ ವೇದಿಕೆಯ ಅದ್ದೂರಿತನ​ ಹೇಗಿತ್ತು ಎಂಬುದರ ಝಲಕ್​ ತೋರಿಸಲಾಗಿದೆ. ಬಿಗ್​ ಬಾಸ್ ಮಿನಿ ಸೀಸನ್​​ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ‘ಪ್ರಶಸ್ತಿಗಳ ಈ ಸಂಜೆಗೆ ನಿಮ್ಮೆಲ್ಲರಿಗೂ ಸ್ವಾಗತ’ ಎನ್ನುವ ಮೂಲಕ ಕಿಚ್ಚ ಸುದೀಪ್​ ಅವರು ಎಂದಿನ ಖದರ್​​ನಲ್ಲಿ ನಿರೂಪಣೆ ಆರಂಭಿಸಿದ್ದಾರೆ.

ಈ ವೇದಿಕೆಗೆ ಕಿಚ್ಚ ನೀಡಿದ ಎಂಟ್ರಿ ಸೂಪರ್​ ಆಗಿದೆ. ಸಿಂಹಾಸನದ ಮೇಲೆ ಕುಳಿತು ಅವರು ಆಗಮಿಸಿದ್ದಾರೆ. ಬಿಗ್​ ಬಾಸ್​ ಮಾಜಿ ಸ್ಪರ್ಧಿಗಳು ಮಸ್ತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್ 8ರ ವಿನ್ನರ್​ ಮಂಜು ಪಾವಗಡ ಕೂಡ ಹೆಜ್ಜೆ ಹಾಕಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ವಾಸುಕಿ ವೈಭವ್​ ಮುಂತಾದವರು ವೇದಿಕೆಯಲ್ಲಿ ಭರ್ಜರಿ ಮನರಂಜನೆ ನೀಡಿದ್ದಾರೆ.

ಬಿಗ್​ ಬಾಸ್​ ಮಿನಿ ಸೀಸನ್​ ಎಂಬುದು ಕನ್ನಡ ಕಿರುತೆರೆಯಲ್ಲಿ ಒಂದು ಹೊಸ ಪ್ರಯೋಗ. ಕಲರ್ಸ್​ ಕನ್ನಡ ವಾಹಿನಿಯ ಧಾರಾವಾಹಿಗಳ ಹಲವು ಕಲಾವಿದರಿಗೆ 6 ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಇರುವ ಅವಕಾಶ ನೀಡಲಾಗಿತ್ತು. ಗಗನ್​ ಚಿನ್ನಪ್ಪ, ಚಂದನಾ, ಕೌಸ್ತುಭ, ವೈಷ್ಣವಿ, ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ, ರಮೋಲಾ, ಕಿರಣ್​ ರಾಜ್​ ಮುಂತಾದವರು ಈ ಮಿನಿ ಸೀಸನ್​ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದುಕೊಂಡಿದ್ದರು. ಯಾರಿಗೆ ಯಾವ ಪ್ರಶಸ್ತಿಗಳು ಸಿಕ್ಕಿವೆ ಎಂಬುದು ಈ ವಾರಾಂತ್ಯದ ಫಿನಾಲೆ ಎಪಿಸೋಡ್​ನಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಕುಟುಂಬದಲ್ಲಿ ​ಮದುವೆ ಸಂಭ್ರಮ; ಇಲ್ಲಿವೆ ಕಲರ್​ಫುಲ್​ ಫ್ಯಾಮಿಲಿ ಫೋಟೋಗಳು

ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಭೇಟಿ ಆಗಲ್ಲ ಎಂದ ಸುದೀಪ್​; ಮೊದಲೇ ತಿಳಿಸಿ ಕ್ಷಮೆ ಕೇಳಿದ ಕಿಚ್ಚ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ