Jallikattu: ಜಲ್ಲಿಕಟ್ಟು ಹೋರಿಗೆ ಕಟ್ಟಿದ್ದ ಹಗ್ಗ ವ್ಯಕ್ತಿಯ ಕಾಲಿಗೆ ಸಿಲುಕಿ ಕಿಲೋಮೀಟರ್ಗಟ್ಟಲೆ ಎಳೆದೊಯ್ದಿತು; ವ್ಯಕ್ತಿ ಚಿಂತಾಜನಕ
Jallikattu: ತಮಿಳುನಾಡು ಸಿಂಗಾರಪಲ್ಲಿಯಲ್ಲಿ ನಡೆಯುತ್ತಿದ್ದ ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿಯನ್ನು ಹಿಡಿಯಲು ಹೋದ ವ್ಯಕ್ತಿಯನ್ನು ಹೋರಿ ಎಳೆದೊಯ್ದು ಅವಘಡ ಸಂಭವಿಸಿದೆ.
ತಮಿಳುನಾಡು: ಹೋರಿಗೆ ಕಟ್ಟಿದ್ದ ಹಗ್ಗ ವ್ಯಕ್ತಿಯ ಕಾಲಿಗೆ ಸಿಲುಕಿ ಕಿಲೋಮೀಟರ್ಗಟ್ಟಲೆ ವ್ಯಕ್ತಿಯನ್ನು ಎಳೆದೊಯ್ದ ಘಟನೆ ಸಿಂಗಾರಪಲ್ಲಿಯಲ್ಲಿ ಏರ್ಪಡಿಸಿದ್ದ ಜಲ್ಲಿಕಟ್ಟು ಸ್ಪರ್ಧೆ ವೇಳೆ ನಡೆದಿದೆ. ವ್ಯಕ್ತಿಯ ಜೊತೆ ಎಳೆದುಕೊಂಡು ಎತ್ತು ಓಡಿದ್ದರಿಂದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ. ಕೃಷ್ಣಗಿರಿ ಜಿಲ್ಲೆಯ ಸುತ್ತಮುತ್ತ ನಡೆಯುತ್ತಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಕಳೆದ ಒಂದು ತಿಂಗಳಲ್ಲಿ ನಾಲ್ಕೈದು ಅವಘಡ ಸಂಭವಿಸಿದೆ.
ಸಿಂಗಾರ ಪಲ್ಲಿಯಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆಗೆ ಸಾವಿರಾರು ಜನ ಸೇರುತ್ತಾರೆ. ಅಲ್ಲಿ ನಡೆಯುವ ವಿಶೇಷ ಸ್ಪರ್ಧೆಗಳಲ್ಲಿ ಜಲ್ಲಿಕಟ್ಟು ಕೂಡಾ ಒಂದು. ಸಂಕ್ರಾಂತಿ ವಿಶೇಷವಾಗಿ ಏರ್ಪಡಿಸಲಾಗುವ ಜಲ್ಲಿಕಟ್ಟು ಸ್ಪರ್ಧೆ ಫೆಬ್ರವರಿ ತಿಂಗಳಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಓಡುತ್ತಿದ್ದ ಹೋರಿಯನ್ನು ಹಿಡಿಯಲು ಹೋಗಿ, ಹೋರಿಗೆ ಕಟ್ಟಿದ್ದ ಹಗ್ಗ ವ್ಯಕ್ತಿಯ ಕಾಲಿಗೆ ಸಿಲುಕಿ ಅವಘಡ ಸಂಭವಿಸಿದೆ.
ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿಗಳನ್ನು ಹಿಡಿಯಲಾಗುತ್ತದೆ. ಹೋರಿಗಳನ್ನು ವಿವಿಧ ಬಣ್ಣಗಳಿಂದ ಅಲಂಕರಿಸಲಾಗುತ್ತದೆ. ಹಾಗೂ ಸ್ಪರ್ಧೆಯ ನಡೆಯುವ ಜಾಗವನ್ನೂ ಸಿಂಗರಿಸಿ ಸಿದ್ಧಗೊಳಿಸಲಾಗುತ್ತದೆ. ಜಲ್ಲಿಕಟ್ಟು ಸ್ಪರ್ಧೆಯನ್ನು ನೋಡಲೆಂದೇ ವಿವಿಧ ಪ್ರದೇಶಗಳಿಂದ ಜನರು ನೆರೆದಿರುತ್ತಾರೆ. ಸ್ಪರ್ಧೆಯಲ್ಲಿ ಹೋರಿಗಳನ್ನು ಅಡ್ಡಗಟ್ಟಿ ಹಿಡಿದವರಿಗೆ ಬಹುಮಾನ ವಿತರಿಸಲಾಗುತ್ತದೆ.
ಇದನ್ನೂ ಓದಿ: ಜಲ್ಲಿಕಟ್ಟು ನೋಡುವ ವೇಳೆ.. ಮನೆ ಗೋಡೆ ಕುಸಿತ: ಸ್ಥಳದಲ್ಲೇ ಮೂವರ ದುರ್ಮರಣ
Published On - 11:46 am, Fri, 12 February 21