AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್​​ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್​ ಮಾಂಕ್​’ ಟ್ರೇಲರ್​; ಇದರಲ್ಲಿದೆ ಹತ್ತಾರು ವಿಶೇಷತೆ

Old Monk Trailer: ನಟ-ನಿರ್ದೇಶಕ ಶ್ರೀನಿ ಅವರು ‘ಓಲ್ಡ್​ ಮಾಂಕ್​’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.

ಪುನೀತ್​​ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್​ ಮಾಂಕ್​’ ಟ್ರೇಲರ್​; ಇದರಲ್ಲಿದೆ ಹತ್ತಾರು ವಿಶೇಷತೆ
ಪುನೀತ್​​ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್​ ಮಾಂಕ್​’ ಟ್ರೇಲರ್​
TV9 Web
| Edited By: |

Updated on: Aug 27, 2021 | 8:56 AM

Share

ಹೊಸಬರ ಪ್ರಯತ್ನಗಳಿಗೆ ನಟ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಸದಾ ಬೆನ್ನು ತಟ್ಟುತ್ತಾರೆ. ಟ್ರೇಲರ್​, ಟೀಸರ್​, ಪೋಸ್ಟರ್​ ಬಿಡುಗಡೆ ಮುಂತಾದ ಕಾರ್ಯಕ್ರಮಗಳಿಗೆ ಬಂದು ಶುಭ ಹಾರೈಸುತ್ತಾರೆ. ಅದೇ ರೀತಿ ಈಗ ಅವರು ‘ಓಲ್ಡ್​ ಮಾಂಕ್​’ ಚಿತ್ರದ ಟ್ರೇಲರ್​ (Old Monk Trailer) ಬಿಡುಗಡೆ ಕಾರ್ಯಕ್ರಮಕ್ಕೆ ಬಂದು ಶುಭಕೋರಿದ್ದಾರೆ. ಅಲ್ಲದೇ, ಈ ಟ್ರೇಲರ್​ ನೋಡಿ ಮನಸಾರೆ ನಕ್ಕಿದ್ದಾರೆ. ಚಿತ್ರದ ಶೀರ್ಷಿಕೆ ‘ಓಲ್ಡ್​ ಮಾಂಕ್​’ ಎಂದಿದ್ದರೂ ಇದು ಅಪ್ಪಟ ಕನ್ನಡದ ಸಿನಿಮಾ. ಸದ್ಯ ಈ ಟ್ರೇಲರ್​ ಮೋಡಿ ಮಾಡುತ್ತಿದೆ.

ಪುನೀತ್​ ರಾಜ್​ಕುಮಾರ್​ ಅವರು ಗುರುವಾರ (ಆ.26) ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದರು. ಟ್ರೇಲರ್​ ನೋಡಿದ ಅವರು ಮನಸಾರೆ ನಕ್ಕಿದ್ದಾರೆ. ಈ ಚಿತ್ರತಂಡದ ಕ್ರಿಯೇಟಿವಿಟಿಗೆ ಅವರು ಸಲಾಂ ಎಂದಿದ್ದಾರೆ. ಹಾಗಾದರೆ ಇದರಲ್ಲಿ ಅಂಥದ್ದೇನಿದೆ? ಟೈಟಲ್​ ಕಾರ್ಡ್​ನಿಂದಲೇ ಇದು ಎಲ್ಲರ ಗಮನ ಸೆಳೆದುಕೊಳ್ಳುತ್ತದೆ. ಇದರಲ್ಲಿ ಅವತಾರ್​, ಕೆಜಿಎಫ್​, ಆರ್​ಆರ್​ಆರ್​, ಟೈಟಾನಿಕ್​ ಸಿನಿಮಾ ಹೆಸರುಗಳ ಜೊತೆ ರಣವೀರ್​ ಸಿಂಗ್​, ಉಪೇಂದ್ರ, ಎ.ಆರ್​. ರೆಹಮಾನ್​ ಮುಂತಾದವರ ಹೆಸರುಗಳು ಕೂಡ ರಾರಾಜಿಸುತ್ತಿವೆ. ಅದು ಹೇಗೆ ಎಂಬುದನ್ನು ಟ್ರೇಲರ್​ ನೋಡಿ ತಿಳಿದಾಗಲೇ ಮಜಾ.

ನಟ-ನಿರ್ದೇಶಕ ಶ್ರೀನಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಸುಜಯ್​ ಶಾಸ್ತ್ರಿ, ಎಸ್​. ನಾರಾಯಣ್​, ಸಿಹಿ ಕಹಿ ಚಂದ್ರು ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಭರತ್​ ಪರಶುರಾಮ್​ ಛಾಯಾಗ್ರಹಣ, ಸೌರಭ್​-ವೈಭವ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್​ ಸಂಕಲನ ಮಾಡಿದ್ದಾರೆ. ಪ್ರದೀಪ್ ಶರ್ಮಾ, ಸೃಜನ್​ ಯರಬೋಲು, ಸೌರಭ್​-ವೈಭವ್, ಶ್ರೀನಿ ಜೊತೆಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಫ್ರೆಶ್​ ಎನಿಸುವ ಕಾನ್ಸೆಪ್ಟ್​, ಕಚಗುಳಿ ಇರುವ ಡೈಲಾಗ್​ಗಳು, ಹಿರಿಯ-ಕಿರಿಯ ಕಲಾವಿದರ ಸಂಗಮ, ಚುರುಕಾದ ನಿರೂಪಣೆ ಮೂಲಕ ‘ಓಲ್ಡ್​ ಮಾಂಕ್​’ ಟ್ರೇಲರ್​ ಎಲ್ಲರಿಗೂ ಇಷ್ಟ ಆಗುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇದು ಲಕ್ಷಾಂತರ ವೀವ್ಸ್​ ಪಡೆದುಕೊಂಡಿದೆ. ಈ ಹಿಂದೆ ‘ಟೋಪಿವಾಲಾ’, ‘ಬೀರ್​ಬಲ್​’, ‘ಶ್ರೀನಿವಾಸ ಕಲ್ಯಾಣ’ ಮುಂತಾದ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಇಷ್ಟ ಆಗಿರುವ ಶ್ರೀನಿ ಅವರು ಈಗ ‘ಓಲ್ಡ್​ ಮಾಂಕ್​’ ಮೂಲಕ ಭರ್ಜರಿಯಾಗಿ ಮನರಂಜಿಸುವ ಭರವಸೆಯನ್ನು ಈ ಟ್ರೇಲರ್​ ಮೂಲಕ ನೀಡಿದ್ದಾರೆ.

ಇದನ್ನೂ ಓದಿ:

ಪುನೀತ್​ ನಿರ್ಮಾಣದ ‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರದಲ್ಲಿ ವಾಸುಕಿ ವೈಭವ್; ಏನಿದು ಗುಡ್​ ನ್ಯೂಸ್​?

ಪೋಸ್ಟರ್​ ಕಾಪಿ ಎಂಬ ಆರೋಪಕ್ಕೆ ಪುನೀತ್​ ನಟನೆಯ ‘ದ್ವಿತ್ವ’ ಚಿತ್ರ ತಂಡದಿಂದ ಸ್ಪಷ್ಟನೆ

Follow Us
TV9 Web
TV9 Web

TV9 Kannada

Read More
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ