ಅಮಾಯಕರನ್ನು ಕೊಲ್ಲುವುದೇ ಗುರಿಯಾಗಿಸಿಕೊಂಡಿರುವ ಐಸಿಸ್-ಕೆ ಅಮೇರಿಕದ ಕೆಂಗಣ್ಣಿಗೆ ಗುರಿಯಾಗಿದೆ!
ಐಸಿಸ್ ಸಂಘಟನೆಯೇ ಒಂದು ಪ್ರಖರ ಮೂಲಭೂತವಾದಿಗಳ ಸಂಘಟನೆಯಾದರೆ ಖೊರಾಸಾನ್ ಇನ್ನೂ ಭೀಕರ ಸ್ವರೂಪದ ಅದರ ಅಂಗವಾಗಿದೆ. ಇಡೀ ವಿಶ್ವವನ್ನೇ ಇಸ್ಲಾಮೀಕರಣ ಮಾಡಬೇಕು ಎಂದು ಪಣತೊಟ್ಟಿರುವ ಸದಸ್ಯರ ಗುಂಪು ಇದಾಗಿದೆ.
ಅಮಾಯಕರು, ಮಹಿಳೆಯರು ಮತ್ತು ಮಕ್ಕಳ ನೆತ್ತರನ್ನು ಹರಿಸುವ ರಾಕ್ಷಸೀ ಪ್ರವೃತ್ತಿಯ ಐಸಿಸ್ನ ಖೊರಾಸಾನ್ ವಿಭಾಗ (ಐಸಿಸ್-ಕೆ) ಎಂಬ ಮತಾಂಧ ಮತ್ತು ಉಗ್ರ ಮೂಲಭೂತವಾದಿಗಳ ಸಂಘಟನೆ ಎರಡು ದಿನಗಳ ಹಿಂದೆ; ತಾಲಿಬಾನಿ ಉಗ್ರರಿಂದ ತಪ್ಪಿಸಿಕೊಂಡು ಬೇರೆ ದೇಶಕ್ಕೆ ಹೋಗಲು ತಮ್ಮ ಸರದಿಗಾಗಿ ಕಾಯುತ್ತಿದ್ದ ಜನರ ಮೇಲೆ ವಿನಾಕಾರಣ ಆತ್ಮಾಹುತಿ ಬಾಂಬ್ ದಾಳಿ ಸುಮಾರು 200 ಜನರನ್ನು ಕೊಂದಿದೆ. ಇದರಲ್ಲಿ ಅಮೇರಿಕನ್ನರೂ ಸೇರಿದ್ದಾರೆ. ದಾಳಿ ಮಾಡಿದವರನ್ನು ಹೆಕ್ಕಿ ಹೆಕ್ಕಿ ಕೊಂದು ಹಾಕುತ್ತೇವೆ ಅಂತ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಗುಡುಗಿದ್ದಾರೆ. ಅವರಿಗದು ಸಾಧ್ಯವೂ ಹೌದು. ಪಾಕಿಸ್ತಾನದಲ್ಲಿ ಅಡಗಿ ಕೂತಿದ್ದ ಒಸಾಮಾ ಬಿನ್ ಲಾಡೆನ್ ನನ್ನೂ ಅಮೇರಿಕ ಪತ್ತೆ ಹಚ್ಚಿ ಕೊಂದಿತ್ತು.
ಐಸಿಸ್ ಸಂಘಟನೆಯೇ ಒಂದು ಪ್ರಖರ ಮೂಲಭೂತವಾದಿಗಳ ಸಂಘಟನೆಯಾದರೆ ಖೊರಾಸಾನ್ ಇನ್ನೂ ಭೀಕರ ಸ್ವರೂಪದ ಅದರ ಅಂಗವಾಗಿದೆ. ಇಡೀ ವಿಶ್ವವನ್ನೇ ಇಸ್ಲಾಮೀಕರಣ ಮಾಡಬೇಕು ಎಂದು ಪಣತೊಟ್ಟಿರುವ ಸದಸ್ಯರ ಗುಂಪು ಇದಾಗಿದೆ. ಮುಸ್ಲಿಮೇತರನ್ನು ಬಲವಂತದಿಂದ, ಹಿಂಸೆಯ ಮೂಲಕ, ಮಹಿಳೆಯರಾಗಿದ್ದರೆ ಅವರ ಮೇಲೆ ಅತ್ಯಾಚಾರ ನಡೆಸಿ ಇಸ್ಲಾಂಗೆ ಮತಾಂತರಗೊಳಿಸುವುದೇ ಇವರ ಬದುಕಿನ ಏಕಮೇವ ಗುರಿ. ಐಸಿಸ್-ಕೆ ಅಂಗವನ್ನು ಹುಟ್ಟುಹಾಕಿದ್ದು ಒಬ್ಬ ಪಾಕಿಸ್ತಾನಿ ಎಂದು ಹೇಳಲಾಗುತ್ತಿದ್ದು ಇದರಲ್ಲಿ ಸುಮಾರು 2,000 ಜನರರಿಬಹುದೆಂದು ಊಹಿಸಲಾಗಿದೆ.
ಹಾಗೆ ನೋಡಿದರೆ, ತಮ್ಮಂತೆಯೇ ಉಗ್ರ ಮೂಲಭೂತವಾದಿಗಳಾಗಿರುವ ತಾಲಿಬಾನಿಗಳಿಗೆ ಐಸಿಸ್-ಕೆ ಸದಸ್ಯರು ಸ್ನೇಹಿತರಲ್ಲ. ಹಿಂದೆ ಈ ಎರಡು ಸಂಘಟನೆಗಳ ನಡುವೆ ಸಂಘರ್ಷಗಳು ನಡೆದಿವೆ. ಗಮನಿಸಬೇಕಿರುವ ಸಂಗತಿಯೆಂದರೆ ತಾಲಿಬಾನ್ ಹಾಗೆ ಅಪಘಾನಿಸ್ತಾನದ ಮೇಲೆ ಪ್ರಭುತ್ವ ಸಾಧಿಸ ಬೇಕೆಂಬ ಹುಚ್ಚು ಇರಾದೆಯೂ ಐಸಿಸ್-ಕೆಗೆ ಇದೆ.
ಇದನ್ನೂ ಓದಿ: Crime News: ನಡುರಸ್ತೆಯಲ್ಲಿ ವೃದ್ಧನ ಅಡ್ಡಗಟ್ಟಿ ದರೋಡೆ; ಸಿಸಿಟಿವಿ ವಿಡಿಯೋ ವೈರಲ್