Viral Video: ಮದುವೆ ಮಂಟಪದಲ್ಲಿಯೇ ಟಗ್ ಆಫ್ ವಾರ್ ಸ್ಪರ್ಧೆ; ಜಾರಿ ಬಿದ್ದ ಮಹಿಳೆಯನ್ನು ವಿಡಿಯೋದಲ್ಲೇ ನೋಡಿ

ಮದುವೆ ಮಂಟಪದಲ್ಲಿ ಟಗ್ ಆಫ್ ವಾರ್ ನಡೆಯುತ್ತಿದೆ. ನಗುತ್ತಾ ಎಲ್ಲರೂ ಸಂತೋಷ ಪಡುತ್ತಿದ್ದಾರೆ. ದುಪ್ಪಟ್ಟ ಹಿಡಿದು ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು ಗುಂಪು ಮಾಡಿಕೊಂಡು ಟಗ್​ ಆಫ್​ ವಾರ್​ ಸ್ಪರ್ಧೆ ನಡೆಸುತ್ತಿದ್ದಾರೆ.

Viral Video: ಮದುವೆ ಮಂಟಪದಲ್ಲಿಯೇ ಟಗ್ ಆಫ್ ವಾರ್ ಸ್ಪರ್ಧೆ; ಜಾರಿ ಬಿದ್ದ ಮಹಿಳೆಯನ್ನು ವಿಡಿಯೋದಲ್ಲೇ ನೋಡಿ
ಮದುವೆ ಮಂಟಪದಲ್ಲಿಯೇ ಟಗ್ ಆಫ್ ವಾರ್ ಸ್ಪರ್ಧೆ
Follow us
| Updated By: shruti hegde

Updated on: Aug 25, 2021 | 9:55 AM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವು ಮುನ್ನಚ್ಚರಿಕೆಯ ಸಂದೇಶವಾಗಿರುತ್ತದೆ. ಇನ್ನು ಕೆಲವು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವಷ್ಟು ತಮಾಷೆಯ ವಿಡಿಯೋಗಳಾಗಿರುತ್ತದೆ. ಅದರಲ್ಲಿಯೂ ಮದುವೆ ಸಮಾರಂಭದಲ್ಲಿ ನಡೆಯುವ ತಮಾಷೆಯ ವಿಡಿಯೋಗಳು ಹೆಚ್ಚು ಮನ ಗೆಲ್ಲುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ನೀವೂ ನಕ್ಕು ನಕ್ಕು ಸುಸ್ತಾಗುವಷ್ಟು ಮಜವಾಗಿದೆ ಈ ವಿಡಿಯೋ.

ಮದುವೆ ಮಂಟಪದಲ್ಲಿ ಟಗ್ ಆಫ್ ವಾರ್ ನಡೆಯುತ್ತಿದೆ. ನಗುತ್ತಾ ಎಲ್ಲರೂ ಸಂತೋಷ ಪಡುತ್ತಿದ್ದಾರೆ. ದುಪ್ಪಟ್ಟ ಹಿಡಿದು ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು ಗುಂಪು ಮಾಡಿಕೊಂಡು ಟಗ್​ ಆಫ್​ ವಾರ್​ ಸ್ಪರ್ಧೆ ನಡೆಸುತ್ತಿದ್ದಾರೆ. ಒಂದು ಗುಂಪಿನವರು ದುಪ್ಪಟ್ಟವನ್ನು ಜೋರಾಗಿ ಎಳೆದಿದ್ದರಿಂದ ಹೆಣ್ಣಿನ ಕಡೆಯವರು ಮದುವೆ ಮಂಟಪದಲ್ಲಿ ಪೂಜೆಗೆಂದು ಸಿದ್ದಗೊಳಿಸಿದ್ದ ಹೋಮದ ಬೆಂಕಿಗೆ ಜಾರಿ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ ಎಂಬುದು ಅವರ ಮುಖದಲ್ಲಿನ ನಗುವಿನಿಂದ ತಿಳಿಯುತ್ತದೆ.

ಮದುವೆಯಲ್ಲಿ ಸಾಕಷ್ಟು ತಮಾಷೆಯ ದೃಶ್ಯಗಳು ನಡೆಯುತ್ತಿರುತ್ತದೆ. ಇವುಗಳು ಹೆಚ್ಚು ನಗು ತರಿಸುತ್ತವೆ. ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ಸಕತ್ ವೈರಲ್ ಆಗಿದೆ. ಮಹಿಳೆ ಕೆಳಗೆ ಬಿದ್ದಾಕ್ಷಣ ಒಮ್ಮೆಲೆ ಭಯವೆನಿಸಿದರೂ ಮಹಿಳೆಯ ಮುಖದಲ್ಲಿಯೂ ನಗು ನೋಡಿದಾಕ್ಷಣ ನಗು ಬರುವುದಂತೂ ನಿಜ.

ಮದುವೆಯಲ್ಲಿ ಮೋಜು, ಮಸ್ತಿ ಮಾಡುವುದು ತಪ್ಪಲ್ಲ. ಆದರೆ ಕೆಲವು ಬಾರಿ ಅತಿಯಾದ ಮೋಜಿನಿಂದ ಅವಘಡಗಳು ಉಂಟಾಗಬಹುದು. ಹಾಗಾಗಿ ಹೆಚ್ಚು ಜಾಗರೂಕರಾಗಿರಬೇಕು. ಈ ವಿಡಿಯೋ ಫುಲ್ ವೈರಲ್ ಆಗಿದ್ದು ನೆಟ್ಟಿಗರನ್ನು ರಂಜಿಸುತ್ತಿದೆ. ಓರ್ವರು ನಕ್ಕು ನಕ್ಕು ಸುಸ್ತಾದೆ ಎಂದು ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ನಗುವಿನ ಎಮೋಜಿಗಳನ್ನು ಕಳುಹಿಸಿದ್ದಾರೆ.

ಇದನ್ನೂ ಓದಿ:

Viral Video: ತನ್ನ ಮದುವೆಗೆ ಕಾಫಿ ಕುಡೀತಾ, ಕಾರು ಓಡಿಸಿಕೊಂಡು ಬಂದ ವಧು; ಆಶ್ಚರ್ಯಗೊಂಡ ನೆಟ್ಟಿಗರು

Video: ಮದುವೆಗಾಗಿ ದೇವಸ್ಥಾನಕ್ಕೆ ಬಂದ 2 ಕುಟುಂಬಗಳ ಮಧ್ಯೆ ಹೊಡೆದಾಟ; ವಧುವನ್ನು ತಪ್ಪಿಸಲು ಹೋಗಿ ವರನಿಗೆ ಗಾಯ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್