AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನು ಗಂಡಸಾಗಿರಬಹುದು, ಆದರೆ ನಿನಗಿಂತ ಹೆಚ್ಚು ಪ್ರಬುದ್ಧತೆ ನನಗಿದೆ; ಸಿಟ್ಟಾದ ವೈಷ್ಣವಿ

ಬಿಗ್​ ಬಾಸ್​ ಮನೆಯಲ್ಲಿ ಎಲ್ಲರಿಗೂ ತಮ್ಮ ಜೀವನದಲ್ಲಾದ ನೋವಿನ ಕಥೆ ಹೇಳಿಕೊಳ್ಳೋಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ವೇಳೆ ವೈಷ್ಣವಿ ತಮ್ಮ ಕಥೆಯನ್ನು ಮನೆ ಮಂದಿಯವರ ಮುಂದೆ ಬಿಚ್ಚಿಟ್ಟಿದ್ದಾರೆ.

ನೀನು ಗಂಡಸಾಗಿರಬಹುದು, ಆದರೆ ನಿನಗಿಂತ ಹೆಚ್ಚು ಪ್ರಬುದ್ಧತೆ ನನಗಿದೆ; ಸಿಟ್ಟಾದ ವೈಷ್ಣವಿ
ನೀನು ಗಂಡಸಾಗಿರಬಹುದು, ಆದರೆ ನಿನಗಿಂತ ಹೆಚ್ಚು ಪ್ರಬುದ್ಧತೆ ನನಗಿದೆ; ಸಿಟ್ಟಾದ ವೈಷ್ಣವಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 29, 2021 | 2:14 PM

Share

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಮಿಥುನ ರಾಶಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡವರು ವೈಷ್ಣವಿ. ಈಗ ಅವರು ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಅವರು ತಮ್ಮ ನೋವಿನ ಕಥೆ ಹೇಳಿಕೊಂಡಿದ್ದಾರೆ. ಈ ವೇಳೆ ಅವರಿಗೆ ಸಿಟ್ಟು ಮತ್ತು ಅಳು ಎರಡೂ ಒಟ್ಟಿಗೆ ಬಂದಿದೆ. ಅವರ ಮಾತನ್ನು ಕೇಳಿ ಮನೆ ಮಂದಿ ಅಚ್ಚರಿಗೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಎಲ್ಲರಿಗೂ ತಮ್ಮ ಜೀವನದಲ್ಲಾದ ನೋವಿನ ಕಥೆ ಹೇಳಿಕೊಳ್ಳೋಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ವೇಳೆ ವೈಷ್ಣವಿ ತಮ್ಮ ಕಥೆಯನ್ನು ಮನೆ ಮಂದಿಯವರ ಮುಂದೆ ಬಿಚ್ಚಿಟ್ಟಿದ್ದಾರೆ. ಅವರಿಗೆ ತಂದೆ ಇಲ್ಲ. ಹಾಗಂತ ಅವರು ಮೃತಪಟ್ಟಿದ್ದಾರೆ ಎಂದರ್ಥವಲ್ಲ. ತಂದೆಯ ಮುಖವನ್ನು ನೋಡುವ ಅವಕಾಶ ಇವರಿಗೆ ಸಿಕ್ಕಿಲ್ಲ. ತಂದೆ ಕುಟುಂಬವನ್ನು ಬಿಟ್ಟು ಓಡಿ ಹೋಗಿದ್ದಾರೆ ಎನ್ನುವ ವಿಚಾರದಲ್ಲಿ ಸಾಕಷ್ಟು ಜನರಿಂದ ಸಾಕಷ್ಟು ಬಾರಿ ಹೇಳಿಸಿಕೊಂಡಿದ್ದಾರೆ ವೈಷ್ಣವಿ.

‘ನನಗೆ ನನ್ನ ತಂದೆ ಇಲ್ಲ ಎನ್ನುವ ವಿಚಾರದಲ್ಲಿ ಸಾಕಷ್ಟು ಹೇಳಿಸಿಕೊಂಡಿದ್ದೇನೆ. ನಾನು ಚಿಕ್ಕಂದಿನಿಂದಲೂ ಒಂಟಿಯಾಗಿ ಬೆಳೆದಿದ್ದೇನೆ. ಏನೇ ನೋವಾದರೂ ಅಮ್ಮನ ಜತೆ ಶೇರ್​ ಮಾಡಿಕೊಳ್ಳುತ್ತಿರಲಿಲ್ಲ. ನಾನು ಆಂಜನೇಯನ ಜತೆ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ’ ಎಂದು ಮಾತು ಆರಂಭಿಸಿದರು ವೈಷ್ಣವಿ.

‘ದಯವಿಟ್ಟು ಚಿಕ್ಕವರು ಎಂದು ಕೀಳಾಗಿ ಕಾಣಬೇಡಿ. ಚಿಕ್ಕವರಿಗೆ ಏನೂ ಗೊತ್ತಿಲ್ಲ, ಕಷ್ಟ ನೋಡಿಲ್ಲ ಎಂದಲ್ಲ. ಹೀಯಾಳಿಸೋದು ಬೇರೆ ರೇಗಿಸೋದು ಬೇರೆ. ದಯವಿಟ್ಟು ಚೈಲ್ಡ್​ ಅನ್ನೋದನ್ನು ಬಿಡಿ. ನನ್ನನ್ನು ಜನ ತುಂಬಾ ಹೀಯಾಳಿಸಿಕೊಂಡಿದ್ದೇನೆ. ನೀನು ಗಂಡಸಾಗಿರಬಹುದು, ಆದರೆ ನಿನಗಿಂತ ಹೆಚ್ಚು ಪ್ರಬುದ್ಧತೆ ನನಗಿದೆ. ನೀನು ನನ್ನಷ್ಟು ಲೈಫ್​ ನೋಡಿಲ್ಲ. ಅಪ್ಪ-ಅಮ್ಮ ಓದಿಸಿದ್ದಾರೆ. ಅದಕ್ಕೆ ಚೆನ್ನಾಗಿ ಓದಿ ಈಗ ದುಡೀತಾ ಇದೀಯಾ’ ಎಂದು ಹೀಯಾಳಿಸುವವರಿಗೆ ತಿರುಗೇಟು ಕೊಟ್ಟರು ಅವರು. ಈ ಮಾತನ್ನು ಕೇಳುತ್ತಿದ್ದಂತೆಯೇ ಮನೆ ಮಂದಿ ಶಿಳ್ಳೆ-ಚಪ್ಪಾಳೆ ಹೊಡೆದರು.

ಇದನ್ನೂ ಓದಿ: Bigg Boss Finale: ಬಿಗ್​ ಬಾಸ್​​ ಸ್ಕ್ರಿಪ್ಟೆಡ್ ಶೋ ಹೌದೋ ಅಲ್ಲವೋ? ಸುದೀಪ್​ ಎದುರು ನೇರವಾಗಿ ಉತ್ತರ ಕೊಟ್ಟ ವೈಷ್ಣವಿ

‘ಅಪ್ಪನ ಹೆಸರು ಗೊತ್ತಾಗಿದ್ದೇ 10ನೇ ಕ್ಲಾಸಲ್ಲಿ; ಸಾಯೋಕಿಂತ ಮುಂಚೆ ಅವ್ರನ್ನ ನೋಡ್ಬೇಕು’: ಮಿಥುನ ರಾಶಿ ವೈಷ್ಣವಿ ಕಣ್ಣೀರು