ಜೆಫ್ ಬಿಜೋಸ್ ಆಕಾಶಕ್ಕೆ ಹಾರಿದ ರ್ಯಾಕೆಟ್ನ ಮಿನಿಯೇಚರ್ ಅವೃತ್ತಿ ನೀವು ಖರೀದಿಸಿ ಮನೆಗೆ ತರಬಹುದು!
ಬ್ಲೂ ಒರಿಜಿನ್ ಸಂಸ್ಥೆಯ ಸಹಯೋಗದೊಂದಿಗೆ ಎಸ್ಟೆಸ್ ರಾಕೆಟ್ಸ್ ಕಂಪನಿಯು ತಯಾರಿಸಿರುವ ಇದರ ಆಕಾರದ ಕಡೆ ನೀವು ಜಾಸ್ತಿ ಗಮನ ನೀಡಬೇಡಿ. ಯಾಕೆಂದರೆ, ಆದರೆ ಆಕಾರ ಬೇರೆ ಏನನ್ನೋ ನೆನಪಿಸುತ್ತದೆ.
ಅಮೇಜಾನ್ ಸಂಸ್ಥೆಯ ಮುಖ್ಯಸ್ಥ ಜೆಫ್ ಬಿಜೋಸ್ ಇತ್ತೀಚಿಗೆ ರಾಕೆಟ್ ಒಂದರಲ್ಲಿ ಅಂತರಿಕ್ಷದೆಡೆ ಹಾರಿ ವಾಪಸ್ಸು ಬಂದಿರುವುದನ್ನು ನೀವು ಪ್ರಾಯಶ ಟಿವಿಗಳಲ್ಲಿ ನೋಡಿರುತ್ತೀರಿ. ಅವರೇನು ಬಿಡಿ ಮಾರಾಯ್ರೇ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಅಂತರಿಕ್ಷಕ್ಕಾದರೂ ಹಾರುತ್ತಾರೆ ಇಲ್ಲವೇ ಅಂತರಿಕ್ಷವನ್ನೇ ಕೊಳ್ಳುತ್ತಾರೆ ಅಂತ ನೀವಂದುಕೊಳ್ಳವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಅವರು ಹಾರಿದ ರಾಕೆಟ್ ನ ಮಿನಿಯೇಚರ್ ಮಾಡೆಲ್ ಅನ್ನು ಖರೀದಿಸಿ ಮನೆಯಲ್ಲಿರುವ ಮಕ್ಕಳಿಗೆ ಇಲ್ಲವೇ, ನಿಮ್ಮ ಆಪ್ತವಲಯದಲ್ಲಿ ಯಾರದಾದರೂ ಮಗುವಿನ ಬರ್ತ್ ಡೇ ಇದ್ದರೆ, ಇದನ್ನು ಉಡುಗೊರೆ ರೂಪದಲ್ಲಿ ಕೊಡಬಹುದು. ಇದರ ಬೆಲೆ ರೂ. 5,000 ಕ್ಕಿಂತ ಸ್ವಲ್ಪ ಜಾಸ್ತಿ.
ಬ್ಲೂ ಒರಿಜಿನ್ ಸಂಸ್ಥೆಯ ಸಹಯೋಗದೊಂದಿಗೆ ಎಸ್ಟೆಸ್ ರಾಕೆಟ್ಸ್ ಕಂಪನಿಯು ತಯಾರಿಸಿರುವ ಇದರ ಆಕಾರದ ಕಡೆ ನೀವು ಜಾಸ್ತಿ ಗಮನ ನೀಡಬೇಡಿ. ಯಾಕೆಂದರೆ, ಆದರೆ ಆಕಾರ ಬೇರೆ ಏನನ್ನೋ ನೆನಪಿಸುತ್ತದೆ. ಆಂಥ ಆಕಾರದ ಬಹಳಷ್ಟು ವಸ್ತುಗಳನ್ನು ನಾವು ನೋಡಿರುತ್ತೇವೆ ಮತ್ತು ಅವು ಏನನ್ನು ಹೋಲುತ್ತವೆ ಅನ್ನುವುದರ ಬಗ್ಗೆ ಯೋಚಿಸುವುದಿಲ್ಲ. ಈ ರಾಕೆಟ್ ಅನ್ನು ಸಹ ಆದೇ ಲಿಸ್ಟ್ಗೆ ಸೇರಿಸಿಬಿಡಿ.
ಅಂದಹಾಗೆ, ಬಿಜೋಸ್ ಬಾಹ್ಯಾಕಾಶಕ್ಕೆ ಹೋಗಿದ್ದ ರಾಕೆಟ್ ಹೆಸರು ನ್ಯೂ ಶೆಪ್ಹರ್ಡ್ ಆಗಿತ್ತು ಮತ್ತು ಅದು ಸಹ ಇದೇ ಆಕಾರದಲ್ಲಿತ್ತು. ಬಿಡಿ, ಅದರ ಬಗ್ಗೆ ಹೆಚ್ಚು ಯೋಚಿಸುವುದು ಬೇಡ. ಆದರೆ, ನಿಮಗೆ ತಿಳಿದಿರಬೇಕಾದ ಸಂಗತಿಯೇನೆಂದರೆ, ಮಿನಿಯೇಚರ್ ರಾಕೆಟ್ ನಿಮಗೆ ಸಿಗೋದು ನವೆಂಬರ್ನಲ್ಲಿ ಮಾತ್ರ.
ಆದರೆ ಮುಂಗಡ ಬುಕಿಂಗ್ ಮಾಡುವ ಅವಕಾಶ ಖಂಡಿತ ಇದೆ. ಬರೀ ರಾಕೆಟ್ ಬೇಕಾದರೆ ನಿಮಗದು ರೂ 5189ಕ್ಕೆ ಸಿಗುತ್ತದೆ. ಜೊತೆಗೆ ಲಾಂಚ್ ಪ್ಯಾಡ್, ಪ್ಯಾರಾಚೂಟ್ ಮೊದಲಾದವುಗಳನ್ನು ಒಳಗೊಂಡ ಪೂರ್ತಿ ನ್ಯೂ ಶೆಪ್ಹರ್ಡ್ ಸೆಟ್ ಬೇಕಾದರೆ ಸುಮಾರು ರೂ, 8,000 ತೆರಬೇಕಾಗುತ್ತದೆ.
ಇದನ್ನೂ ಓದಿ: Viral Video: ಮದುವೆ ಮಂಟಪದಲ್ಲಿಯೇ ಟಗ್ ಆಫ್ ವಾರ್ ಸ್ಪರ್ಧೆ; ಜಾರಿ ಬಿದ್ದ ಮಹಿಳೆಯನ್ನು ವಿಡಿಯೋದಲ್ಲೇ ನೋಡಿ