AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡತಿಯಲ್ಲಿ ಖಡಕ್​ ವಿಲನ್​ ರಮೋಲಾ ನಿಜ ಜೀವನದಲ್ಲಿ ಹೀಗಿದ್ದಾರಾ?; ಸಣ್ಣ ಘಟನೆಯಿಂದ ಎಲ್ಲವೂ ಗೊತ್ತಾಯ್ತು

ರಮೋಲಾ ತೆರೆಮೇಲೆ ಮಾಡುತ್ತಿರುವ ಪಾತ್ರಕ್ಕೂ ಅವರ ನಿಜ ಜೀವನಕ್ಕೂ ಒಂದು ಸ್ವಲ್ಪವೂ ಸಾಮ್ಯತೆ ಇಲ್ಲ. ಅವರು ಇಲ್ಲಿವರೆಗೂ ದೊಡ್ಡ ಕಷ್ಟ ಎಂಬುದನ್ನು ನೋಡಿಲ್ಲ.

ಕನ್ನಡತಿಯಲ್ಲಿ ಖಡಕ್​ ವಿಲನ್​ ರಮೋಲಾ ನಿಜ ಜೀವನದಲ್ಲಿ ಹೀಗಿದ್ದಾರಾ?; ಸಣ್ಣ ಘಟನೆಯಿಂದ ಎಲ್ಲವೂ ಗೊತ್ತಾಯ್ತು
ಕನ್ನಡತಿಯಲ್ಲಿ ಖಡಕ್​ ವಿಲನ್​ ರಮೋಲಾ ನಿಜ ಜೀವನದಲ್ಲಿ ಹೀಗಿದ್ದಾರಾ?; ಸಣ್ಣ ಘಟನೆಯಿಂದ ಎಲ್ಲವೂ ಗೊತ್ತಾಯ್ತು
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 29, 2021 | 8:27 PM

Share

‘ಕನ್ನಡತಿ’ ಧಾರಾವಾಹಿ ಮನೆಮಾತಾಗಿದೆ. ಈ ಧಾರಾವಾಹಿಯಲ್ಲಿ ರಮೋಲಾ ಅವರು ಸಾನಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ನೆಗೆಟಿವ್​ ಶೇಡ್​ನ​ ಪಾತ್ರ. ಅವರ ಮಾತು, ಗತ್ತು ಎಲ್ಲ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಅವರ ನಿಜ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ಅನೇಕರ ಆಸೆಯಾಗಿತ್ತು. ಇದಕ್ಕೆ ಬಿಗ್​ ಬಾಸ್​ ಮಿನಿ ಸೀಸನ್​ ವೇದಿಕೆ ಕಲ್ಪಿಸಿಕೊಟ್ಟಿದೆ. ತೆರೆಮೇಲೆ ಖಡಕ್​ ಆಗಿ ಕಾಣಿಸಿಕೊಳ್ಳುವ ರಮೋಲಾ ಇವರೇನಾ ಎಂದು ಪ್ರಶ್ನಿಸುವ ರೀತಿಯಲ್ಲಿ ಘಟನೆ ಒಂದು ನಡೆದಿದೆ.

ರಮೋಲಾ ತೆರೆಮೇಲೆ ಮಾಡುತ್ತಿರುವ ಪಾತ್ರಕ್ಕೂ ಅವರ ನಿಜ ಜೀವನಕ್ಕೂ ಒಂದು ಸ್ವಲ್ಪವೂ ಸಾಮ್ಯತೆ ಇಲ್ಲ. ಅವರು ಇಲ್ಲಿವರೆಗೂ ದೊಡ್ಡ ಕಷ್ಟ ಎಂಬುದನ್ನು ನೋಡಿಲ್ಲ. ಯಾವ ವಿಚಾರದಲ್ಲೂ ಅವರು ಜವಾಬ್ದಾರಿ ಹೊತ್ತುಕೊಳ್ಳುವ ಪರಿಸ್ಥಿತಿ ಬಂದಿಲ್ಲ. ಅವರಿಗೆ ಇಷ್ಟ ಬಂದಿದ್ದನ್ನು ಓದುವ ಹಾಗೂ ಇಷ್ಟದ ಕೆಲಸ ಮಾಡುವ ಅವಕಾಶವನ್ನು ಕುಟುಂಬದವರು ನೀಡಿದ್ದರು. ಹೀಗಾಗಿ ಯಾವುದು ಕೂಡ ಸಮಸ್ಯೆ ಎಂದು ಅವರಿಗೆ ಅನಿಸೇ ಇಲ್ಲ.

ರಮೋಲಾಗೆ ಅಡುಗೆ ಮಾಡೋಕೆ ಬರುವುದಿಲ್ಲ. ಇದನ್ನು ಅವರು ಓಪನ್​ ಆಗಿಯೇ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಬಿಗ್​ ಬಾಸ್​ ಮನೆಯಲ್ಲಿ ಎಲ್ಲರಿಗೂ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಇದರ ಅನುಸಾರ ಎಲ್ಲರೂ ಅಡುಗೆ ಮಾಡಿ ಮನೆಮಂದಿಗೆ ಬಡಿಸಬೇಕು. ಅಂತೆಯೇ ರಮೋಲಾ ಕೂಡ ಅಡುಗೆ ಮಾಡೋಕೆ ಮುಂದಾದರು.

ರಮೋಲಾ ಅಡುಗೆ ಮಾಡೋಕೆ ವಿಳಂಬವಾಗಿತ್ತು. ಇದು ಮನೆಯವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ, ಅಡುಗೆ ರುಚಿಯಾಗಿತ್ತು. ಮೊದಲ ಪ್ರಯತ್ನದಲ್ಲೇ ಅವರು ಯಶಸ್ವಿಯಾಗಿದ್ದರು. ಇದನ್ನು ನಿರಂಜನ್​ ಬಾಯ್ತುಂಬ ಹೊಗಳಿದರು. ಈ ಮಾತು ಕೇಳುತ್ತಿದ್ದಂತೆ ರಮೋಲಾ ಗಳಗಳನೆ ಅತ್ತರು. ತೆರೆಮೇಲೆ ಕಾಣಿಸುವ ಸಾನಿಯಾಗೂ ತೆರೆಹಿಂದಿನ ರಮೋಲಾಗೂ ತುಂಬಾನೇ ವ್ಯತ್ಯಾಸವಿದೆ ಎಂದು ವೀಕ್ಷಕರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?

‘ನಾನು ಎಷ್ಟು ಟೇಕ್​ ತೆಗೆದುಕೊಳ್ತೀನಿ ಅಂತ ಬೆಟ್​ ಕಟ್ಟುತ್ತಿದ್ದರು’; ಅವಮಾನದ ಹಾದಿ ನೆನೆದ ಕಿರಣ್​ ರಾಜ್

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!