‘ನಾಳೆ ನಮ್ಮ-ನಿಮ್ಮೆಲ್ಲರ ತಂಗಿ-ತಾಯಿಗೂ ಹೀಗಾಗಬಹುದು; ಎಚ್ಚೆತ್ತುಕೊಳ್ಳಿ’: ಮೈಸೂರು​ ಗ್ಯಾಂಗ್ ರೇಪ್​ಗೆ ಅದಿತಿ ಆಕ್ರೋಶ

‘ನಾಳೆ ನಮ್ಮ-ನಿಮ್ಮೆಲ್ಲರ ತಂಗಿ-ತಾಯಿಗೂ ಹೀಗಾಗಬಹುದು; ಎಚ್ಚೆತ್ತುಕೊಳ್ಳಿ’: ಮೈಸೂರು​ ಗ್ಯಾಂಗ್ ರೇಪ್​ಗೆ ಅದಿತಿ ಆಕ್ರೋಶ

TV9 Web
| Updated By: ಮದನ್​ ಕುಮಾರ್​

Updated on: Aug 27, 2021 | 9:24 AM

Mysore Gang Rape: ‘ಈ ಘಟನೆ ನೋಡಿದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಗೊತ್ತಾಗುವುದಿಲ್ಲ. ತುಂಬ ಬೇಜಾರಾಗುತ್ತದೆ. ಸಿಟ್ಟು ಬರುತ್ತದೆ. ದುಃಖ ಆಗುತ್ತದೆ’ ಎಂದು ಓಲ್ಡ್​ ಮಾಂಕ್​ ಸಿನಿಮಾ ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ.

ಪದೇಪದೇ ನಡೆಯುತ್ತಿರುವ ಗ್ಯಾಂಗ್​ ರೇಪ್​ (Gang Rape) ಪ್ರಕರಣಗಳು ಸಮಾಜವನ್ನು ಆತಂಕಕ್ಕೆ ತಳ್ಳುತ್ತಿವೆ. ಈ ಬಗ್ಗೆ ಕನ್ನಡದ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಖಂಡಿತವಾಗಿಯೂ ಇದೊಂದು ದುರಂತ. ಗ್ಯಾಂಗ್​ ರೇಪ್​ ಜೊತೆಗೆ ಮಹಿಳೆಯರಿಗೆ ಹಲವು ಬಗೆಯಲ್ಲಿ ಕಿರುಕುಳು ನೀಡುವುದು ನಡೆಯುತ್ತಲೇ ಇದೆ. ಸೆಲೆಬ್ರಿಟಿಯಾದ ನನಗೆ ಜನರು ಮಾಡುವ ಕಮೆಂಟ್​ ನೋಡಿದರೆ, ಅವರು ಎದುರು ಬಂದರೆ ನಾನೇನು ಮಾಡುತ್ತೇನೋ ಗೊತ್ತಿಲ್ಲ. ಎಲ್ಲ ಹೆಣ್ಮಕ್ಕಳು ಸ್ಟ್ರಾಂಗ್​ ಆಗಬೇಕು. ಅಸಹಾಯಕ ಸ್ಥಿತಿಗೆ ತಲುಪಿದ್ದೇವೆ ಎಂಬ ಬೇಸರ ಆಗುತ್ತದೆ’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.

‘ಒಬ್ಬರು ಕೆಟ್ಟ ಮಾತು ಆಡಿದಾಗ ಅದನ್ನು ನೂರಾರು ಜನರು ವಿರೋಧಿಸಬೇಕು. ಅಲ್ಲಿಂದ ನಿಧಾನವಾಗಿ ನಮ್ಮ ಸಮಾಜವನ್ನು ತಿದ್ದಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನೂ ಕೆಟ್ಟುಹೋಗುತ್ತದೆ. ಇಂದು ಬೇರೆಯವರ ತಾಯಿ-ತಂಗಿಗೆ ಆಗಿರುವುದು ನಾಳೆ ನಮ್ಮ-ನಿಮ್ಮ ತಾಯಿ-ತಂಗಿಯರಿಗೆ ಆಗುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಸಂಸ್ಕಾರದಿಂದ ವರ್ತನೆ ಮಾಡುವುದನ್ನು ಕಲಿಯಬೇಕು’ ಎಂದು ಅದಿತಿ ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್​​ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್​ ಮಾಂಕ್​’ ಟ್ರೇಲರ್​; ಇದರಲ್ಲಿದೆ ಹತ್ತಾರು ವಿಶೇಷತೆ

ಆಟೋ ಹತ್ತಿದ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌.. ಕೃತ್ಯ ಎಸಗಿ ರಸ್ತೆ ಬದಿ ಬೆತ್ತಲೆ ಬಿಸಾಡಿ ಹೋದ ಕೀಚಕರು