ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಭೇಟಿ ಆಗಲ್ಲ ಎಂದ ಸುದೀಪ್​; ಮೊದಲೇ ತಿಳಿಸಿ ಕ್ಷಮೆ ಕೇಳಿದ ಕಿಚ್ಚ

Kichcha Sudeep Birthday: ಸೆ.2ರಂದು ಸುದೀಪ್​ ಜನ್ಮದಿನ. ಅಂದು ಅವರನ್ನು ಭೇಟಿ ಆಗಬೇಕು ಎಂಬುದು ಲಕ್ಷಾಂತರ ಅಭಿಮಾನಿಗಳ ಬಯಕೆ. ಆದರೆ ಕೊವಿಡ್​ ಕಾರಣದಿಂದ ಸುದೀಪ್​ ಯಾರನ್ನೂ ಭೇಟಿ ಆಗುತ್ತಿಲ್ಲ.

ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಭೇಟಿ ಆಗಲ್ಲ ಎಂದ ಸುದೀಪ್​; ಮೊದಲೇ ತಿಳಿಸಿ ಕ್ಷಮೆ ಕೇಳಿದ ಕಿಚ್ಚ
ಕಿಚ್ಚ ಸುದೀಪ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 28, 2021 | 12:31 PM

ನಟ ಕಿಚ್ಚ ಸುದೀಪ್​ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಪ್ರತಿ ವರ್ಷ ಅವರ ಬರ್ತ್​ಡೇ ಅಚರಿಸಲು ಎಲ್ಲರೂ ಕಾಯುತ್ತಿರುತ್ತಾರೆ. ಒಂದು ತಿಂಗಳು ಮುನ್ನವೇ ಅದಕ್ಕಾಗಿ ತಯಾರಿ ನಡೆಯುತ್ತದೆ. ನೆಚ್ಚಿನ ನಟನನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಬರುತ್ತಾರೆ. ಆದರೆ ಕೊರೊನಾ ವೈರಸ್​ ಕಾರಣದಿಂದಾಗಿ ಈ ಎಲ್ಲ ಸಂಭ್ರಮಗಳಿಗೂ ಕಳೆದ ವರ್ಷದಿಂದ ಬ್ರೇಕ್​ ಬಿದ್ದಿದೆ. ಈ ವರ್ಷ ಕೂಡ ಫ್ಯಾನ್ಸ್ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಸುದೀಪ್​ ನಿರ್ಧರಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ಮುಂಚಿತವಾಗಿ ತಿಳಿಸಿದ್ದಾರೆ.

ಸೆ.2ರಂದು ಸುದೀಪ್​ ಜನ್ಮದಿನ. ಅಂದು ಅವರನ್ನು ಭೇಟಿ ಆಗಬೇಕು ಎಂಬುದು ಲಕ್ಷಾಂತರ ಅಭಿಮಾನಿಗಳ ಬಯಕೆ. ಆದರೆ ಕೊವಿಡ್​ ಕಾರಣದಿಂದ ಸುದೀಪ್​ ಯಾರನ್ನೂ ಭೇಟಿ ಆಗುತ್ತಿಲ್ಲ. ‘ನನ್ನೆಲ್ಲ ಅಭಿಮಾನಿ ಸ್ನೇಹಿತರಲ್ಲಿ ಮನವಿ. ಕೊವಿಡ್​ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರನ್ನು ಭೇಟಿ ಆಗಲು ಆಗುತ್ತಿಲ್ಲ. ಕ್ಷಮೆ ಇರಲಿ. ಮುಂದೆ ಪರಿಸ್ಥಿತಿ ಸುಧಾರಿಸಿದ ನಂತರ ನಿಮ್ಮೆಲ್ಲರನ್ನೂ ಭೇಟಿ ಆಗುತ್ತೇನೆ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ’ ಎಂದು ಸುದೀಪ್​ ಅವರು ‘ಕಿಚ್ಚ ಕ್ರಿಯೇಷನ್​’ ಟ್ವಿಟರ್​ ಖಾತೆ ಮೂಲಕ ಸಂದೇಶ ನೀಡಿದ್ದಾರೆ.

ಸುದೀಪ್​ ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ಹುಟ್ಟುಹಬ್ಬದ ಆಚರಣೆಯನ್ನು ಕ್ಯಾನ್ಸಲ್​ ಮಾಡಿಕೊಂಡಿದ್ದಾರೆ. ಸ್ಟಾರ್​ ನಟರ ಬರ್ತ್​ಡೇ ಸೆಲೆಬ್ರೇಷನ್​ ಎಂದರೆ ಅಲ್ಲಿ ಸಾವಿರಾರು ಜನರು ಸೇರುತ್ತಾರೆ. ಅದರಿಂದ ಕೊವಿಡ್​ ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ. ಹಾಗಾಗಿ ಅಭಿಮಾನಿಗಳ ಆರೋಗ್ಯದ ದೃಷ್ಟಿಯಿಂದ ಸಂಭ್ರಮಾಚರಣೆಗೆ ಬ್ರೇಕ್​ ಹಾಕುವುದೇ ಉತ್ತಮ ಎಂದು ಎಲ್ಲ ಸೆಲೆಬ್ರಿಟಿಗಳು ಕಳೆದೊಂದು ವರ್ಷದಿಂದ ನಿರ್ಧರಿಸಿ, ಅದನ್ನೇ ಪಾಲಿಸುತ್ತ ಬಂದಿದ್ದಾರೆ.

ಸದ್ಯ ಸುದೀಪ್​ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅನೂಪ್​ ಭಂಡಾರಿ ನಿರ್ದೇಶನದ ‘ವಿಕ್ರಾಂತ್​ ರೋಣ’ ಸಿನಿಮಾಗೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ತಮಿಳು ನಿರ್ದೇಶಕ ವೆಂಕಟ್​ ಪ್ರಭು ಅವರ ಜೊತೆಗೆ ಸುದೀಪ್​ ಫೋಟೋ ವೈರಲ್​ ಆಗಿತ್ತು. ಅವರಿಬ್ಬರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಅನೌನ್ಸ್​ ಆಗಬಹುದು ಎಂಬ ನಿರೀಕ್ಷೆ ಇದೆ. ಅದೇ ರೀತಿ, ‘ವಿಕ್ರಾಂತ್​ ರೋಣ’ ಮತ್ತು ‘ಕೋಟಿಗೊಬ್ಬ 3’ ಸಿನಿಮಾ ತಂಡಗಳಿಂದಲೂ ಗಿಫ್ಟ್​ ರೂಪದಲ್ಲಿ ಹೊಸ ಟೀಸರ್​ ಅಥವಾ ಪೋಸ್ಟರ್​ಗಳು ಬಿಡುಗಡೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ:

ಸುದೀಪ್​ ಮುಂದಿನ ಸಿನಿಮಾ ಯಾವುದು? ಫೋಟೋ ಮೂಲಕ ಸುಳಿವು ನೀಡಿದ ಕಾಲಿವುಡ್​ ನಿರ್ದೇಶಕ

ಕಿಚ್ಚ ಸುದೀಪ್​ ಕುಟುಂಬದಲ್ಲಿ ​ಮದುವೆ ಸಂಭ್ರಮ; ಇಲ್ಲಿವೆ ಕಲರ್​ಫುಲ್​ ಫ್ಯಾಮಿಲಿ ಫೋಟೋಗಳು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ