ಅತ್ಯಾಚಾರಿಗಳಿಗೆ ತಕ್ಷಣಕ್ಕೆ ಕಠಿಣದಲ್ಲೇ ಕಠಿಣ ಶಿಕ್ಷೆ ನೀಡಬೇಕು; ನಟಿ ಪೂಜಾ ಗಾಂಧಿ ಆಗ್ರಹ
‘ಗ್ಯಾಂಗ್ ರೇಪ್ನಂತಹ ಪ್ರಕರಣ ಬೇರೆ ರಾಜ್ಯದಲ್ಲಿ ಕೇಳುತ್ತಿದ್ದೆವು. ಈಗ ಕರ್ನಾಟಕದಲ್ಲಿ ಇದು ನಡೆದಿರೋದು ನಿಜಕ್ಕೂ ಬೇಸರದ ಸಂಗತಿ’ ಎಂದಿದ್ದಾರೆ ಪೂಜಾ ಗಾಂಧಿ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂಜಾ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ‘ಗ್ಯಾಂಗ್ ರೇಪ್ನಂತಹ ಪ್ರಕರಣ ಬೇರೆ ರಾಜ್ಯದಲ್ಲಿ ಕೇಳುತ್ತಿದ್ದೆವು. ಈಗ ಕರ್ನಾಟಕದಲ್ಲಿ ಇದು ನಡೆದಿರೋದು ನಿಜಕ್ಕೂ ಬೇಸರದ ಸಂಗತಿ’ ಎಂದಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಪೂಜಾ ಗಾಂಧಿ, ‘ರೇಪ್ ಆರೋಪಿಗಳಿಗೆ ಕಠಿಣಕ್ಕಿಂತ ಕಠಿಣ ಶಿಕ್ಷೆ ಆಗಬೇಕು. ಹೆಣ್ಮಕ್ಕಳು ಅಷ್ಟೊತ್ತಲ್ಲಿ ಏಕೆ ಹೋಗಬೇಕು ಅನ್ನೋದು ತಪ್ಪು. ರಾಜಕಾರಣಿಗಳೇ ಆ ರೀತಿಯಾಗಿ ಮಾತನಾಡೋದು ತಪ್ಪು. ಬೇರೆಯವರು ರೇಪ್ ಮಾಡುವ ಮುಂಚೆ ಹೆದರಬೇಕು. ಅತ್ಯಾಚಾರಿಗಳು ಹೆದರುವಂತಹ ಶಿಕ್ಷೆ ಕೊಡಬೇಕು’ ಎಂದಿದ್ದಾರೆ ಪೂಜಾ ಗಾಂಧಿ.
ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಇಡೀ ರಾಜ್ಯಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿದೆ. ಈ ಬಗ್ಗೆ ಸಾಕಷ್ಟು ಸೆಲೆಬ್ರಿಟಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು ವಿವಿಯಲ್ಲಿ ವಿದ್ಯಾರ್ಥಿನಿಯರ ಸಂಚಾರಕ್ಕೆ ನಿರ್ಬಂಧ; ಸುತ್ತೋಲೆ ವಾಪಸ್ ಪಡೆಯಲು ಸಚಿವ ಅಶ್ವತ್ಥನಾರಾಯಣ ಆದೇಶ
ಆಗ ವೀರಪ್ಪನ್ ಕೇಸ್ನಲ್ಲಿ ಗಿಫ್ಟ್: ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!

