10 ಅಡಿ ಉದ್ದದ ದೈತ್ಯ ಅನಕೊಂಡ ರಸ್ತೆ ದಾಟುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ; ಕೆಲಹೊತ್ತು ಟ್ರಾಫಿಕ್ ಜಾಮ್
Viral Video: ರಸ್ತೆಯಲ್ಲಿ ವಾಹನಗಳು ಸಾಗುತ್ತಿದ್ದವು. ಈ ವೇಳೆ ಅನಕೊಂಡವೊಂದು ರಸ್ತೆ ದಾಟಿ ಒಂದುಕಡೆಯಿಂದ ಮತ್ತೊಂದು ಕಡೆಗೆ ದಾಟಲು ಮುಂದಾಗಿದೆ.
ಇತ್ತೀಚೆಗಂತೂ ಕಾಡು ಪ್ರಾಣಿಗಳು ರಸ್ತೆಗಳಲ್ಲಿ ಓಡಾಡುತ್ತಿರುವ ಘಟನೆಯ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಸೆರೆಯಾದ ದೃಶ್ಯದಲ್ಲಿ ದೈತ್ಯ ಅನಕೊಂಡವೊಂದು ರಸ್ತೆ ದಾಟುತ್ತಿದೆ. ಈ ಭಯಾನಕ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸುಮಾರು 10 ಅಡಿ ಉದ್ದದ ದೈತ್ಯ ಅನಕೊಂಡ ರಸ್ತೆ ದಾಟುತ್ತಿರುವುದರಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಆಗಿದೆ.
ರಸ್ತೆಯಲ್ಲಿ ವಾಹನಗಳು ಸಾಗುತ್ತಿದ್ದವು. ಈ ವೇಳೆ ಅನಕೊಂಡವೊಂದು ರಸ್ತೆ ದಾಟಿ ಒಂದುಕಡೆಯಿಂದ ಮತ್ತೊಂದು ಕಡೆಗೆ ದಾಟಲು ಮುಂದಾಗಿದೆ. ದೈತ್ಯಾಕಾರದ ಹಾವನ್ನು ನೋಡಿ ಕೆಲವರು ಬೆರಗಾಗಿದ್ದಾರೆ. ಇನ್ನು ಕೆಲವರು ಕ್ಯಾಮರಾದಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.
ಘಟನೆ ಬ್ರೆಜಿಲ್ನಲ್ಲಿ ನಡೆದಿದೆ. ಅನಕೊಂಡ ರಸ್ತೆ ದಾಟುವವರೆಗೂ ಕೆಲಹೊತ್ತು ವಾಹನಗಳೆಲ್ಲಾ ರಸ್ತೆಯ ಮಧ್ಯೆಯಲ್ಲಿಯೇ ನಿಂತಿತ್ತು. ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟಿದ ಹಾವು ಹುಲ್ಲಿರುವ ಪ್ರದೇಶಕ್ಕೆ ತೆರಳಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
View this post on Instagram
ಹಾವಿಗೆ ಯಾವುದೇ ಹಾನಿ ಮಾಡದೇ ರಸ್ತೆ ದಾಟುವವರೆಗೆ ವಾಹನಗಳನ್ನು ನಿಲ್ಲಿಸಿದ್ದರಿಂದ ಪ್ರಯಾಣಕರಿಗೆ ಮತ್ತು ಸುತ್ತಲಿದ್ದ ಜನರಿಗೆ ಶ್ಲಾಘನೆ ವ್ಯಕ್ತವಾಗಿದೆ. ದೈತ್ಯ ಹಾವು ನೋಡಿದ ನೆಟ್ಟಿಗರಲ್ಲಿ ಕೆಲವರು ಭಯಗೊಂಡಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:
Shocking News: ಬೈಕ್ ಹ್ಯಾಂಡಲ್ನಿಂದ ವಿಚಿತ್ರ ಶಬ್ದ; ತೆರೆದು ನೋಡಿದ್ರೆ 5 ಅಡಿ ಉದ್ದದ ನಾಗರಹಾವು!
Video: ವಿಮಾನವೇರಿದ ಹಾವು..; ಸರಕು ಹಾಕುವ ಜಾಗದಲ್ಲಿ ಸ್ನೇಕ್ ನೋಡಿ ಕಂಗಾಲಾದ ಸಿಬ್ಬಂದಿ
(Giant anaconda cross busy road video goes viral)
Published On - 11:33 am, Wed, 25 August 21