Recipe of the day: ಟೊಮೆಟೋದಲ್ಲೂ ಕುರ್ಮಾ ತಯಾರಿಸಬಹುದು
ಟೊಮೆಟೋ ಕುರ್ಮಾ 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಟೊಮೆಟೋ ಕುರ್ಮಾ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಲಾಕ್ಡೌನ್ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್, ನಿಪ್ಪಟ್ಟು, ಬಜ್ಜಿ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಟೊಮೆಟೋ ಕುರ್ಮಾ 10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಟೊಮೆಟೋ ಕುರ್ಮಾ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಟೊಮೆಟೋ ಕುರ್ಮಾ ಮಾಡಲು ಬೇಕಾಗುವ ಸಾಮಾಗ್ರಿಗಳು ಈರುಳ್ಳಿ, ಕಡಲೆಕಾಯಿ, ಕೊತ್ತಂಬರಿ ಸೊಪ್ಪು, ಅಡುಗೆ ಎಣ್ಣೆ, ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲಾ, ಅರಿಶಿಣ ಪುಡಿ, ಟೊಮೆಟೋ, ಕರಿ ಮೆಣಸು, ದಾಲ್ಚಿನ್ನಿ, ಈರುಳ್ಳಿ, ಕರಿ ಬೇವು, ಹಸಿಮೆಣಸು, ಜೀರಿಗೆ.
ಟೊಮೆಟೋ ಕುರ್ಮಾ ಮಾಡುವ ವಿಧಾನ
ಮೊದಲು ಕರಿ ಮೆಣಸು, ದಾಲ್ಚಿನ್ನಿ, ಈರುಳ್ಳಿ, ಕರಿ ಬೇವು, ಹಸಿಮೆಣಸು, ಜೀರಿಗೆ ಹಾಕಿ ಪೇಸ್ಟ್ ರೀತಿಯಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಒಂದು ಬಣಾಲೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಈರುಳ್ಳಿ, ರುಬ್ಬಿದ ಮಿಶ್ರಣ ಹಾಕಿ. ಬಳಿಕ, ಉಪ್ಪು, ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲಾ, ಅರಿಶಿಣ ಪುಡಿ, ಟೊಮೆಟೋ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಕೊತ್ತಂಬರಿ ಸೊಪ್ಪು ಹಾಕಿದರೆ ಬಿಸಿ ಬಿಸಿ ಟೊಮೆಟೋ ಕುರ್ಮಾ ಸವಿಯಲು ಸಿದ್ಧ.
ಇದನ್ನೂ ಓದಿ:
ಮೈಸೂರು ಸ್ಪೆಷಲ್ ಬಜ್ಜಿ; ಸಂಜೆ ಸ್ನ್ಯಾಕ್ಸ್ಗೆ ಮಾಡಿ ಸವಿಯಿರಿ
ಚೀಸಿ ಕ್ರಂಚಿ ಬ್ರೆಡ್ ರೋಸ್ಟ್ ಮಾಡೋದು ಹೇಗೆ ಗೊತ್ತಾ? ರುಚಿಕರವಾದ ತಿಂಡಿ ತಯಾರಿಸಿ ರುಚಿ ಸವಿಯಿರಿ