ಆ ಹುಡುಗಿ ಕತ್ತಲಲ್ಲಿ ಹೋಗಲೇ ಬಾರದಿತ್ತು ಎಂದವರಿಗೆ ಉತ್ತರಿಸಿದ ಇಂದ್ರಜಿತ್ ಲಂಕೇಶ್
ಮೈಸೂರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಅನೇಕರು ಹುಡುಗಿಯದ್ದೇ ತಪ್ಪು ಎಂಬಂತೆ ಮಾತನಾಡಿದ್ದಾರೆ. ಆಕೆಗೆ ಕತ್ತಲಲ್ಲಿ ಹೋಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ತಲೆ ಎತ್ತಿದ್ದ ಡ್ರಗ್ಸ್ ಪ್ರಕರಣದಲ್ಲಿ ಹಲವು ಆರೋಪ ಮಾಡಿ ಸುದ್ದಿಯಾಗಿದ್ದ ಅವರು, ಇತ್ತೀಚಿಗಿನ ದರ್ಶನ್ ಪ್ರಕರಣದಲ್ಲಿ ಕೆಲ ಆರೋಪ ಮಾಡಿ ಗಮನ ಸೆಳೆದಿದ್ದರು. ಈಗ ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ವಿಚಾರವಾಗಿ ಅವರು ಮಾತನಾಡಿದ್ದಾರೆ.
ಮೈಸೂರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಅನೇಕರು ಹುಡುಗಿಯದ್ದೇ ತಪ್ಪು ಎಂಬಂತೆ ಮಾತನಾಡಿದ್ದಾರೆ. ಆಕೆಗೆ ಕತ್ತಲಲ್ಲಿ ಹೋಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಇಂದ್ರಜಿತ್, ‘ಕತ್ತಲಲ್ಲಿ ಹೋಗಬಾರದಿತ್ತು ಎಂದರೆ ಹೇಗೆ? ಆಕೆಗೆ ಎಲ್ಲ ಕಡೆ ಸುತ್ತಾಡುವ ಹಕ್ಕಿತ್ತು. ಹೀಗಿದ್ದಾಗ ಆಕೆಗೆ ರಕ್ಷಣೆಗೆ ಕೊಡೋದು ನಿಮ್ಮ (ಪೊಲೀಸರ) ಕರ್ತವ್ಯವಾಗಿತ್ತು’ ಎಂದಿದ್ದಾರೆ.
ಗ್ಯಾಂಗ್ ರೇಪ್: ಹುಡುಗಿಯದ್ದೇ ತಪ್ಪು ಅನ್ನೋರಿಗೆ ರಮ್ಯಾ ಛೀಮಾರಿ; ಪರಿಸ್ಥಿತಿ ಬದಲಾಗ್ಬೇಕು ಎಂದ ನಟಿ
Latest Videos