‘ಮಹಿಳೆ ಧರಿಸುವ ಉಡುಪುಗಳು ರೇಪ್ಗೆ ಕಾರಣ ಅಲ್ಲ’: ಗ್ಯಾಂಗ್ ರೇಪ್ ಪ್ರಕರಣಕ್ಕೆ ಕವಿತಾ ಲಂಕೇಶ್ ಪ್ರತಿಕ್ರಿಯೆ
ನಿರ್ದೇಶಕಿ ಕವಿತಾ ಲಂಕೇಶ್ ಅವರು ಮೈಸೂರು ಸಾಮೂಹಿಕ ಅತ್ಯಾಚಾರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ‘ಯುವತಿಗೆ ನ್ಯಾಯ ಸಿಗಬೇಕು. ಹೋರಾಟಕ್ಕೆ ನಾವೆಲ್ಲ ಇದ್ದೇನೆ’ ಎಂದು ಅವರು ಹೇಳಿದ್ದಾರೆ.
ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಿಂದ ಇಡೀ ಸಮಾಜವೇ ತಲೆ ತಗ್ಗಿಸಬೇಕಾಗಿದೆ. ಈ ಘಟನೆ ಕುರಿತು ಅನೇಕ ಅಭಿಪ್ರಾಯಗಳು ಕೇಳಿಬರುತ್ತಿವೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹಲವು ಸೆಲೆಬ್ರಿಟಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ. ನಿರ್ದೇಶಕಿ ಕವಿತಾ ಲಂಕೇಶ್ ಕೂಡ ಸಾಮೂಹಿಕ ಅತ್ಯಾಚಾರದ ಈ ದುರ್ಘಟನೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದು, ‘ಮಹಿಳೆ ಧರಿಸುವ ಉಡುಪುಗಳು ರೇಪ್ಗೆ ಕಾರಣ ಅಲ್ಲ’ ಎಂದಿದ್ದಾರೆ. ಸಂಪ್ರದಾಯಸ್ಥ ಹೆಣ್ಣುಮಕ್ಕಳು ಭಯಪಡುತ್ತಾರೆ. ಅವರು ಫೈಟ್ ಮಾಡುವುದಿಲ್ಲ. ಅಂಥವರ ಮೇಲೆ ದಬ್ಬಾಳಿಕೆ ಮಾಡಬಹುದು ಎಂಬ ಕಲ್ಪನೆ ಹಲವರ ತಲೆಯಲ್ಲಿ ಇದೆ. ಅದೇ ಕಾರಣಕ್ಕಾಗಿ ಅಂಥ ಹುಡುಗಿಯರ ಮೇಲೆ ಅತ್ಯಾಚಾರಗಳು ಆಗುತ್ತವೆ ಎಂದು ಕವಿತಾ ಅಭಿಪ್ರಾಯಪಟ್ಟಿದ್ದಾರೆ.
ಗ್ಯಾಂಗ್ ರೇಪ್ ಕುರಿತಂತೆ ನಟಿ ರಮ್ಯಾ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ದೀರ್ಘವಾದ ಒಂದು ಪೋಸ್ಟ್ ಮಾಡಿದ್ದರು. ರಮ್ಯಾ ಮಾತುಗಳು ಸರಿಯಾಗಿವೆ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಆಗಲಿ ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಗ್ಯಾಂಗ್ ರೇಪ್: ಹುಡುಗಿಯದ್ದೇ ತಪ್ಪು ಅನ್ನೋರಿಗೆ ರಮ್ಯಾ ಛೀಮಾರಿ; ಪರಿಸ್ಥಿತಿ ಬದಲಾಗ್ಬೇಕು ಎಂದ ನಟಿ
‘ನಾಳೆ ನಮ್ಮ-ನಿಮ್ಮೆಲ್ಲರ ತಂಗಿ-ತಾಯಿಗೂ ಹೀಗಾಗಬಹುದು; ಎಚ್ಚೆತ್ತುಕೊಳ್ಳಿ’: ಮೈಸೂರು ಗ್ಯಾಂಗ್ ರೇಪ್ಗೆ ಅದಿತಿ ಆಕ್ರೋಶ