AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking Video: ಫ್ಯಾಮಿಲಿ ಡಿನ್ನರ್ ವೇಳೆ ಮಗುವಿನ ಪಕ್ಕದಲ್ಲೇ ಮುರಿದು ಬಿತ್ತು ಸೀಲಿಂಗ್ ಫ್ಯಾನ್; ಶಾಕಿಂಗ್ ವಿಡಿಯೋ ಇಲ್ಲಿದೆ

Viral Video: ಮನೆಯವರೆಲ್ಲರೂ ಒಟ್ಟಾಗಿ ಮನೆಯಲ್ಲಿ ಊಟ ಮಾಡುತ್ತಿರುವಾಗ ಸಿನಿಮೀಯ ರೀತಿಯಲ್ಲಿ ಸೀಲಿಂಗ್ ಫ್ಯಾನ್ ಕೆಳಗೆ ಬಿದ್ದಿದೆ. ಈ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Shocking Video: ಫ್ಯಾಮಿಲಿ ಡಿನ್ನರ್ ವೇಳೆ ಮಗುವಿನ ಪಕ್ಕದಲ್ಲೇ ಮುರಿದು ಬಿತ್ತು ಸೀಲಿಂಗ್ ಫ್ಯಾನ್; ಶಾಕಿಂಗ್ ವಿಡಿಯೋ ಇಲ್ಲಿದೆ
ಊಟ ಮಾಡುವಾಗ ಮುರಿದು ಬಿದ್ದ ಫ್ಯಾನ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 25, 2021 | 12:54 PM

ವಾರವಿಡೀ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುವ ಕುಟುಂಬಸ್ಥರು ವೀಕೆಂಡ್​ನಲ್ಲಿ (Weekend Dinner) ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುವ ಪದ್ಧತಿ ಕೆಲವು ಮನೆಗಳಲ್ಲಿದೆ. ವಾರಾಂತ್ಯದಲ್ಲೋ, ನೆಂಟರು ಮನೆಗೆ ಬಂದಾಗಲೋ, ಹಬ್ಬದ ದಿನದಂದೋ ಹೀಗೆ ಮನೆಮಂದಿಯೆಲ್ಲ ಒಟ್ಟಿಗೇ ಕುಳಿತು ಊಟ ಮಾಡುವಾಗ ತಲೆ ಮೇಲೆ ಸೀಲಿಂಗ್ ಫ್ಯಾನ್ ಬಿದ್ದರೆ ಏನು ಮಾಡುತ್ತೀರಿ? ಈ ರೀತಿಯ ಕಲ್ಪನೆ ನಿಮಗೆ ಯಾವತ್ತಾದರೂ ಬಂದಿದೆಯಾ? ಹೀಗೂ ಆಗಬಹುದು ಎಂದು ಯಾವತ್ತಾದರೂ ಅಂದುಕೊಂಡಿದ್ದೀರಾ? ಸದಾ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಪ್ಲಾನ್ ಮಾಡಿದ ವೀಕೆಂಡ್ ಪಾರ್ಟಿ ಶಾಕಿಂಗ್ ಪಾರ್ಟಿಯಾದರೆ ಹೇಗಿರುತ್ತದೆ? ಈ ರೀತಿಯ ಘಟನೆಯ ವಿಡಿಯೋವೊಂದು ಈಗ ಭಾರೀ ವೈರಲ್ ಆಗಿದೆ.

ಇದು ನೀವು ಕಲ್ಪನೆ ಮಾಡಿಕೊಳ್ಳಲೂ ಆಗದಂತಹ ಘಟನೆ. ಮನೆಯವರೆಲ್ಲರೂ ಒಟ್ಟಾಗಿ ಮನೆಯಲ್ಲಿ ಊಟ ಮಾಡುತ್ತಿರುವಾಗ ಸಿನಿಮೀಯ ರೀತಿಯಲ್ಲಿ ಸೀಲಿಂಗ್ ಫ್ಯಾನ್ ಕೆಳಗೆ ಬಿದ್ದಿದೆ. ಈ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕುಟುಂಬದ 6 ಜನರು ಅಡುಗೆ ಪದಾರ್ಥಗಳನ್ನು ಇಟ್ಟುಕೊಂಡು ಸುತ್ತಲೂ ಕುಳಿತು ಊಟ ಮಾಡುತ್ತಿರುವಾಗ ಫ್ಯಾನ್ ಕಳಚಿ ಕೆಳಗೆ ಬಿದ್ದಿದೆ. ಮೇಲೆಲ್ಲೋ ಏನೋ ಶಬ್ದವಾಗುತ್ತಿದ್ದಂತೆ ಊಟಕ್ಕೆ ಕುಳಿತಿದ್ದವರು ಸುತ್ತಲೂ ನೋಡುತ್ತಿದ್ದರು. ಆಗ ಮೇಲೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ಕಳಚಿ, ಊಟಕ್ಕೆ ಕುಳಿತಿದ್ದ ಮಗುವಿನ ಕಾಲಿನ ಬಳಿ ಬಿದ್ದಿದೆ. ಚೂರೇ ಚೂರು ಫ್ಯಾನ್ ಈಚೆ ಬಿದ್ದಿದ್ದರೂ ಮಗುವಿನ ತಲೆ ಛಿದ್ರವಾಗುತ್ತಿತ್ತು. ಫ್ಯಾನ್ ಬಿದ್ದಿದ್ದರಿಂದ ಮಗುವಿನ ಅಕ್ಕಪಕ್ಕ ಕುಳಿತವರ ಕಾಲಿಗೂ ಸ್ವಲ್ಪ ಗಾಯಗಳಾಗಿವೆ.

ಫ್ಯಾನ್ ಕೆಳಗೆ ಬೀಳುತ್ತಿದ್ದಂತೆ ಆ ಮಗುವಿನ ತಾಯಿ ಓಡಿಬಂದು ಮಗುವನ್ನು ತನ್ನತ್ತ ಎಳೆದುಕೊಂಡಿದ್ದಾಳೆ. ಅನಿರೀಕ್ಷಿತವಾಗಿ ಬಿದ್ದ ಫ್ಯಾನ್​ನಿಂದ ಒಂದುಕ್ಷಣ ಆ ಮನೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಜುಲೈ 8ರಂದು ವಿಯೆಟ್ನಾಂನಲ್ಲಿ ಮನೆಯ 8 ಸದಸ್ಯರು ಕುಳಿತು ಊಟ ಮಾಡುವಾಗ ಇದ್ದಕ್ಕಿದ್ದಂತೆ ಸೀಲಿಂಗ್ ಫ್ಯಾನ್ ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಮಗು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ

(Shocking Video: Ceiling Fan Falls Down During Family Dinner Watch Viral Video)

Published On - 12:50 pm, Wed, 25 August 21

ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ