Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Trending News: ಈ ಗ್ರಾಮದಲ್ಲಿರುವ ಮನೆಗಳ ಬೆಲೆ ಕೇವಲ 87 ರೂ. ಸೊನ್ನೆಗಳು ಮಿಸ್ ಆಗಿರಬಹುದು ಎಂದು ನೀವು ಭಾವಿಸಿದರೆ ನಿಮ್ಮ ಊಹೆ ತಪ್ಪು. ಸತ್ಯವಾಗಿಯೂ ಈ ಊರಿನಲ್ಲಿ ಕೇವಲ 87 ರೂ.ಗೆ ಮನೆಗಳು ಮಾರಾಟಕ್ಕಿವೆ!

Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!
ಇಟಲಿಯ ಮನೆಗಳು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 24, 2021 | 3:29 PM

ಸ್ವಂತದ್ದೊಂದು ಮನೆ ಮಾಡಿಕೊಳ್ಳಬೇಕೆಂಬುದು ಪ್ರತಿಯೊಬ್ಬರ ಕನಸು. ಈಗಂತೂ ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ ಮನೆ ಕಟ್ಟುವುದೇ ದೊಡ್ಡ ಸವಾಲಿನ ಕೆಲಸ. ಪೇಟೆಗಳಲ್ಲಿ ದುಬಾರಿಯೆಂದು ಎಷ್ಟೇ ಹಳ್ಳಿಗಳಲ್ಲಿ ಮನೆ ಕಟ್ಟಬೇಕೆಂದರೂ ಅಥವಾ ಮನೆ ಖರೀದಿಸಬೇಕೆಂದರೂ ಲಕ್ಷಾಂತರ ರೂ. ಖರ್ಚಾಗುತ್ತದೆ. ಆದರೆ, ಈ ಗ್ರಾಮದಲ್ಲಿರುವ ಮನೆಗಳ ಬೆಲೆ ಕೇವಲ 87 ರೂ. ಸೊನ್ನೆಗಳು ಮಿಸ್ ಆಗಿರಬಹುದು ಎಂದು ನೀವು ಭಾವಿಸಿದರೆ ನಿಮ್ಮ ಊಹೆ ತಪ್ಪು. ಸತ್ಯವಾಗಿಯೂ ಈ ಊರಿನಲ್ಲಿ ಕೇವಲ 87 ರೂ.ಗೆ ಮನೆಗಳು ಮಾರಾಟಕ್ಕಿವೆ!

ಈ ಗ್ರಾಮ ಇರುವುದು ಇಟಲಿಯಲ್ಲಿ. ಹಾಗಂತ ಇವೇನೂ ಗುಡಿಸಲುಗಳಲ್ಲ. ಅಚ್ಚುಕಟ್ಟಾಗಿ ಸಿಮೆಂಟ್​ನಿಂದ ಕಟ್ಟಲಾಗಿರುವ ಆಧುನಿಕ ಮನೆಗಳು ಇಲ್ಲಿ ಕೇವಲ 87 ರೂ. (1 ಯುರೋ)ಗೆ ಮಾರಾಟಕ್ಕಿವೆ. ಇಟಲಿಯಲ್ಲಿ ಈಗ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಗ್ರಾಮ ಇಟಲಿಯ ರಾಜಧಾನಿಗೂ ತೀರಾ ದೂರದಲ್ಲೇನೂ ಇಲ್ಲ. ಇಲ್ಲಿ ಮಾರಾಟಕ್ಕೆಂದೇ ಹತ್ತಾರು ಸಣ್ಣ ಸಣ್ಣ ಮನೆಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರು ಕೂಡ ಇಲ್ಲಿ ಬಂದು ಮನೆಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.

ಈ ಮನೆಗಳಿಗೆ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಲು ಆ. 28 ಕೊನೆಯ ದಿನವಾಗಿದೆ. ಶೀಘ್ರದಲ್ಲೇ ಇನ್ನಷ್ಟು ಮನೆಗಳು ಸಿದ್ಧವಾಗಲಿದ್ದು, ಅವುಗಳನ್ನು ಕೂಡ ಮಾರಾಟಕ್ಕೆ ಇಡಲಾಗುವುದು. ಈ ಊರಿನಲ್ಲಿರುವ ಕುಟುಂಬಸ್ಥರು ನಗರಗಳಿಗೆ ವಲಸೆ ಹೋಗಿ, ತಮ್ಮ ಪೂರ್ವಜರ ಮನೆಗಳನ್ನು ಮಾರಾಟಕ್ಕೆ ಇಡುತ್ತಿದ್ದಾರೆ. ಆ ಮನೆಗಳನ್ನು ಆನ್​ಲೈನ್​ನಲ್ಲಿ ಮಾರಾಟಕ್ಕೆ ಇರಿಸಲಾಗುತ್ತಿದೆ. ಸರ್ಕಾರದಿಂದಲೇ ಈ ಮಾರಾಟ ಪ್ರಕ್ರಿಯೆ ನಡೆಯಲಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಇಷ್ಟು ಕಡಿಮೆ ದರದಲ್ಲಿ ಮನೆಗಳನ್ನು ನೀಡಲಾಗುತ್ತಿದೆ.

ಖಾಲಿ ಬಿದ್ದಿರುವ ಹಳ್ಳಿಗಳ ಹಳೆಯ ಮನೆಗಳನ್ನು ಮಾರಾಟಕ್ಕೆ ಇಡುವ ಮೂಲಕ ಮತ್ತು ತೀರಾ ಹಳೆಯದಾದ ಮನೆಗಳನ್ನು ಕೆಡವಿ ಅಲ್ಲಿ ಹೊಸ ಮನೆಗಳನ್ನು ನಿರ್ಮಿಸುವ ಮೂಲಕ ಖರೀದಿದಾರರಿಗೆ ಅಗ್ಗದ ಬೆಲೆಯಲ್ಲಿ ಮನೆಳು ಸಿಗುವಂತೆ ಮಾಡಲಾಗುತ್ತಿದೆ. ರೋಮ್​ನಿಂದ 70 ಕಿ.ಮೀ. ದೂರದಲ್ಲಿದೆ ಈ ಊರಿದೆ. ಇದಕ್ಕೆ ಒಂದು ಕಂಡೀಷನ್ ಕೂಡ ಇದೆ. ಮನೆಗಳಿಗೆ 1 ಯುರೋ ಮಾತ್ರ ಇದ್ದರೂ ಆ ಮನೆಗಳನ್ನು ಖರೀದಿಸುವ ಮುನ್ನ 5,000 ಯುರೋಗಳನ್ನು ಡೆಪಾಸಿಟ್ ಆಗಿ ಇಡಬೇಕು. ಮನೆಗಳನ್ನು ಮರುನವೀಕರಣ ಮಾಡಿದ ನಂತರ ಆ ಹಣವನ್ನು ವಾಪಾಸ್ ನೀಡಲಾಗುವುದು.

ಗ್ರಾಹಕರು ಈ ಊರಿನಲ್ಲಿ ತಾವು ಖರೀದಿಸುವ ಮನೆಗಳಲ್ಲಿ ಉಳಿದುಕೊಳ್ಳಲೇಬೇಕೆಂಬ ನಿಯಮವಿಲ್ಲ. ಅಲ್ಲಿ ಅವರು ರೆಸ್ಟೋರೆಂಟ್, ಅಂಗಡಿ ಏನು ಬೇಕಾದರೂ ತೆರೆಯಬಹುದು. ಈ ಮೂಲಕ ಆ ಗ್ರಾಮಗಳು ಅಭಿವೃದ್ಧಿ ಕಾಣಬೇಕೆಂಬುದು ಅಲ್ಲಿನ ಸ್ಥಳೀಯ ಸರ್ಕಾರದ ಉದ್ದೇಶ. ಹಳ್ಳಿಗಳಲ್ಲಿ ಜನಸಂಖ್ಯೆ ತೀರಾ ಕಡಿಮೆ ಆಗುತ್ತಿರುವುದರಿಂದ ಹಳ್ಳಿಗಳನ್ನು ಕೂಡ ಪ್ರವಾಸಿ ತಾಣವನ್ನಾಗಿ ಮಾಡಿ, ಅಲ್ಲಿ ಜನರ ವಾಸ್ತವ್ಯ ಪ್ರಮಾಣವನ್ನು ಹಾಗೂ ಹೂಡಿಕೆಯನ್ನು ಹೆಚ್ಚಿಸಬೇಕೆಂಬ ಕಾರಣದಿಂದ ಅಲ್ಲಿನ ಸರ್ಕಾರ ಕಳೆದ ವರ್ಷದಿಂದ 1 ಯುರೋ ಹೌಸಿಂಗ್ ಯೋಜನೆ (87 ರೂ.ಗೆ ಮನೆ ನೀಡುವ ಯೋಜನೆ) ಜಾರಿಗೆ ತಂದಿದೆ.

ಇದನ್ನೂ ಓದಿ: Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!

Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ

(Viral News: Houses For Sale At 87 Rs In This Italian Village Looking for House Check this Interesting News)

Published On - 3:18 pm, Tue, 24 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್