ಪಂಜಶೀರ್ ಈಗಲೂ ಭೇದಿಸಲಾಗದ ಪ್ರದೇಶವೇ, ಅವರ ಪರಾಕ್ರಮದ ಎದುರು ಬಾಲ ಬಿಚ್ಟಲಾಗುತ್ತಿಲ್ಲ ತಾಲಿಬಾನಿಗಳಿಗೆ!

ಪಂಜಶೀರ್ ಈಗಲೂ ಭೇದಿಸಲಾಗದ ಪ್ರದೇಶವೇ, ಅವರ ಪರಾಕ್ರಮದ ಎದುರು ಬಾಲ ಬಿಚ್ಟಲಾಗುತ್ತಿಲ್ಲ ತಾಲಿಬಾನಿಗಳಿಗೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 29, 2021 | 12:18 AM

90 ರ ದಶಕದಲ್ಲಿ ತಾಲಿಬಾನ್ ಆಡಳಿತವನ್ನು ವಿರೋಧಿಸಿದಂತೆಯೇ 80 ರ ದಶಕದಲ್ಲಿ ಆಡಳಿತ ನಡೆಸಿದ್ದ ರಷ್ಯಾವನ್ನು ಸಹ ಪಂಜ್ಶೀರ್ ವಿರೋಧಿಸಿತ್ತು. ಕಾಬೂಲ್ ನಗರದಿಂದ ಸುಮಾರು 150 ಕಿಮೀ ದೂರವಿರುವ ಪಂಜಶೀರ್ ತಾಜಿಕ್ ಜನಾಂಗದ ಜನರ ವಾಸ್ತವ್ಯವಾಗಿದೆ.

ತಾಲಿಬಾನಿಗಳು ಒಂದಿಷ್ಟೂ ಶ್ರಮಪಡದೆ ಕಾಬೂಲ್ ನಗರವನ್ನು ವಶಪಡಿಸಿಕೊಂಡು ಬೀಗಿದರು. ಆದರೆ ಅಪಘಾನಿಸ್ತಾನದ ಆಗ್ನೇಯ ಭಾಗಕ್ಕಿರುವ ಪಂಜಶೀರ್ ಕಣಿವೆಯನ್ನು ವಶಪಡಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಈ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ದುಸ್ಸಾಹಸವನ್ನಂತೂ ತಾಲಿಬಾನ್ ಮಾಡುತ್ತಿದೆ. ಆದರೆ ಸ್ವಭಾವತಃ ಶೂರರು, ಪರಾಕ್ರಮಿಗಳು ಮತ್ತು ಕೊನೆಯುಸಿರಿನವರೆಗೆ ಹೋರಾಡುವರೂ ಆಗಿದ್ದಾರೆ. ಪಂಜಶೀರ್ ಸುತ್ತಲಿನ ಭಾಗಗಳನ್ನು ವಶಪಡಿಸಿಕೊಳ್ಳುತ್ತಾ ಮುಂದೆ ಸಾಗುತ್ತಿರುವ ತಾಲಿಬಾನಿಗಳನ್ನು ಪಂಜಶೀರ್ ಜನ ಹಿಮ್ಮೆಟ್ಟಿಸಿತ್ತಿದ್ದಾರೆ ಅವರ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಈ ವಿಡಿಯೋನಲ್ಲಿ ನಿಮಗೊಂದು ಯುದ್ಧ ಟ್ಯಾಂಕರ್ ಕಾಣಿಸುತ್ತಿದೆ. ಅದನ್ನು ಪಂಜಶೀರ್ ಜನ ತಾಲಿಬಾನ್ ಉಗ್ರರಿಂದ ವಶಪಡಿಸಿಕೊಂಡಿದ್ದಾರೆ. ಅಫಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ, ದೇಶದ ಜನರಿಗೆ ಸಾಯುವರೆಗೆ ಹೋರಾಡುವ ಭರವಸೆ ನೀಡಿದ್ದರು. ಆದರೆ, ತಾಲಿಬಾನಿಗಳು ಕಾಬೂಲ ನಗರ ಪ್ರವೇಶಿಸುತ್ತಿದ್ದಂತೆ ಗಂಟುಮೂಟೆ ಕಟ್ಟಿಕೊಂಡು ಪರಾರಿಯಾದರು. ಉಪಾಧ್ಯಕ್ಷರಾಗಿರುವ ಅಮ್ರುಲ್ಲಾಹ್ ಸಾಲೆಹ್ ಪಂಜಶೀರ್ನವರಾಗಿದ್ದು ತಮ್ಮ ಪ್ರಾಂತ್ಯಕ್ಕೆ ವಾಪಸ್ಸಾಗಿದ್ದಾರೆ. ಸಾಲೆಹ್ ತಾಲಿಬಾನ್ ಕಟ್ಟಾ ವಿರೋಧಿಯಾಗಿದ್ದಾರೆ.

90 ರ ದಶಕದಲ್ಲಿ ತಾಲಿಬಾನ್ ಆಡಳಿತವನ್ನು ವಿರೋಧಿಸಿದಂತೆಯೇ 80 ರ ದಶಕದಲ್ಲಿ ಆಡಳಿತ ನಡೆಸಿದ್ದ ರಷ್ಯಾವನ್ನು ಸಹ ಪಂಜ್ಶೀರ್ ವಿರೋಧಿಸಿತ್ತು. ಕಾಬೂಲ್ ನಗರದಿಂದ ಸುಮಾರು 150 ಕಿಮೀ ದೂರವಿರುವ ಪಂಜಶೀರ್ ತಾಜಿಕ್ ಜನಾಂಗದ ಜನರ ವಾಸ್ತವ್ಯವಾಗಿದೆ. ಕಳೆದ 4 ದಶಕಗಳಿಂದ ಜಾರಿಯಲ್ಲಿರುವ ನಾಗರಿಕ ಯುದ್ಧ ಮತ್ತು ತಾಲಿಬಾನ್ ಬಂಡುಕೋರರ ದಾಳಿಯ ನಡುವೆ ಪಂಜಶೀರ್ ಯಾವುದಕ್ಕೂ ಹೆದರದೆ, ಜಗ್ಗದೆ, ಬಗ್ಗದೆ ಅವೆಲ್ಲವನ್ನು ವಿರೋಧಿಸುತ್ತಾ ಬಂದಿದೆ.

ಈ ಕಣಿವೆ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ತಾಲಿಬಾನ್ 20 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಇದುವರೆಗೆ ಸಾಧ್ಯವಾಗಿಲ್ಲ ಮುಂದೆಯೂ ಸಾಧ್ಯವಾಗಲಾರದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  ಚೆಂದುಳ್ಳಿ ಚೆಲುವೆ ಅನನ್ಯಾ ಪಾಂಡೆಗೆ ಕಪ್ಪು ಉಡುಗೆ ಅಂದರೆ ಬಹಳ ಇಷ್ಟವಂತೆ, ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತದೆ!

Published on: Aug 29, 2021 12:10 AM