ಹೈದರಾಬಾದ್ ಫಾರ್ಮಸಿ ವಿದ್ಯಾರ್ಥಿನಿ ಗ್ಯಾಂಗ್‌ ರೇಪ್‌: ಸಿಸಿಟಿವಿ ಆಧರಿಸಿ 6 ಆರೋಪಿಗಳ ಬಂಧನ, ಮಾಧ್ಯಮಗಳ ಮುಂದೆ ಇಂದು‌ ಆರೋಪಿಗಳ ಹಾಜರು

Hyderabad Student Gang Rape Case | ಫಾರ್ಮಸಿ ವಿದ್ಯಾರ್ಥಿನಿ ಗ್ಯಾಂಗ್‌ ರೇಪ್ ಕೇಸ್​ಗೆ ಸಂಬಂಧಿಸಿ ಸಿಸಿಟಿವಿ ದೃಶ್ಯವನ್ನು ಆಧರಿಸಿ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ಫಾರ್ಮಸಿ ವಿದ್ಯಾರ್ಥಿನಿ ಗ್ಯಾಂಗ್‌ ರೇಪ್‌: ಸಿಸಿಟಿವಿ ಆಧರಿಸಿ 6 ಆರೋಪಿಗಳ ಬಂಧನ, ಮಾಧ್ಯಮಗಳ ಮುಂದೆ ಇಂದು‌ ಆರೋಪಿಗಳ ಹಾಜರು
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Feb 12, 2021 | 11:32 AM

ಹೈದರಾಬಾದ್: ಫಾರ್ಮಸಿ ವಿದ್ಯಾರ್ಥಿನಿ ಗ್ಯಾಂಗ್‌ ರೇಪ್ ಕೇಸ್​ಗೆ ಸಂಬಂಧಿಸಿ ಸಿಸಿಟಿವಿ ದೃಶ್ಯವನ್ನು ಆಧರಿಸಿ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜು, ರಮೇಶ್, ಶಿವ, ನಾದಂ, ಭಾಸ್ಕರ, ಕುಮಾರ್​ ಎಂಬ ಆರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು ವಿಚಾರಣೆಯ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ನಾಗಾರಂ‌ ವೃತ್ತದಲ್ಲಿನ‌ ಸಿಸಿಟಿವಿ ಆಧಾರವನಿಟ್ಟುಕೊಂಡು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಆರೋಪಿಗಳು ಮೊದಲಿಗೆ ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಿ ನಂತರ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

ಇಂದು‌ ಮಾಧ್ಯಮಗಳ ಮುಂದೆ‌ ಆರೋಪಿಗಳ ಹಾಜರು

ಇನ್ನು ಆರೋಪಿಗಳು ಈ ಹಿಂದೆ‌ ಸಹ ಇಂತಹ ಹಲವು ಕೃತ್ಯಗಳಲ್ಲಿ ಪಾಲ್ಗೊಂಡಿರೋದು ವಿಚಾರಣೆಯಲ್ಲಿ‌ ಬಯಲಾಗಿದೆ. ಬಿ.ಫಾರ್ಮ್ ವಿದ್ಯಾರ್ಥಿನಿಯ ಅತ್ಯಾಚಾರದ ನಂತರ ಪೊಲೀಸರ ಸೈರನ್‌‌ ಸದ್ದು ಕೇಳಿ ಆರೋಪಿಗಳು ಪರಾರಿಯಾಗಿದ್ದರಂತೆ. ಸದ್ಯ ಈಗ ಆರೋಪಿಗಳ‌ ಕುಟುಂಬದವರಿಂದ‌ಲೂ ಸಹ ವಿವರ‌ ಸಂಗ್ರಹಿಸಲಾಗುತ್ತಿದೆ. ಆರೋಪಿಗಳ ವಿರುದ್ಧ ನಿರ್ಭಯ, ಕಿಡ್ನ್ಯಾಪ್, ರೇಪ್, ಬೆದರಿಕೆಗೆ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಇಂದು‌ ಮಾಧ್ಯಮಗಳ ಮುಂದೆ‌ ಆರೋಪಿಗಳನ್ನು ಹಾಜರುಪಡಿಸಲಾಗುತ್ತೆ.

ಕೋಮಾಸ್ಥಿತಿಯಲ್ಲಿ ಸಂತ್ರಸ್ತ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬುಧವಾರ ಸಂಜೆ 6.15 ರಿಂದ 6.30ರ ಸಮಯದಲ್ಲಿ ಈ ಕೃತ್ಯ ನಡೆದಿದ್ದು ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಸ್ಪತ್ರೆಗೆ ದಾಖಲಾದಾಗಿನಿಂದ ಆಕೆ ಪ್ರಜ್ಞೆ ಕಳೆದುಕೊಂಡಿದ್ದು ಕೋಮಾಸ್ಥಿತಿಯಲ್ಲಿದ್ದಾಳೆ. ಯುವತಿಗೆ ಪ್ರಜ್ಞೆ ಇಲ್ಲ. ಆಕೆ ಭಯದಿಂದ ಕೂಡಿದ ಅರೆಪ್ರಜ್ಞಾವಸ್ಥೆಯಲ್ಲಿರುವಾಗ ನಾವು ಮಾಹಿತಿ ಪಡೆಯಬಾರದು. ಮೊದಲು ಚಿಕಿತ್ಸೆ ನೀಡಬೇಕು. ನಾವು ಚಿಕಿತ್ಸೆ ಶುರು ಮಾಡಿದ್ದೇವೆ. ನಂತರ ಪೊಲೀಸ್ ಇಲಾಖೆಯವರು ನೀಡಿದ ಮಾಹಿತಿಯನ್ನ ಆಧರಿಸಿ ಚಿಕಿತ್ಸೆ ಕೊಡುತ್ತಿದ್ದೇವೆ. ಪ್ರಾಥಮಿಕ ಪರೀಕ್ಷೆಯಲ್ಲಿ ಲೈಂಗಿಕ ಕಿರುಕುಳ ನೀಡಿರೋದು ದೃಢವಾಗಿದೆ ಎಂದು ಡಾಕ್ಟರ್ ಸೌಜನ್ಯ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್‌ ರೇಪ್‌: ಕಾಮುಕರ ಗುರುತು ಪತ್ತೆ, ಮೂವರಿಗಾಗಿ ಪೊಲೀಸ್ ತಂಡಗಳಿಂದ ಶೋಧ