AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ ಮುಂದಿನ ಸಿನಿಮಾ ಯಾವುದು? ಫೋಟೋ ಮೂಲಕ ಸುಳಿವು ನೀಡಿದ ಕಾಲಿವುಡ್​ ನಿರ್ದೇಶಕ

ಕಾಲಿವುಡ್​ ನಿರ್ದೇಶಕ ವೆಂಕಟ್​ ಪ್ರಭು ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದು ಸುದೀಪ್​ ಅವರನ್ನು ಭೇಟಿ ಆಗಿದ್ದಾರೆ. ಕಿಚ್ಚನ ನಿವಾಸಕ್ಕೆ ತೆರಳಿದ ಅವರಿಗೆ ಭರ್ಜರಿ ಆತಿಥ್ಯ ಸಿಕ್ಕಿದೆ.

ಸುದೀಪ್​ ಮುಂದಿನ ಸಿನಿಮಾ ಯಾವುದು? ಫೋಟೋ ಮೂಲಕ ಸುಳಿವು ನೀಡಿದ ಕಾಲಿವುಡ್​ ನಿರ್ದೇಶಕ
ವೆಂಕಟ್​ ಪ್ರಭು-ಕಿಚ್ಚ ಸುದೀಪ್​
TV9 Web
| Edited By: |

Updated on: Aug 25, 2021 | 9:19 AM

Share

ನಟ ಕಿಚ್ಚ ಸುದೀಪ್​ ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಎಲ್ಲರಿಗೂ ಕೌತುಕ ಇದೆ. ಸದ್ಯ ಅವರು ನಟಿಸಿರುವ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಅಧಿಕೃತ ರಿಲೀಸ್​ ಡೇಟ್​ ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ನಿರ್ದೇಶಕ ಅನೂಪ್​ ಭಂಡಾರಿ ಜೊತೆ ಸುದೀಪ್ ಮಾಡಿರುವ ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಕೊರೊನಾ ಹಾವಳಿ ಕಮ್ಮಿ ಆದ ಬಳಿಕ ಈ ಚಿತ್ರ ಬಿಡುಗಡೆ ಆಗಲಿದೆ. ಹಾಗಾದರೆ ಸುದೀಪ್​ ಅವರ ಮುಂದಿನ ಸಿನಿಮಾ ಯಾವುದು? ಈ ಪ್ರಶ್ನೆಗೆ ಉತ್ತರ ಎಂಬಂತೆ ಒಂದು ಫೋಟೋ ವೈರಲ್​ ಆಗಿದೆ.

ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ವೆಂಕಟ್​ ಪ್ರಭು ಅವರು ಸುದೀಪ್​ ಜೊತೆ ಇರುವ ಫೋಟೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ ಅವರು ನೀಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ‘ಎಂಥ ಅದ್ಭುತ ಆತಿಥ್ಯ. ಧನ್ಯವಾದಗಳು ಸುದೀಪ್​ ಅವರೇ. ನೀವು ಅತ್ಯುತ್ತಮ ಬಾಣಸಿಗ. ನಮ್ಮ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇನೆ. ಮುಂಚಿತವಾಗಿಯೇ ಹುಟ್ಟುಹಬ್ಬದ ಶುಭಾಶಯಗಳು’ ಎಂದು ವೆಂಕಟ್​ ಪ್ರಭು ಟ್ವೀಟ್​ ಮಾಡಿದ್ದಾರೆ.

ಇತ್ತೀಚೆಗೆ ವೆಂಕಟ್​ ಪ್ರಭು ಅವರು ಬೆಂಗಳೂರಿಗೆ ಬಂದು ಸುದೀಪ್​ ಅವರನ್ನು ಭೇಟಿ ಆಗಿದ್ದಾರೆ ಎನ್ನಲಾಗಿದೆ. ಕಿಚ್ಚನ ನಿವಾಸಕ್ಕೆ ತೆರಳಿದ ಅವರಿಗೆ ಭರ್ಜರಿ ಆತಿಥ್ಯ ಸಿಕ್ಕಿದೆ. ಸ್ವತಃ ಸುದೀಪ್​ ಅವರು ಕೈಯಾರೆ ಅಡುಗೆ ಮಾಡಿ ಬಡಿಸಿದ್ದಾರೆ. ಈ ಆತಿಥ್ಯಕ್ಕೆ ಮನಸೋತಿರುವ ವೆಂಕಟ್​ ಪ್ರಭು ಅವರು ಸೋಶಿಯಲ್​ ಮೀಡಿಯಾ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ‘ನಮ್ಮ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇನೆ’ ಎಂದು ಅವರು ಹೇಳಿರುವುದರಿಂದ ಸುದೀಪ್​ ಜೊತೆ ಅವರು ಸಿನಿಮಾ ಮಾಡುತ್ತಾರೆ ಎಂಬ ಸುಳಿವು ಸಿಕ್ಕಂತಾಗಿದೆ.

ಸೆ.2ರಂದು ಸುದೀಪ್​ ಅವರ ಬರ್ತ್​ಡೇ. ಅಂದು ಅನೇಕ ಹೊಸ ಪ್ರಾಜೆಕ್ಟ್​ಗಳ ಬಗ್ಗೆ ಮಾಹಿತಿ ಬಹಿರಂಗ ಆಗುವ ನಿರೀಕ್ಷೆ ಇದೆ. ಸುದೀಪ್​ ಮತ್ತು ವೆಂಕಟ್​ ಪ್ರಭು ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ಅಂದು ನಿಖರ ಉತ್ತರ ಸಿಗಲಿದೆ. ಕನ್ನಡ ಮಾತ್ರವಲ್ಲದೆ, ಹಲವು ಭಾಷೆಯ ಚಿತ್ರರಂಗಗಳಲ್ಲೂ ಸುದೀಪ್​ ಅವರಿಗೆ ಅಭಿಮಾನಿಗಳಿದ್ದಾರೆ. ಎಲ್ಲ ಭಾಷೆಯಲ್ಲೂ ಅವರು ಸ್ನೇಹಿತರನ್ನು ಸಂಪಾದಿಸಿದ್ದಾರೆ. ಸುದೀಪ್​ ಅವರ ಮುಂಬರುವ ಎಲ್ಲ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲೇ ತಯಾರಾಗಲಿವೆ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಕುಟುಂಬದಲ್ಲಿ ​ಮದುವೆ ಸಂಭ್ರಮ; ಇಲ್ಲಿವೆ ಕಲರ್​ಫುಲ್​ ಫ್ಯಾಮಿಲಿ ಫೋಟೋಗಳು

ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರ್ಜರಿ ಗಿಫ್ಟ್, ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ಅನಿಲ್ ಕುಂಬ್ಳೆ; ಇಂಪ್ರೆಸ್ ಆದ ಕಿಚ್ಚ

Follow Us
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು